ಡೊನಾಲ್ಡ್‌ ಟ್ರಂಪ್‌ಗೆ ಥರ್ಡ್‌ ಚಾನ್ಸ್‌ ಸಾಧ್ಯವೇ?


Team Udayavani, Jan 2, 2023, 6:05 AM IST

ಡೊನಾಲ್ಡ್‌ ಟ್ರಂಪ್‌ಗೆ ಥರ್ಡ್‌ ಚಾನ್ಸ್‌ ಸಾಧ್ಯವೇ?

ಡೊನಾಲ್ಡ್‌ ಜಾನ್‌ ಟ್ರಂಪ್‌ ಹೀಗೆಂದು ಹೇಳಿದರೆ ಯಾರಿಗೂ ಅರ್ಥವಾಗದು. ಡೊನಾಲ್ಡ್‌ ಟ್ರಂಪ್‌ ಎಂದರೆ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಕುತೂಹಲ ಹಾಗೂ ಆಸಕ್ತಿ ಇರುವವರಿಗೆ ಯಾರು ಎನ್ನುವುದು ಅರ್ಥವಾದೀತು. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನು ಇರುವುದು ಸರಿಯಾಗಿ ಒಂದೇ ವರ್ಷ. 2024ರ ನವೆಂಬರ್‌-ಡಿಸೆಂಬರ್‌ ಅವಧಿಯಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ನಾನು ಒಬ್ಬ ಅಭ್ಯರ್ಥಿಯೇ ಎಂದು ರಿಪಬ್ಲಿಕನ್‌ ಪಕ್ಷದ ಮುಖಂಡರೂ ಆಗಿರುವ ಅವರು ಕೆಲವು ದಿನಗಳ ಹಿಂದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ ಅವರು ಮತ್ತೆ ಕಣಕ್ಕೆ ಇಳಿಯಲು ಸಾಧ್ಯವೇ ಎಂಬುದರ ಬಗ್ಗೆ ಹಲವು ಕುತೂಹಲಗಳು ಎದ್ದಿವೆ.

ಇತ್ತೀಚೆಗೆ ಮುಕ್ತಾಯವಾದ ಅಮೆರಿಕ ಸಂಸತ್‌ನ ಮಧ್ಯಾಂತರ ಚುನಾವಣೆಯ ಬಳಿಕ ಅಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆಯ ಗುಂಗು ರಿಪಬ್ಲಿಕನ್‌ ಮತ್ತು ಡೆಮಾಕ್ರಾಟಿಕ್‌ ಪಕ್ಷದಲ್ಲಿ ಶುರುವಾಗಿದೆ. ಈ ಪೈಕಿ ಸದ್ಯ ವಿಪಕ್ಷವಾಗಿರುವ ರಿಪಬ್ಲಿಕನ್‌ ಪಕ್ಷದಲ್ಲಿ ಹೆಚ್ಚಾಗಿಯೇ ಗೋಚರಿಸುತ್ತಿದೆ. ಅಮೆರಿಕ ಸಂಸತ್‌ನ ಕೆಳಮನೆ ಹೌಸ್‌ಆಫ್‌ ರೆಪ್ರಸೆಂಟೇಟಿವ್ಸ್‌ನಲ್ಲಿ ರಿಪಬ್ಲಿಕನ್‌ ಪಕ್ಷ 435 ಸ್ಥಾನಗಳ ಪೈಕಿ 222 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಮೇಲ್ಮನೆ ಸೆನೆಟ್‌ನಲ್ಲಿ 100 ಸ್ಥಾನಗಳ ಪೈಕಿ ಆಡಳಿತ ಪಕ್ಷ ಡೆಮಾಕ್ರಾಟಿಕ್‌ ಪಕ್ಷ 51 ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಸಂಸತ್‌ನಲ್ಲಿ ಒಂದು ರೀತಿಯ ಸಮಬಲದ ಫಲಿತಾಂಶ ಪ್ರಕಟವಾಗಿದೆ.

