![Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್ ಮೇಲೇ ಕಣ್ಣು!](https://www.udayavani.com/wp-content/uploads/2024/12/puttige-shree-1-415x253.jpg)
ಎಲ್ಲೋಯ್ತು ಮಸ್ಕ್ 200 ಶತಕೋಟಿ ಡಾಲರ್?
Team Udayavani, Jan 2, 2023, 6:40 AM IST
![ಎಲ್ಲೋಯ್ತು ಮಸ್ಕ್ 200 ಶತಕೋಟಿ ಡಾಲರ್?](https://www.udayavani.com/wp-content/uploads/2023/01/ela-620x413.jpg)
ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರಿಗೆ 2022 ಅತ್ಯಂತ ಕಹಿ ವರ್ಷ. ಟ್ವಿಟರ್ ಸಂಸ್ಥೆಯನ್ನು ಖರೀದಿಸಿ, ಅದರಲ್ಲಿದ್ದ ಸಿಬಂದಿಯನ್ನು ಹೊರಹಾಕಿ, ಈಗ ತಾನೇ ಸಿಇಒ ಸ್ಥಾನದಲ್ಲಿ ಕುಳಿತು ಮುನ್ನಡೆಸುತ್ತಿದ್ದಾರೆ. ಆದರೆ 2022ರಲ್ಲಿ ಎಲಾನ್ ಮಸ್ಕ್ ಒಟ್ಟಾರೆಯಾಗಿ 200 ಶತಕೋಟಿ ಡಾಲರ್‌ನಷ್ಟು ಹಣ ಕಳೆದುಕೊಂಡಿದ್ದಾರೆ. ಮನುಕುಲದ ಇತಿಹಾಸದಲ್ಲೇ ಈ ಪ್ರಮಾಣದ ಆಸ್ತಿ ಕರಗಿಸಿಕೊಂಡ ಏಕೈಕ ವ್ಯಕ್ತಿ ಎಂಬ ಕುಖ್ಯಾತಿಗೂ ಮಸ್ಕ್ ಪಾತ್ರವಾಗಿದ್ದಾರೆ. ಹಾಗಾದರೆ ಮಸ್ಕ್ ಕಳೆದುಕೊಂಡಿದ್ದು ಎಷ್ಟು? ಬೇರೆಯವರ ಎಷ್ಟು ಆಸ್ತಿ ಹೋಯಿತು? ಇಲ್ಲಿದೆ ಒಂದು ಮಾಹಿತಿ.
200 ಶತಕೋಟಿ ಡಾಲರ್ ನಷ್ಟ
ಎಲಾನ್ ಮಸ್ಕ್ ಅವರ ಎಲೆಕ್ಟ್ರಿಕ್ ಕಾರು ಕಂಪೆನಿ ಟೆಸ್ಲಾ, ಅತ್ಯಂತ ಲಾಭದಾಯಕ ಕಂಪೆನಿಯಾಗಿತ್ತು. ಹೀಗಾಗಿ 2021ರ ನವೆಂಬರ್‌ನಲ್ಲಿ ಈ ಕಂಪೆನಿಯಿಂದಾಗಿಯೇ ಎಲಾನ್ ಮಸ್ಕ್ ಅವರ ಒಟ್ಟಾರೆ ಸಂಪತ್ತು 340 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು. ಅಲ್ಲದೆ ಅದೇ ವರ್ಷದ ಜನವರಿಯಲ್ಲಿ ಮಸ್ಕ್, ಅಮೆಜಾನ್ ಕಂಪೆನಿಯ ಜೆಫ್ ಬೆಜೋಸ್ ಅವರನ್ನು ಹಿಂದಕ್ಕೆ ಹಾಕಿ ಜಗತ್ತಿನ ನಂ.1 ಖ್ಯಾತಿಗೆ ಒಳಗಾಗಿದ್ದರು. ಆದರೆ ಈ ವರ್ಷ ಟೆಸ್ಲಾದ ಷೇರುಗಳ ಮೌಲ್ಯ ಶೇ.65ರಷ್ಟು ಕುಸಿತವಾಗಿದ್ದು, ಹೀಗಾಗಿ ಮಸ್ಕ್ ಆಸ್ತಿ ಕರಗಿದೆ. ಸದ್ಯ ಜಗತ್ತಿನ ಶ್ರೀಮಂತರಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
ಈಗ ಸಂಪತ್ತಿನ ಮೌಲ್ಯವೆಷ್ಟು?
ಫೋರ್ಬ್ಸ್ ನೀಡಿರುವ ಮಾಹಿತಿ ಪ್ರಕಾರ, ರವಿವಾರದ ಲೆಕ್ಕಾಚಾರದಂತೆ ಮಸ್ಕ್ 146 ಬಿಲಿಯನ್ ಡಾಲರ್‌ನಷ್ಟು ಆಸ್ತಿ ಮೌಲ್ಯ ಹೊಂದಿದ್ದಾರೆ. ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಆ್ಯಂಡ್ ಫ್ಯಾಮಿಲಿ ಇದೆ. ಇವರ ಆಸ್ತಿ ಮೌಲ್ಯ 179 ಬಿಲಿಯನ್ ಡಾಲರ್. ಮೂರನೇ ಸ್ಥಾನದಲ್ಲಿ ಭಾರತದ ಗೌತಮ್ ಅಂಬಾನಿ ಅವರಿದ್ದು, 127 ಬಿಲಿಯನ್ ಡಾಲರ್‌ನಷ್ಟು ಸಂಪತ್ತು ಹೊಂದಿದ್ದಾರೆ.
ಟಾಪ್ ನ್ಯೂಸ್
![Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್ ಮೇಲೇ ಕಣ್ಣು!](https://www.udayavani.com/wp-content/uploads/2024/12/puttige-shree-1-415x253.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?](https://www.udayavani.com/wp-content/uploads/2024/12/Election1-150x90.jpg)
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
![8](https://www.udayavani.com/wp-content/uploads/2024/12/8-24-150x90.jpg)
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
![ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!](https://www.udayavani.com/wp-content/uploads/2024/12/anwar-manippady-1-150x84.jpg)
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
![ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ](https://www.udayavani.com/wp-content/uploads/2024/12/courts-s-1-150x102.jpg)
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
![Zakir Hussain; ನಾದಯೋಗಿಯ ನಿನಾದ ಸ್ತಬ್ಧ](https://www.udayavani.com/wp-content/uploads/2024/12/ustad-zakir-hussain-150x93.jpg)
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.