ಜಲಮಂಡಳಿಗೆ ವಂಚನೆ: 13 ನೌಕರರ ಅಮಾನತು
Team Udayavani, Jan 4, 2023, 6:40 AM IST
ಬೆಂಗಳೂರು: ನೀರು ಪೂರೈಕೆ ಶುಲ್ಕ ವಸೂಲಿ ಮಾಡಿ ಜಲಮಂಡಳಿಗೆ ಪಾವತಿಸದೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಳಿಯ 13 ಅಧಿಕಾರಿ, ಸಿಬಂದಿಯನ್ನು ಅಮಾನತುಗೊಳಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಆದೇಶಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಜಲಮಂಡಳಿಯಿಂದ ನೀರು ಪೂರೈಕೆ ಶುಲ್ಕವನ್ನು ನಗದು ಅಥವಾ ಡಿಡಿ, ಚೆಕ್ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಹೀಗೆ ವಸೂಲಿ ಮಾಡುವ ಮೊತ್ತವನ್ನು ಜಲಮಂಡಳಿಯ ನಗದು ಪುಸ್ತಕದಲ್ಲಿ ನೋಂದಾಯಿಸುವುದರ ಜತೆಗೆ ಸಜಲ ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಅದನ್ನು ನಮೂದಿಸಬೇಕಿತ್ತು. ಜತೆಗೆ ಹಣವನ್ನು ಜಲಮಂಡಳಿ ಬ್ಯಾಂಕ್ ಖಾತೆಗೆ ಪಾವತಿಸಬೇಕಿತ್ತು.
ಆದರೆ, 2016ರಿಂದ 2018ರವರೆಗೆ 850ಕ್ಕೂ ಹೆಚ್ಚಿನ ಗ್ರಾಹಕರಿಂದ ವಸೂಲಿಯಾದ ನೀರಿನ ಶುಲ್ಕವನ್ನು ಜಲಮಂಡಳಿ ಬ್ಯಾಂಕ್ ಖಾತೆಗೆ ಪಾವತಿಸದೆ, ಸಜಲ ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಹಣ ಪಾವತಿಸಲಾಗಿದೆ ಎಂದು ನಮೂದಿಸಿ ವಂಚಿಸಿರುವುದು ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ಈ ವಂಚನೆಯಿಂದಾಗಿ ಮಂಡಳಿಗೆ 1.75 ಕೋಟಿ ರೂ.ಗಳಷ್ಟು ನಷ್ಟವುಂಟಾಗಿರುವ ಕುರಿತು ಅಂದಾಜಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಜಲಮಂಡಳಿಯು ಸಹಾಯಕ ನಿಯಂತ್ರಕರು (ಲೆಕ್ಕ) ಅವರ ನೇತೃತ್ವದಲ್ಲಿ 3 ತಂಡ ರಚಿಸಿ ಆಡಿಟ್ ಮಾಡಲಾಗಿತ್ತು. ಇದರ ಮಧ್ಯಂತರ ವರದಿ ಬಂದಿದ್ದು, ಅಂದಾಜು 1.75 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಬಿಲ್ ಮೊತ್ತ ವಸೂಲಿಯಾಗಿದ್ದು, ಅದನ್ನು ಜಲಮಂಡಳಿ ಬ್ಯಾಂಕ್ ಖಾತೆಗೆ ಪಾವತಿಸಲಾಗಿಲ್ಲ. ಜತೆಗೆ ಮಂಡಳಿಯ ಎಂಜಿನಿಯರ್ಗಳು ಸೇರಿ ಅಧಿಕಾರಿಗಳು ಮಾತ್ರ ಬಳಸುತ್ತಿದ್ದ ಸಜಲ ತಂತ್ರಾಂಶದ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಗುತ್ತಿಗೆ ನೌಕರರು ದುರ್ಬಳಕೆ ಮಾಡಿಕೊಂಡು ಮಂಡಳಿಗೆ ವಂಚಿಸಲಾಗಿರುವುದು ಪತ್ತೆಯಾಗಿದೆ.
ಯಾರ್ಯಾರು ಅಮಾನತು?
ಸಹಾಯಕ ನಿಯಂತ್ರಕರು (ಲೆಕ್ಕ) ಅವರ ನೇತೃತ್ವದ ತಂಡಗಳು ನೀಡಿದ ಮಧ್ಯಂತರ ವರದಿಯನ್ನಾಧರಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಅವರು 13 ಜನ ಗುತ್ತಿಗೆ ನೌಕರರು ಸೇರಿ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅದರಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್, ಕಂದಾಯ ವ್ಯವಸ್ಥಾಪಕ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಲ್ಯಾಣಾಧಿಕಾರಿ ಸೇರಿ ಇನ್ನಿತರ ಹುದ್ದೆಯ ಅಧಿಕಾರಿಗಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.