ವಿಜ್ಞಾನ ಕ್ಷೇತ್ರ ವಿಸ್ತರಣೆಗೆ ಪ್ರಧಾನಿ ಮೋದಿ ಕರೆ

Team Udayavani, Jan 4, 2023, 6:55 AM IST

ವಿಜ್ಞಾನ ಕ್ಷೇತ್ರ ವಿಸ್ತರಣೆಗೆ ಪ್ರಧಾನಿ ಮೋದಿ ಕರೆವಿಜ್ಞಾನ ಕ್ಷೇತ್ರ ವಿಸ್ತರಣೆಗೆ ಪ್ರಧಾನಿ ಮೋದಿ ಕರೆ

ಮುಂಬಯಿ: ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ, ಮುಂದಿನ 25 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಗಣನೀಯ ಬದ ಲಾವಣೆಗಳಿಗೆ ಸಾಕ್ಷಿಯಾ ಗಬೇಕಿದೆ. ಈ ನಿಟ್ಟಿನಲ್ಲಿ ದೇಶವನ್ನು ಆತ್ಮನಿರ್ಭರಗೊಳಿಸಲು ಹಾಗೂ ದೈನಂದಿನ ಜೀವನದಲ್ಲಿ ಬದಲಾವಣೆ ಗಳನ್ನು ಸೃಜಿಸಲು ದೇಶದ ಎಲ್ಲ ವಿಜ್ಞಾನಿಗಳು, ಸಂಶೋಧಕರು ತಮ್ಮ ಜ್ಞಾನವನ್ನ ಪರಿವರ್ತಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮಹಾರಾಷ್ಟ್ರದ ನಾಗಪು ರದಲ್ಲಿ ನಡೆದ 108ನೇ ಭಾರತೀಯ ವಿಜ್ಞಾನ ಸಮಾ ವೇಶ ಉದ್ಘಾಟಿಸಿ ಮಂಗಳವಾರ ಮಾತ ನಾಡಿದ ಅವರು ವಿಜ್ಞಾನ-ಆವಿಷ್ಕಾರ ಪ್ರಕ್ರಿಯೆಗಳನ್ನು ಬಲಪಡಿಸುವುದರ ಜತೆಗೆ ಕ್ವಾಂಟಮ್‌ ತಂತ್ರಜ್ಞಾನ, ಡೇಟಾ ಸೈನ್ಸ್‌, ಲಸಿಕೆ ಅಭಿವೃದ್ಧಿಯಂಥ ವಿಭಾಗ ಗಳ ಮೇಲೆ ಹೆಚ್ಚಿನ ಗಮನಹರಿಸುವಂತೆ ಕರೆ ನೀಡಿದರು. ಅಲ್ಲದೇ ಸಂಶೋಧನ ಕೇಂದ್ರಗಳಲ್ಲಿ ನಡೆಯುವ ಆವಿಷ್ಕಾರಗಳು ಸಾಧನೆಯಾಗಿ ಪರಿವರ್ತನೆಗೊಳ್ಳುವುದು ಅವು ಜನರನ್ನು ತಲುಪಿದಾಗ ಮಾತ್ರ, ಈ ನಿಟ್ಟಿ ನಲ್ಲಿ ಪ್ರತೀ ಸಂಶೋಧಕನೂ ಕಾರ್ಯ ನಿರತನಾಗಬೇಕು. ದೇಶದ ಯುವ ಪೀಳಿ ಗೆಯನ್ನು ಸಂಶೋಧನೆ ಗಳತ್ತ ಸೆಳೆದು ಬೆಂಬಲ ನೀಡಬೇಕು ಎಂದಿದ್ದಾರೆ.