ಇನ್ನು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಾನೇ ಮುಂದಿನ ಅಭ್ಯರ್ಥಿ ಎಂಬ ಕೆಲವು ದಿನಗಳ ಹಿಂದಿನ ಘೋಷಣೆ ಬಗ್ಗೆ ಬರುವುದಿದ್ದರೆ ಕಾನೂನಾತ್ಮಕವಾಗಿ ಅವರಿಗೆ ಕೆಲವೊಂದು ತೊಂದರೆಗಳು ಎದುರಾಗುವ ಸಾಧ್ಯತೆಗಳು ಇವೆ. ಹಿಂದಿನ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬಳಿಕ ಕ್ಯಾಪಿಟಲ್‌ ಹಿಲ್‌ನಲ್ಲಿ ಉಂಟಾದ ಗಲಭೆಯ ಹಿಂದೆ ಡೊನಾಲ್ಡ್‌ ಟ್ರಂಪ್‌ ಅವರ ನೇರ ಬೆಂಬಲ ಇರುವುದು ಗುಟ್ಟಿನ ವಿಚಾರ ಏನೂ ಅಲ್ಲ. ಅವರೇ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದು ಕೂತಿದ್ದರು. ಅವರು ಎರಡು ಬಾರಿ ಅಮೆರಿಕದ ಸಂಸತ್‌ನಲ್ಲಿ ವಾಗ್ಧಂಡನೆಗೆ ಗುರಿಯಾಗಿದ್ದರು.

ಆ ದೇಶದ ಪ್ರಮುಖ ತನಿಖಾ ಸಂಸ್ಥೆ ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಶನ್‌ ನಡೆಸಿದ ತನಿಖೆಯ ಪ್ರಕಾರ ಸರಕಾರಕ್ಕೆ ಸೇರಿದ ಪ್ರಮುಖ ದಾಖಲೆಗಳು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾಸಗಿ ರೆಸಾರ್ಟ್‌ ಮಾರ್‌ – ಎ- ಲಾಗೋದಲ್ಲಿ ಪತ್ತೆಯಾಗಿದ್ದವು. ವಿಶೇಷವಾಗಿ ಅಮೆರಿಕದ ರಕ್ಷಣ ಸಚಿವಾಲಯಕ್ಕೆ ಸಂಬಂಧಿಸಿದಂತೆ ಇರುವ ಪರಮ ರಹಸ್ಯ ಕಡತಗಳು, ಪರಮಾಣು ಶಸ್ತ್ರಾಸ್ತ್ರಗಳನ್ನು ಶೇಖರಿಸಿ ಇರಿಸಿರುವ ಸ್ಥಳ, ಅವುಗಳ ಕೋಡ್‌ಗಳು ಇದ್ದದ್ದು ಪತ್ತೆಯಾಗಿದ್ದವು. ದ ನ್ಯೂಯಾರ್ಕ್‌ ಟೈಮ್ಸ… ಡಿ.15ರಂದು ವರದಿ ಮಾಡಿರುವ ಪ್ರಕಾರ ತನಿಖಾ ಸಂಸ್ಥೆ ವಶಪಡಿಸಿಕೊಂಡಿರುವ 13 ಸಾವಿರ ವಸ್ತುಗಳ ಪೈಕಿ 103 ರಹಸ್ಯ ಮಾಹಿತಿ ಇರುವ ಕಡತಗಳೇ ಇದ್ದವು. 2021ರಲ್ಲಿ ಅವರ ಅಧಿಕಾರ ಮುಕ್ತಾಯಗೊಂಡ ಬಳಿಕ ಕಡತಗಳನ್ನು ಅಮೆರಿಕ ಸರಕಾರದ ಪತ್ರಾಗಾರಕ್ಕೆ ನೀಡಬೇಕಾಗಿತ್ತು.

ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್‌ ಅವರು 2012ರಲ್ಲಿ ಅಧಿಕಾರದ ಅವಧಿ ಮುಕ್ತಾಯಗೊಂಡ ಬಳಿಕ ಅವರು ವಿದೇಶ ಗಳಿಗೆ ಪ್ರವಾಸದ ಅವಧಿಯಲ್ಲಿ ತೆರಳಿದ್ದ ಸಂದರ್ಭದಲ್ಲಿ ಸಿಕ್ಕಿದ್ದ ಉಡುಗೊರೆಗಳನ್ನು ತೆಗೆದುಕೊಂಡು ಹೋಗಿದ್ದುಂಟು. ಆದರೆ ಅವುಗಳನ್ನೆಲ್ಲ ವಾಪಸ್‌ ತೆಗೆದುಕೊಂಡು ಬರಬೇಕು. ಅದು ಭಾರತದ ರಾಷ್ಟ್ರಪತಿಗೆ ಕೊಡಲಾಗಿದ್ದ ಉಡುಗೊರೆಗಳು ಎಂದು ಲಿಖೀತ ಸಂದೇಶ ಅವರಿಗೆ ರವಾನೆಯಾಗಿದ್ದ ಬಳಿಕ ತೆಗೆದುಕೊಂಡುಹೋಗಿದ್ದ ವಸ್ತುಗಳನ್ನು ವಾಪಸ್‌ ಮಾಡಿದ್ದರು.

