ಟಿ20: ಭಾರತದಿಂದ ಮಿಷನ್‌-2024:  ಇಂದಿನಿಂದ ಭಾರತ-ಶ್ರೀಲಂಕಾ ಟಿ20 ಸರಣಿ

 "ಬಿಗ್‌ ತ್ರೀ' ಗೈರು ;ಯುವ ಆಟಗಾರರಿಗೆ ಅವಕಾಶ

Team Udayavani, Jan 3, 2023, 7:55 AM IST

ಟಿ20: ಭಾರತದಿಂದ ಮಿಷನ್‌-2024:  ಇಂದಿನಿಂದ ಭಾರತ-ಶ್ರೀಲಂಕಾ ಟಿ20 ಸರಣಿ

ಮುಂಬಯಿ: ಕಳೆದ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲವಾದ ಟೀಮ್‌ ಇಂಡಿಯಾ, ಇದೀಗ ಮುಂದಿನ ವರ್ಷದ ವಿಶ್ವಕಪ್‌ಗಾಗಿ “ಮಿಷನ್‌-2024′ ಯೋಜನೆಯೊಂದಿಗೆ ಅಭಿಯಾನ ಆರಂಭಿಸಲಿದೆ. ಇದಕ್ಕೆ ಹೊಸ ವರ್ಷಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಈಗಾಗಲೇ ಶ್ರೀಲಂಕಾ ತಂಡ ಭಾರತಕ್ಕೆ ಕಾಲಿಟ್ಟಿದೆ.

ಮಂಗಳವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ಮೊದಲ ಮುಖಾಮುಖೀ ಏರ್ಪಡಲಿದೆ.

ಹೊಸ ನಾಯಕ, ಹೊಸ ಹುರುಪಿನ ಹೊಸ ಹೊಸ ಮುಖಗಳು… ಈ ರೀತಿಯಾಗಿ ಟೀಮ್‌ ಇಂಡಿಯಾದ ಯುವ ಪಡೆಯೊಂದು ಹೋರಾಟಕ್ಕೆ ಅಣಿಯಾಗಿದೆ. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಈ ಸರಣಿಯಿಂದ ಬೇರ್ಪಟ್ಟಿದ್ದಾರೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಪಾಂಡ್ಯ ಅವರನ್ನು ಟಿ20 ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಮುಂದುವರಿ ಸುವುದು ಬಿಸಿಸಿಐ ಯೋಜನೆ. ಈ ಮೂಲಕ ಬಿಸಿ ರಕ್ತದ ಯುವ ಆಟಗಾರರನ್ನು ಹುರಿಗೊಳಿಸಿ 2024ರ ವಿಶ್ವಕಪ್‌ಗೆ ಸಶಕ್ತ ತಂಡವನ್ನು ರೂಪಿಸುವುದು ಮಂಡಳಿಯ ಗುರಿಯಾಗಿದೆ. ಇದಕ್ಕೆ ಇನ್ನೂ 18 ತಿಂಗಳಿದೆಯಾದರೂ ಶ್ರೀಲಂಕಾ ಸರಣಿಯನ್ನೇ ಮೊದಲ ಮೆಟ್ಟಿಲಾಗಿ ಮಾಡಿಕೊಳ್ಳುವುದು ಜಾಣ ನಿರ್ಧಾರ ಎಂಬುದರಲ್ಲಿ ಎರಡು ಮಾತಿಲ್ಲ.
ಅಂತೆಯೇ ಇದು ಏಕದಿನ ವಿಶ್ವಕಪ್‌ ವರ್ಷವೂ ಹೌದು. ಭಾರತದ ಆತಿಥ್ಯದಲ್ಲೇ ಈ ಪ್ರತಿಷ್ಠಿತ ಪಂದ್ಯಾವಳಿ ನಡೆಯಲಿದೆ. ನಮ್ಮವರ ಮೊದಲ ಆದ್ಯತೆ 50 ಓವರ್‌ಗಳ ಪಂದ್ಯಗಳಿಗಿರಬೇಕು ನಿಜ. ಆದರೆ ಮಂಡಳಿ ಬಳಿ ಇದಕ್ಕೂ ಪ್ರತ್ಯೇಕ ಕಾರ್ಯತಂತ್ರಗಳಿವೆ.