ಶಾಲೆ ಮಕ್ಕಳ ರಾಗಿ ಯೋಜನೆ ಪ್ರಸ್ತುತಿ
ಸಿರಿಧಾನ್ಯಗಳ ಉತ್ಪಾದನೆ ಹಾಗೂ ಬಳಕೆಗೆ ದೇಶವ್ಯಾಪಿ ಮಾನ್ಯತೆ ನೀಡಲು ಕೇಂದ್ರಸರಕಾರ ಯೋಜನೆ ಗಳನ್ನು ರೂಪಿಸಿರುವ ನಡುವೆಯೇ, ಈ ಬಾರಿ ವಿಜ್ಞಾನ ಸಮಾವೇಶದಲ್ಲಿ, ಮಹಾರಾಷ್ಟ್ರದ ಪಾಲ^ರ್‌ನ ಬುಡ ಕಟ್ಟು ಪ್ರಾಬಲ್ಯ ಪ್ರದೇಶದ ಶಾಲಾ ವಿದ್ಯಾರ್ಥಿಗಳು ರಾಗಿ ಬೆಳೆ ಕುರಿತಂತೆ ಅಭಿವೃದ್ಧಿಪಡಿಸಿರುವ ಯೋಜನೆ ಯನ್ನು ವಿಜ್ಞಾನಿಗಳ ಮುಂದೆ ಪ್ರಸ್ತುತ ಪಡಿಸಲು ಆಯ್ಕೆ ಮಾಡಲಾಗಿದೆ. ಜವಾಹರ್‌ ತಾಲೂಕಿನ ಜಯೇಶ್ವರ ವಿದ್ಯಾಮಂದಿರ ಶಾಲೆಯ 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಪೌಷ್ಠಿಕ ಆಹಾರವಾಗಿ ರಾಗಿ ಅಧ್ಯಯನ ಎಂಬ ಶೀರ್ಷಿಕೆ ಅನ್ವಯ 60 ರೈತರನ್ನು ಸಂದರ್ಶಿಸಿ, ಯೋಜನಾ ವರದಿ ಸಿದ್ಧಪಡಿಸಿದ್ದಾರೆ.

ಚಿನ್ನದ ಶಾಯಿಯ ಕುರಾನ್‌ ಪ್ರದರ್ಶನ
ಸಮಾವೇಶದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ 16ನೇ ಶತಮಾನದಲ್ಲಿ ಚಿನ್ನದ ಶಾಯಿ(ಗೋಲ್ಡನ್‌ ಇಂಕ್‌)ಯಿಂದ ರಚಿಸಲಾಗಿದ್ದ ಹಾಗೂ ಆರೆಸ್ಸೆಸ್‌ ಅಂಗಸಂಸ್ಥೆಯಿಂದ ಸಂರಕ್ಷಿ ಸಲ್ಪಟ್ಟಿದ್ದ ಕುರಾನ್‌ ಪ್ರತಿಯನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಭಾರತದ ಧಾರ್ಮಿಕತೆ, ಐತಿಹ್ಯ , ವಿಜ್ಞಾನ ಮತ್ತು ಪ್ರಾಚೀನ ಭಾರತದ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಹಸ್ತಪ್ರತಿಗಳನ್ನೂ ಪ್ರದರ್ಶಿಸಲಾಗಿದೆ. ಕುರಾನ್‌ 385 ಪುಟಗಳನ್ನು ಹೊಂದಿದ್ದು ಎಲ್ಲ ಅಕ್ಷರಗಳನ್ನು ಚಿನ್ನದ ಶಾಯಿಯಿಂದ ಬರೆಯಲಾಗಿದೆ. ಯಾವ ಪುಟದಲ್ಲೂ ಒಂದೇ ಒಂದು ತಪ್ಪುಗಳಿಲ್ಲದೇ ಇರುವುದು ಇದರ ವೈಶಿಷ್ಟé.

ಪರಮಾಣು ಸ್ಥಾವರ: ಸಹಭಾಗಿತ್ವಕ್ಕೆ ಸಿದ್ಧ
2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿ ಹೊಂದಿರುವ ಭಾರತ, ಪರಮಾಣು ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಸಹಭಾಗಿತ್ವಕ್ಕೆ ಸಿದ್ಧವಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದರು. ವಿಜ್ಞಾನ ಸಮಾವೇಶದಲ್ಲಿ ಮಾತನಾಡಿದ ಅವರು “ಪರಮಾಣು ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ಹಣಕಾಸಿನ ಸಂಪನ್ಮೂಲಗಳಿಗಾಗಿ ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಸಹಭಾಗಿತ್ವಕ್ಕೆ ಪರಮಾಣು ವಲಯ ಮುಕ್ತವಾಗಿದೆ,’ ಎಂದರು.

ಟಾಪ್ ನ್ಯೂಸ್

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.