ಆದರೆ ಟ್ರಂಪ್‌ ಅವರು ಅಂತಹ ಉದಾರತೆಯನ್ನು ತೋರಿಸಲಿಲ್ಲ. ಸದ್ಯ ಅವರ ವಿರುದ್ಧ ತನಿಖೆ ನಡೆಸುತ್ತಿರುವ ಅಮೆರಿಕ ಸಂಸತ್‌ ಸಮಿತಿ ದಂಗೆ, ಅಧಿಕೃತ ಕಲಾಪಕ್ಕೆ ಅಡ್ಡಿ, ಸಂಚು ರೂಪಿಸಿದ ಮೂರು ಗುರುತರ ಅಪರಾಧಗಳನ್ನು ಅವರ ಮೇಲೆ ಹೊರಿಸಲು ಮುಂದಾಗಿದೆ. ಅಮೆರಿಕ ಸರಕಾರದ ಕಾನೂನು ಸಚಿವಾಲಯವು, ಸಂಸತ್‌ ಸಮಿತಿ ನಡೆಸುವ ಯಾವುದೇ ತನಿಖೆ ಯನ್ನು ಪುರಸ್ಕರಿಸುವುದಿಲ್ಲ ಮತ್ತು ಅದರ ಯಾವುದೇ ವರದಿಗ ಳನ್ನು ಸ್ವೀಕರಿಸುವುದಿಲ್ಲ. ಸದ್ಯ ಅದು ಟ್ರಂಪ್‌ ಅವರು ಕ್ಯಾಪಿಟಲ್‌ ಹಿಲ್‌ನಲ್ಲಿ ನಡೆದ ಘಟನೆಯಲ್ಲಿ ಮಾಜಿ ಅಧ್ಯಕ್ಷರು ವಹಿಸಿದ ಪಾತ್ರದ ಬಗ್ಗೆ ಪ್ರತ್ಯೇಕವಾಗಿಯೇ ತನಿಖೆ ನಡೆಸುತ್ತಿದೆ. ಇದೇ ಜ. 6ರಂದು ಮಾಜಿ ಅಧ್ಯಕ್ಷರ ವಿರುದ್ಧ ಅಂತಿಮ ವರದಿ ಸಲ್ಲಿಕೆಯಾಗುವ ಸಾಧ್ಯತೆಗಳು ಅಧಿಕವಾಗಿವೆ.

ನವೆಂಬರ್‌ನಲ್ಲಿ ಮುಕ್ತಾಯಗೊಂಡ ಸಂಸತ್‌ನ ಮಧ್ಯಾಂತರ ಚುನಾವಣೆಯಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷ ಕೆಳಮನೆ ಹಾಗೂ ಮೇಲ್ಮನೆಯಲ್ಲಿ ಭಾರೀ ಬಹುಮತದೊಂದಿಗೆ ಜಯ ಸಾಧಿಸಲಿದೆ ಎಂದು ಕೆಲವು ಸಮೀಕ್ಷೆಗಳಲ್ಲಿ ಅಭಿಪ್ರಾಯಪ ಡಲಾಗಿತ್ತು. ಅಮೆರಿಕದ ಇತಿಹಾಸ ಗಮನಿಸುವುದಿದ್ದರೆ ಅಧಿಕಾರದಲ್ಲಿ ಇರುವ ಪಕ್ಷ ಮಧ್ಯಾಂತರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಿತ್ತು ಮತ್ತು ವಿಪಕ್ಷಕ್ಕೆ ಮುನ್ನಡೆ ಉಂಟಾಗುತ್ತಿತ್ತು. ಆದರೆ ಈ ಬಾರಿ ಹಾಗೆ ಆಗಲಿಲ್ಲ ಎನ್ನುವುದು ಗಮನಾರ್ಹ. ಇದರಿಂದಾಗಿಯೇ 2024ರ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಎರಡೆರಡು ಬಾರಿ ಘೋಷಣೆ ಮಾಡಿಕೊಂಡಿರುವುದು ರಿಪಬ್ಲಿಕನ್‌ ಪಕ್ಷದಲ್ಲಿಯೇ ಭಿನ್ನಮತದ ಅಲೆಗಳನ್ನು ಸೃಷ್ಟಿಸಿದೆ.

