ಲವ್‌ ಜೆಹಾದ್‌ನ ಕರಾಳತೆ ಬಿಚ್ಚಿಟ್ಟ ಶ್ರದ್ಧಾ ಪ್ರಕರಣ; ಚಕ್ರವರ್ತಿ ಸೂಲಿಬೆಲೆ


Team Udayavani, Jan 5, 2023, 10:35 AM IST

4-sulibele

ಮಂಗಳೂರು: ಲವ್‌ ಜೆಹಾದ್‌ ಎಂದರೆ ಹಿಂದೂ ಸಂಘಟನೆಗಳ ಸೃಷ್ಟಿ, ಅವರಿಗೆ ಹುಚ್ಚು ಎಂದು ಮೂದಲಿಸುತ್ತಿದ್ದರು. ಆದರೆ ಲವ್‌ ಜೆಹಾದ್‌ ಎಂದರೆ ಹೇಗಿರುತ್ತದೆ ಎನ್ನುವುದನ್ನು ಶ್ರದ್ಧಾ ಪ್ರಕರಣ ಜನರಿಗೆ ತೋರಿಸಿಕೊಟ್ಟಿದೆ. ಇಡೀ ದೇಶವನ್ನು ತಲ್ಲಣಗೊಳಿಸಿದೆ ಎಂದು ಯುವಬ್ರಿಗೇಡ್‌ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಕೆನರಾ ಶಾಲೆಯ ಭುವನೇಂದ್ರ ಸಭಾಂಗಣದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಲವ್‌ ಜೆಹಾದ್‌ ಬಗ್ಗೆ ಜಾಗೃತಿ ಮೂಡಿಸಲು ಬುಧವಾರ ಹಮ್ಮಿಕೊಳ್ಳಲಾಗಿದ್ದ “ನಮ್ಮಯ ಹಕ್ಕಿ ಕಳ್ಕೊಂಡ್‌ಬಿಟ್ವಿ ನಿಮ್ಮಯ ಹಕ್ಕಿ ಕಾಪಾಡ್ಕೊಳ್ಳಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರದ್ಧಾಳನ್ನು ಅಫ್ತಾಬ್‌ ಎಂಬಾತ ಹತ್ಯೆ ಮಾಡಿ, 35 ತುಂಡುಗಳನ್ನಾಗಿ ಮಾಡಿದ ಬಳಿಕ ಪಾಲಿಗ್ರಾಫ್‌ ಪರೀಕ್ಷೆಯಲ್ಲಿ ಆತ, ನಾನು ನನಗೆ ನಿರ್ದೇಶಿಸಿದಂತೆಯೇ ಮಾಡಿದ್ದೇನೆ, ಆ ಬಗ್ಗೆ ಯಾವುದೇ ವಿಷಾದ ಇಲ್ಲ ಎಂದು ಹೇಳಿದ್ದಾನೆ. ಈ ಪ್ರಕರಣ ಬಹಿರಂಗವಾದ ನಂತರ ಒಂದೊಂದಾಗಿ 20 ಲವ್‌ ಜೆಹಾದ್‌ ಪ್ರಕರಣಗಳು ಹೊರಬಂದಿವೆ. ಮುಖ್ಯವಾಗಿ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಅಜೆಂಡಾದ ಭಾಗವಾಗಿ ಇದನ್ನು ನಡೆಸಲಾಗುತ್ತಿದೆ. ಇದಕ್ಕೆ ಕೇವಲ ಹಿಂದೂ ಯುವತಿಯರಷ್ಟೇ ಅಲ್ಲ, ಕ್ರೈಸ್ತ ಸಮುದಾಯದವರೂ ಬಲಿಯಾಗುತ್ತಿದ್ದಾರೆ ಎಂದರು.

ಕ್ಷಣಿಕ ವಾಂಛೆಗೆ ಬಲಿಯಾಗದಿರಿ

ಸಾಂವಿಧಾನಿಕವಾಗಿ ಎಲ್ಲರೂ ಒಂದೇ ಎನ್ನುವುದನ್ನು ಚಿಕ್ಕಂದಿನಿಂದಲೂ ಕಲಿಯುತ್ತೇವೆ, ಆದರೆ ಎರಡೂ ಧರ್ಮಗಳ ಲಕ್ಷಣಗಳೇ ಬೇರೆ, ಹಿಂದೂ ಧರ್ಮದಿಂದ ಹೊರ ಹೋಗುವುದು ಸುಲಭ, ಒಳಗೆ ಬರುವುದು ಕಷ್ಟ, ಇಸ್ಲಾಂ ಒಳಬರುವುದು ಸುಲಭ, ಹೊರಹೋಗುವುದು ಕಷ್ಟ. ಹೆತ್ತವರನ್ನು ಮರೆತು ಹಿಂದೂ ಯುವತಿಯರು ಕ್ಷಣಿಕ ದೈಹಿಕ ವಾಂಛೆಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದರು.