ತಂಡದ ಸ್ವರೂಪ
ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆದ ಮಳೆಪೀಡಿತ ಟಿ20 ಸರಣಿಯನ್ನು ಹಾರ್ದಿಕ್‌ ಪಾಂಡ್ಯ ಪಡೆ ಜಯಿಸಿದ್ದನ್ನು ಮರೆಯುವಂತಿಲ್ಲ. ಅಲ್ಲಿಯೂ ಅನುಭವಿ ಆಟಗಾರರಿರಲಿಲ್ಲ. ಆದರೆ ರಿಷಭ್‌ ಪಂತ್‌, ಭುವನೇಶ್ವರ್‌ ಕುಮಾರ್‌ ಇದ್ದರು. ಲಂಕಾ ವಿರುದ್ಧ ಇವರಿಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಅದರಲ್ಲೂ ಪಂತ್‌ ರಸ್ತೆ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿವೀಸ್‌ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಪಂತ್‌, ಕೀಪಿಂಗ್‌ ಕೂಡ ನಡೆಸಿದ್ದರು. ಲಂಕಾ ವಿರುದ್ಧ ಈ ಎರಡೂ ಸ್ಥಾನ ತುಂಬಬಲ್ಲ ಆಟಗಾರನೆಂದರೆ ಇಶಾನ್‌ ಕಿಶನ್‌. ಬಾಂಗ್ಲಾ ಪ್ರವಾಸದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮೆರೆದಿರುವ ಇಶಾನ್‌ ಕಿಶನ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ.

ಇಶಾನ್‌ ಕಿಶನ್‌ ಅವರೊಂದಿಗೆ ಋತುರಾಜ್‌ ಗಾಯಕ್ವಾಡ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಶುಭಮನ್‌ ಗಿಲ್‌ ವನ್‌ಡೌನ್‌ನಲ್ಲಿ ಬರಬಹುದು. ಅನಂತರ ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ ಇದ್ದಾರೆ. ಮಧ್ಯಮ ಸರದಿಗೆ ಬಲ ತುಂಬಲು ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ ಮತ್ತು ರಾಹುಲ್‌ ತ್ರಿಪಾಠಿ ನಡುವೆ ಪೈಪೋಟಿ ಇದೆ. ಸರಣಿಯಲ್ಲಿ ಎಲ್ಲರಿಗೂ ಅವಕಾಶವನ್ನು ಹಂಚಿಕೊಡುವುದು ಉತ್ತಮ ನಡೆಯಾಗಲಿದೆ.

ಪಾಂಡ್ಯ ಅವರೊಂದಿಗೆ ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ ಪಾತ್ರ ನಿಭಾಯಿಸಬೇಕಾಗುತ್ತದೆ. ಅನುಭವಿ ಸ್ಪಿನ್ನರ್‌ ಚಹಲ್‌ ಮ್ಯಾಜಿಕ್‌ ಮಾಡುವರೋ, ದುಬಾರಿ ಆಗುವರೋ ಎಂಬ ಪ್ರಶ್ನೆ ಇದೆ.
ಭಾರತದ ವೇಗದ ಬೌಲಿಂಗ್‌ ವಿಭಾಗ ಯುವಕರಿಂದ ಕೂಡಿದೆ. ಅರ್ಷದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌, ಇನ್ನೂ ಹೊಸಬರಾದ ಶಿವಂ ಮಾವಿ, ಮುಕೇಶ್‌ ಕುಮಾರ್‌ ಅವರೆಲ್ಲ ಲಂಕಾ ಪಡೆಗೆ ಹೇಗೆ ಕಡಿವಾಣ ಹಾಕಬಲ್ಲರು ಎಂಬ ಕುತೂಹಲ ಎಲ್ಲರದು.

ಲಂಕಾ ಏಷ್ಯಾ ಚಾಂಪಿಯನ್‌
ಶ್ರೀಲಂಕಾ ಏಷ್ಯಾ ಕಪ್‌ ಚಾಂಪಿಯನ್‌ ಎಂಬ ಹಣೆಪಟ್ಟಿಯೊಂದಿಗೆ ಈ ಸರಣಿಯನ್ನು ಆಡಲಿಳಿಯುತ್ತಿದೆ. ಹೀಗಾಗಿ ಸಹಜವಾಗಿಯೇ ಒತ್ತಡ ಹೆಚ್ಚು. ಆದರೆ ಭಾರತದ ಯುವ ಪಡೆಗೆ ಹೋಲಿಸಿದರೆ ಅನುಭವದಲ್ಲಿ ಒಂದೆರಡು ಮೆಟ್ಟಿಲು ಮೇಲಿದೆ ಎನ್ನಲಡ್ಡಿಯಿಲ್ಲ. “ಲಂಕಾ ಪ್ರೀಮಿಯರ್‌ ಲೀಗ್‌’ನ ತ್ರಿವಳಿ ಹೀರೋಗಳಾದ ಆವಿಷ್ಕ ಫೆರ್ನಾಂಡೊ, ಚಮಿಕ ಕರುಣಾರತ್ನೆ, ಸದೀರ ಸಮರವಿಕ್ರಮ ಅಪಾಯಕಾರಿಯಾಗಿ ಗೋಚರಿಸಬಹುದು.