ಅಂದ ಹಾಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಈಗ 76 ವರ್ಷ. ಸರಿಯಾಗಿ ಮುಂದಿನ ಎರಡು ವರ್ಷಗಳ ಲೆಕ್ಕಾಚಾರ ಎಂದರೆ 78 ವರ್ಷಗಳು ಪೂರ್ತಿಯಾಗುತ್ತವೆ. ಆ ಅವಧಿಗೆ ಅಮೆರಿಕದ ಮತ್ತು ಜಗತ್ತಿನ ರಾಜಕೀಯ ವಿಚಾರಗಳಲ್ಲಿ ಬದಲಾವಣೆಯೂ ಆಗಿರುವ ಸಾಧ್ಯತೆಗಳು ಇವೆ. ಜತೆಗೆ ಅವರದ್ದೇ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗಳೂ ಬದಲಾವಣೆಯಾದರೆ ಅಚ್ಚರಿ ಇಲ್ಲ. ಸದ್ಯ ಫ್ಲೋರಿಡಾ ಪ್ರಾಂತದ ಗವರ್ನರ್‌ ಆಗಿರುವ ರಾನ್‌ ಡೆ ಸಾಂಟಿಸ್‌ ಈಗ ಮುಂಚೂಣಿಯಲ್ಲಿ ಇರುವ ಉತ್ಸಾಹಿ ಮುಂದಾಳು. ಕಳೆದ ತಿಂಗಳು ಮುಕ್ತಾಯಗೊಂಡ ಮಧ್ಯಾಂತರ ಚುನಾವಣೆಯಲ್ಲಿ ಅವರು 1.5 ಮಿಲಿಯ ಮತಗಳಿಂದ ಮರು ಆಯ್ಕೆಯಾಗಿದ್ದಾರೆ. ಅಮೆರಿಕದ ಫ್ಲೋರಿಡಾ ಪ್ರಾಂತಕ್ಕೆ ಹೇಳುವುದಿದ್ದರೆ ಅತ್ಯಧಿಕ ಅಂತರದ ಆಯ್ಕೆ. ಮೈಕ್‌ ಪೆನ್ಸ್‌, ಮಾಜಿ ಉಪಾಧ್ಯಕ್ಷ ಡಿಕ್‌ ಚೆನಿ ಅವರ ಪುತ್ರಿ ಲಿಜ್‌ ಚೆನಿ, ಕನ್ಸಾಸ್‌ ನ ಸಂಸದ ಮೈಕ್‌ ಪೊಂಪೊ, ಪಂಜಾಬ್‌ ಮೂಲದ ನಿಕ್ಕಿ ಹ್ಯಾಲೆ, ಗ್ಲೆನ್‌ ಯಾಂಗ್‌ ಕಿನ್‌ ಅವರು ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಗಳಾಗಲು ಹಂಬಲ ಹೊಂದಿದ್ದಾರೆ.