ಹಿಂದೆ ಮೊಬೈಲ್‌ ರಿಚಾರ್ಜ್‌ ಅಂಗಡಿಗಳ ಮೂಲಕ ಹಿಂದೂ ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳಲಾಗುತ್ತಿದ್ದರೆ, ಈಗ ಡೇಟಿಂಗ್‌ ಆ್ಯಪ್‌ಗ್ಳು, ಸಾಮಾಜಿಕ ಜಾಲತಾಣಗಳ ಮೂಲಕ ಅವರನ್ನು ಗುರಿಯಾಗಿಸಲಾಗುತ್ತದೆ. ಲವ್‌ಜೆಹಾದ್‌ ಗೆ ಬಲಿಯಾದವರನ್ನು ಭಯೋತ್ಪಾದನ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಕೊಡಗಿನ ದೀಪ್ತಿ ಮಾರ್ಲ ಹಾಗೂ ಆಶಾ ಅವರು ಉಳ್ಳಾಲದ ಮರಿಯಮ್‌ ಹಾಗೂ ಮಂಗಳೂರಿನ ಆಯೆಷಾ ಆಗಿರುವುದು ನಿದರ್ಶನ. ಮತಾಂತರಗೊಂಡ ಯುವತಿಯರನ್ನು ಬಳಸಿಕೊಳ್ಳುವುದಷ್ಟೇ ಅಲ್ಲದೆ ಮಾರಾಟ ಮಾಡುವುದು ಕೂಡ ನಡೆಯುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿಂದೂ ಜನಜಾಗೃತಿ ಸಮಿತಿ ಮಂಗಳೂರು ಅಧ್ಯಕ್ಷೆ ಲಕ್ಷ್ಮೀ ಪೈ ಅವರು, ಬ್ರಿಟಿಷರು ಹುಟ್ಟು ಹಾಕಿದ ನೂತನ ಶಿಕ್ಷಣ ಪದ್ಧತಿಯ ಪರಿಣಾಮವಾಗಿ ಧರ್ಮಬಲ, ಆತ್ಮಬಲ ವಿಲ್ಲದ ಸಮುದಾಯ ಸೃಷ್ಟಿಯಾಗಿರುವುದು ವಿಪರ್ಯಾಸ, ಸಂಸ್ಕಾರದ ಶಿಕ್ಷಣದಿಂದ ನಮ್ಮ ಮಕ್ಕಳನ್ನು ಸದೃಢರನ್ನಾಗಿಸಬಹುದು ಎಂದರು.

ಯುವಬ್ರಿಗೇಡ್‌ ಮುಖಂಡ ಧರ್ಮ ಹೊನ್ನಾರಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಭವ್ಯ ಸ್ವಾಗತಿಸಿ ಪ್ರಿಯಾ ಶಿವಮೊಗ್ಗ ನಿರೂಪಿಸಿದರು.

ಕಾನೂನಿಗಿಂತ ಹೆತ್ತವರ ಪಾತ್ರ ಮುಖ್ಯ: ದೇಶದಲ್ಲಿ ಲವ್‌ ಜೆಹಾದ್‌ ವಿರುದ್ಧ ಕಾನೂನು ತರಬೇಕು, ಶಾಲೆ ಗಳಲ್ಲಿ ಪಠ್ಯ ತರಬೇಕೆಂಬ ಮಾತು ಕೇಳಿಬರುತ್ತಿದೆ. ಆದರೆ ಅದಲ್ಲಕ್ಕಿಂತ ಮುಖ್ಯವಾದದ್ದು ಹಿಂದೂ ಯುವತಿ ಯರ ಹಾಗೂ ಯುವಕರ ಹೆತ್ತವರು ಮಕ್ಕಳಿಗೆ ಈ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು, ಮಾತ ನಾಡಬೇಕು, ಅವರಿಗೆ ಅರ್ಥ ವಾಗುವ ರೀತಿಯಲ್ಲಿ ತಿಳಿಸಿದರೆ ಶೇ. 50 ಪ್ರಕರಣ ಇಳಿಕೆ ಯಾಗಬಹುದು ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದರು.

———————————————————————————————————————————————————————-

ಲವ್ಜೆಹಾದ್ನತ್ತ ಗಮನಕೊಡಿ!

ಚರ್ಚೆ ಹುಟ್ಟುಹಾಕಿದ ನಳಿನ್ಕುಮಾರ್ಹೇಳಿಕೆ

ಮಂಗಳೂರು: “ನೀವು ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ, ವೇದವ್ಯಾಸ್‌ ಹೋದಾಗ ಕೈ ಎತ್ತಿಲ್ಲ, ನಳಿನ್‌ ನಕ್ಕಿಲ್ಲ ಎನ್ನಬೇಡಿ. ನಳಿನ್‌ ಕುಮಾರ್‌ ನಕ್ಕು ನಿಮಗೇನು ಬಂಗಾರ ಸಿಗ್ತಾ ಇಲ್ಲ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್‌ ಜೆಹಾದ್‌ ನಿಲ್ಲಿಸಬೇಕಿದ್ದರೆ ಭಾರತೀಯ ಜನತಾ ಪಾರ್ಟಿ ಬೇಕು’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೋಮವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿಯ ಜಿಲ್ಲಾ ಮಟ್ಟದ ಬೂತ್‌ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವ ಸಂದರ್ಭ ಉಳ್ಳಾಲದ ಬಿಜೆಪಿ ನಾಯಕರನ್ನು ಉಲ್ಲೇಖೀಸಿ ಅವರು ಈ ಹೇಳಿಕೆ ನೀಡಿದ್ದರು.

ಲವ್‌ ಜೆಹಾದ್‌ ನಿಷೇಧಿಸಲು ಬಿಜೆಪಿ ಆಡಳಿತ ಬೇಕು. ಮುಂದಿನ ಭವಿಷ್ಯ ಉತ್ತಮವಾಗಬೇಕಾದರೆ ಬಿಜೆಪಿ ಬೇಕು. ಅದಕ್ಕಾಗಿ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಪಕ್ಷದ ಜಯಕ್ಕೆ ಶ್ರಮಿಸಬೇಕು ಎಂದು ಹೇಳುತ್ತಾ ನಳಿನ್‌ ಕುಮಾರ್‌, ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ಗೈದಿದ್ದರು. ನಳಿನ್‌ ಅವರ ಈ ಹೇಳಿಕೆ ವಿರುದ್ಧ ಕಾಂಗ್ರೆಸ್‌ ನಾಯಕರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.