ಭನುಕ ರಾಜಪಕ್ಸ ಲಂಕಾ ತಂಡದ ಕೀ ಬ್ಯಾಟ್ಸ್‌ ಮನ್‌. ಹಾಗೆಯೇ ಐಪಿಎಲ್‌ನಲ್ಲಿ ಮಿಂಚಿದ ವನಿಂದು ಹಸರಂಗ, ಧನಂಜಯ ಡಿ ಸಿಲ್ವ, ಲಹಿರು ಕುಮಾರ ಕೂಡ ಭಾರತಕ್ಕೆ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಆದರೆ ನಮ್ಮವರು “ನಿರ್ಭೀತ ಕ್ರಿಕೆಟ್‌’ (ಫಿಯರ್‌ಲೆಸ್‌) ಆಡಿದರೆ ಲಂಕೆಯನ್ನು ಮಣಿಸುವುದು ಸಮಸ್ಯೆಯೇ ಆಗದು.

9 ಸರಣಿ, 8 ಗೆಲುವು
2022ರಲ್ಲಿ ಭಾರತದ ಟಿ20 ಆಟ ಹೇಗಿತ್ತು ಎಂಬ ಪ್ರಶ್ನೆಗೆ ಮಿಶ್ರ ಉತ್ತರ ಲಭಿಸುತ್ತದೆ. ಭಾರತ ಸರ್ವಾಧಿಕ 40 ಪಂದ್ಯಗಳನ್ನಾಡಿತು, 31 ಆಟಗಾರರನ್ನು ಕಣಕ್ಕಿಳಿಸಿತು, 9 ದ್ವಿಪಕ್ಷೀಯ ಸರಣಿಗಳಲ್ಲಿ ಎಂಟನ್ನು ತನ್ನದಾಗಿಸಿಕೊಂಡಿತು. ಇದು ಖುಷಿ ಕೊಡುವ ಸುದ್ದಿ.

ಆದರೆ 2 ಪ್ರಮುಖ ಕೂಟಗಳ ಫೈನಲ್ಸ್‌ ಮಾತ್ರ ಮರೀಚಿಕೆಯೇ ಆಗುಳಿಯಿತು. ಇವುಗಳೆಂದರೆ, ಏಷ್ಯಾ ಕಪ್‌ ಮತ್ತು ಟಿ20 ವಿಶ್ವಕಪ್‌. ಇದನ್ನು ಗೆಲ್ಲಲಾಗದಿದ್ದ ಮೇಲೆ ಬೇರೆ ಎಷ್ಟು ಪಂದ್ಯಗಳನ್ನು ಗೆದ್ದರೇನು ಎಂಬುದು ಎಲ್ಲರ ಪ್ರಶ್ನೆ.

ಅದಕ್ಕಾಗಿಯೇ ಈ “ಮಿಷನ್‌-2024′ ಯೋಜನೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ಗೆಲ್ಲಲು ಈಗಿನಿಂದಲೇ ಕಾರ್ಯತಂತ್ರ. ನಮ್ಮ ಯಂಗ್‌ ಟೀಮ್‌ ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸೀತು ಎಂಬುದರ ನಿರೀಕ್ಷೆಯಲ್ಲಿರೋಣ.

ತಂಡಗಳು
ಭಾರತ:
ಹಾರ್ದಿಕ್‌ ಪಾಂಡ್ಯ (ನಾಯಕ), ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ಉಪನಾಯಕ), ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಅರ್ಷದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌, ಶಿವಂ ಮಾವಿ, ಮುಕೇಶ್‌ ಕುಮಾರ್‌.

ಶ್ರೀಲಂಕಾ:
ದಸುನ್‌ ಶಣಕ (ನಾಯಕ), ಪಥುಮ್‌ ನಿಸ್ಸಂಕ, ಆವಿಷ್ಕ ಫೆರ್ನಾಂಡೊ, ಸದೀರ ಸಮರವಿಕ್ರಮ, ಕುಸಲ್‌ ಮೆಂಡಿಸ್‌, ಭನುಕ ರಾಜಪಕ್ಸ, ಚರಿತ ಅಸಲಂಕ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ (ಉಪನಾಯಕ), ಅಶೇನ್‌ ಬಂಡಾರ, ಮಹೀಶ್‌ ತೀಕ್ಷಣ, ಚಮಿಕ ಕರುಣಾರತ್ನೆ, ದಿಲ್ಶನ್‌ ಮದುಶಂಕ, ಕಸುನ್‌ ರಜಿತ, ದುನಿತ್‌ ವೆಲ್ಲಲಗೆ, ಪ್ರಮೋದ್‌ ಮದುಶಾನ್‌, ಲಹಿರು ಕುಮಾರ, ನುವಾನ್‌ ತುಷಾರ.

ಟಾಪ್ ನ್ಯೂಸ್

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.