ಯಾವ ಕಾರಣವೂ ನೀಡದೆ ನಟ ಕಿಶೋರ್ ಟ್ವೀಟ್ ಖಾತೆ ಅಮಾನತು: ಟ್ವಿಟರ್ ನಿಯಮದ ವಿರುದ್ಧ ಫ್ಯಾನ್ಸ್ ಗರಂ
Team Udayavani, Jan 3, 2023, 9:02 AM IST
ಬೆಂಗಳೂರು: ತನ್ನ ನಟನೆಯಿಂದ ಅಪಾರ ಪ್ರೇಕ್ಷಕರ ಪ್ರೀತಿಯನ್ನುಗಳಿಸಿರುವ ನಟ ಕಿಶೋರ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ಎಲಾನ್ ಮಸ್ಕ್ ಟ್ವಿಟರ್ ಸಿಇಓ ಆದ ಬಳಿಕ ಟ್ವಿಟರ್ ನಲ್ಲಿ ಹತ್ತಾರು ಬದಲಾವಣೆಗಳನ್ನು ತಂದಿದ್ದಾರೆ. ಮೊದಲಿದ್ದ ಟ್ವಿಟರ್ ನೀತಿ – ನಿಯಮಗಳು ಈಗ ಮತ್ತಷ್ಟು ಕಠಿಣವಾಗಿದೆ. ಯಾವುದೇ ರೀತಿಯ ಮನೋಭಾವಕ್ಕೆ ಧಕ್ಕೆ ತರುವಂತಹ ಟ್ವೀಟ್ ಗಳಿದ್ದರೆ, ನಿಯಮವನ್ನು ಉಲ್ಲಂಘಿಸುವ ಟ್ವೀಟ್ ಗಳಿದ್ದರೆ ಅಂತಹ ಟ್ವಿಟರ್ ಖಾತೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಲಾಗುತ್ತದೆ.
ನಟ ಕಿಶೋರ್ ಅವರ ಖಾತೆಯನ್ನು ಟ್ವಟಿರ್ ಅಮಾನತು ಮಾಡಲಾಗಿದ್ದು, ಸಂಸ್ಥೆಯ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.
ಆದರೆ ಯಾವ ಕಾರಣಕ್ಕೆ, ಯಾವ ಟ್ವೀಟ್ ಗಾಗಿ ಖಾತೆ ಅಮಾನತು ಮಾಡಲಾಗಿದೆ ಎನ್ನುವುದನ್ನು ಹೇಳಿ ಎಂದು ಅಭಿಮಾನಿಗಳು ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಆಗ್ರಹಿಸುತ್ತಿದ್ದಾರೆ.
ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ ? ಎನ್ನುವ ಸಾಲುಗಳನ್ನು ಇತ್ತೀಚೆಗೆ ನಟ ಕಿಶೋರ್ ಅವರು ಬರೆದುಕೊಂಡಿದ್ದರು. ಬಹುಶಃ ಇದೇ ಕಾರಣಕ್ಕೆ ಈ ರೀತಿ ಆಗಿರಬಹುದು ಎಂದು ಕೆಲ ಫ್ಯಾನ್ಸ್ ಗಳು ಹೇಳುತ್ತಿದ್ದಾರೆ.
ಇತ್ತೀಚೆಗೆ ನಟ ಕಿಶೋರ್ ಅವರು ʼಕಾಂತಾರʼ ಹಾಗೂ ಪೊನ್ನಿಯಿನ್ ಸೆಲ್ವನ್ : 1 ಚಿತ್ರದಲ್ಲಿನ ಅಭಿನಯಕ್ಕೆ ಪ್ರೇಕ್ಷಕರಿಂದ ಶ್ಲಾಘನೆ ವ್ಯಕ್ತವಾಗಿತ್ತು.
Dear @elonmusk, Why is @actorkishore account suspended? Please reinstate it. https://t.co/ur0T51nSPa
— Dr. Srinivas Kakkilaya MBBS MD (@skakkilaya) January 2, 2023
ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ ?
ಕಿಶೋರ್ ಅವರ ಈ ಸಾಲುಗಳನ್ನು ತಾಳಲಾರದೆ @TwitterIndia ಅವರ ಖಾತೆನೆ ಸಸ್ಪೆನ್ದ್ ಮಾಡಿದೆ ಅಂದರೆ. ಭಕ್ತರಿಗೆ ಇನ್ನೆಷ್ಟರ ಮಟ್ಟಿಗೆ ಕಾಡಿರಬಹುದು
Bring back @Actorkishore@TwitterSupport @elonmusk pic.twitter.com/7hae518CaF
— ಎರೆಯ (@pradeepgowdas) January 2, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.