ಬೆಚ್ಚಿ ಬೀಳಿಸುವ ಘಟನೆ: ತಾಯಿ ಜೊತೆ ನಿಂತಿದ್ದ 3 ವರ್ಷದ ಮಗುವನ್ನು ರೈಲ್ವೆ ಟ್ರ್ಯಾಕ್ ಗೆ ದೂಡಿದ ಮಹಿಳೆ
Team Udayavani, Jan 2, 2023, 4:50 PM IST
ಒರೆಗಾನ್ : ತಾಯಿ ಜೊತೆ ೩ ವರ್ಷದ ಮಗುವೊಂದು ರೈಲ್ವೆ ಫ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದ ವೇಳೆ ಅಲ್ಲಿದ್ದ ಮಹಿಳೆಯೊಬ್ಬರು ಮಗುವನ್ನು ರೈಲ್ವೆ ಟ್ರ್ಯಾಕ್ ಗೆ ದೂಡಿದ ಭಯಾನಕ ಘಟನೆ ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್‌ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಾಯಿ ಮತ್ತು ಮಗು ರೈಲಿಗಾಗಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿ ಕಾಯುತ್ತಿದ್ದ ವೇಳೆ ಅಲ್ಲೇ ಕುಳಿತಿದ್ದ ಮಹಿಳೆಯೊಬ್ಬರು ಏಕಾಏಕಿ ಮಗುವನ್ನು ರೈಲ್ವೆ ಟ್ರ್ಯಾಕ್ ಗೆ ದೂಡಿದ್ದಾರೆ ಅದೃಷ್ಟವಶಾತ್ ರೈಲು ಇಲ್ಲದ ಪರಿಣಾಮ ಮಗು ಅಪಾಯದಿಂದ ಪಾರಾಗಿದೆ.
ಈ ಘಟನೆ ಬುಧವಾರ (ಡಿಸೆಂಬರ್ 28) ನಡೆದಿದ್ದು, ವಿಡಿಯೋವನ್ನು ಮುಲ್ಟ್‌ನೋಮಾ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.
ದಾಳಿ ನಡೆಸಿದ ಮಹಿಳೆಯನ್ನು 32 ವರ್ಷದ ಬ್ರಿಯಾನ್ನಾ ಲೇಸ್ ವರ್ಕ್‌ಮ್ಯಾನ್ ಸದ್ಯ ಪೊಲೀಸರ ವಶದಲ್ಲಿದ್ದು, ಈಕೆ ಯಾಕಾಗಿ ಮಗುವನ್ನು ತಳ್ಳಿದ್ದಾಳೆ ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ. ಘಟನೆಯಲ್ಲಿ ಮಗುವಿನ ಮುಖಕ್ಕೆ ರೈಲ್ವೆ ಹಳಿಯ ಮೇಲಿದ್ದ ಕಲ್ಲುಗಳು ತಾಗಿ ಗಾಯಗಳಾಗಿದ್ದು ಕೂಡಲೇ ಅಲ್ಲಿದ್ದ ಪ್ರಯಾಣಿಕರು ಮಗುವನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Graphic:
On Dec. 28 at the Gateway Transit Center in Portland, OR, a person shoved a toddler face first into the train tracks. The suspect was apprehended. Antifa & far-left activists in the city have argued against police patrolling public transport, saying it endangers people. pic.twitter.com/H22zL6Zly5— Andy Ngô 🏳️🌈 (@MrAndyNgo) December 30, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.