ಸದ್ಯ ಅಮೆರಿಕದಲ್ಲಿ ನಡೆಯುತ್ತಿರುವ ಲೆಕ್ಕಾಚಾರಗಳ ಪ್ರಕಾರ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡರೂ ಅವರು ಅಂತಿಮ ಅವಧಿಯವರೆಗೆ ಕಣದಲ್ಲಿ ಉಳಿಯುವುದರ ಬಗ್ಗೆಯೇ ಸಂಶಯಗಳನ್ನು ವ್ಯಕ್ತಪಡಿಸಲಾಗು ತ್ತಿದೆ. ಒಂದು ವೇಳೆ ಹೊರಬಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಏಕೆಂದರೆ 2023 ಜ.6ರಂದು ಕ್ಯಾಪಿಟಲ್‌ ಹಿಲ್‌ನಲ್ಲಿ ನಡೆದ ಗಲಭೆಯ ಬಗ್ಗೆ ಅವರ ವಿರುದ್ಧ ಪ್ರತಿಕೂಲವಾದ ವರದಿ ಬಂದು, ಅಧಿಕಾರ ಉಳಿಸಿಕೊಳ್ಳಲು ಸಂಸತ್‌ ಭವನದ ಮೇಲೆಯೇ ಬೆಂಬಲಿಗರನ್ನು ನುಗ್ಗಿಸಲು ಮುಂದಾದ ವ್ಯಕ್ತಿ ಚುನಾವಣೆಗೆ ನಿಲ್ಲಲು ಅರ್ಹನಲ್ಲ ಎಂದು ವರದಿ ನೀಡಿದರೆ ಟ್ರಂಪ್‌ ಅವರ ರಾಜಕೀಯ ಜೀವನಕ್ಕೆ ಪೂರ್ಣ ವಿರಾಮ ಬಿದ್ದಂತೆಯೇ. ಏಕೆಂದರೆ ಜ.6ಕ್ಕೆ ಅಮೆರಿಕದ ಇತಿಹಾಸದಲ್ಲಿ ಕ್ಯಾಪಿಟಲ್‌ ಹಿಲ್‌ ಘಟನೆ ಅತ್ಯಂತ ಕರಾಳವಾದದ್ದು. ಆ ಘಟನೆ ನಡೆದು ಬರೋಬ್ಬರಿ 2 ವರ್ಷಗಳು ಪೂರ್ಣಗೊಳ್ಳಲಿವೆ.

ಅಮೆರಿಕದ ಉದ್ದಿಮೆ ಕ್ಷೇತ್ರದಲ್ಲೂ ಡೊನಾಲ್ಡ್‌ ಟ್ರಂಪ್‌ ದೊಡ್ಡ ಹೆಸರು. ಆ ಕ್ಷೇತ್ರದಲ್ಲಿ ಕೂಡ ಅವರ ವಿರುದ್ಧ ಗುರುತರ ಆರೋಪಗಳು ಇವೆ. ನ್ಯೂಯಾರ್ಕ್‌ನಲ್ಲಿ ಇರುವ ಟ್ರಂಪ್‌ ಟವರ್‌ ವಿರುದ್ಧವೂ ಕೇಸು ದಾಖಲಾಗಿದೆ. ಅದರಲ್ಲಿ ಇರುವ ಟ್ರಂಪ್‌ ಸಂಸ್ಥೆ ದಶಕಗಳಿಂದ ಕಾನೂನು ಬಾಹಿರವಾಗಿ ಕೃತ್ಯಗಳನ್ನು ಎಸಗಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 250 ಮಿಲಿಯನ್‌ ಡಾಲರ್‌ ಮೊತ್ತವನ್ನು ನಿಯಮ ಮೀರಿ ಸಂಗ್ರಹಿಸಲಾಗಿದೆ. ಜತೆಗೆ ಸಂಪತ್ತಿನ ಬಗ್ಗೆ ಸರಕಾರಕ್ಕೆ ತಪ್ಪು ಮಾಹಿತಿ ಕೊಟ್ಟ ಆರೋಪವೂ ಇದೆ. ಇದಲ್ಲದೆ ಜಾರ್ಜಿಯಾದಲ್ಲಿ 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಆರೋಪಗಳು ಇವೆ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆಗೆ ಪದೇಪದೆ ಫೋನ್‌ ಮಾಡಿದ್ದ ಬಗ್ಗೆ ದಾಖಲೆಗಳನ್ನೂ ಸಂಗ್ರಹಿಸಲಾಗಿದೆ. ಈ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ಜೈಲು ವಾಸವನ್ನು ಟ್ರಂಪ್‌ ಅನುಭವಿಸ ಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿಡೊನಾಲ್ಡ್‌ ಟ್ರಂಪ್‌ ಅವರ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯ ಮೇಲೆ ಕಾನೂನಿನ ತೂಗುಗತ್ತಿ ಬೀಳುವ ಅಂಚಿನಲ್ಲಿದೆ.

ಸದಾಶಿವ ಕೆ.

ಟಾಪ್ ನ್ಯೂಸ್

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.