ಕೊಲೆ ಪ್ರಕರಣ; ಚಾರ್ಮಾಡಿಯಲ್ಲಿ ಮುಂದುವರಿದ ಶವ ಶೋಧ
Team Udayavani, Jan 5, 2023, 3:23 PM IST
ಬೆಳ್ತಂಗಡಿ: ಹಣಕಾಸಿನ ವಂಚನೆ ವಿಚಾರಕ್ಕಾಗಿ ಬೆಂಗಳೂರಿನ ಕೋಣನಕುಂಟೆಯ ಹರಿನಗರದ ಎಚ್. ಶರತ್ ಅವರ ಅಪಹರಣ ಹಾಗೂ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಮೃತದೇಹದ ಪತ್ತೆಗಾಗಿ ಮಂಗಳವಾರ ಚಾರ್ಮಾಡಿ ಘಾಟಿ ಪ್ರಪಾತದಲ್ಲಿ ಶೋಧ ಕಾರ್ಯ ಆರಂಭಿಸಿದ್ದು ಜ. 4ರಂದು ಮುಂದುವರಿದಿದೆ.
ಹಣಕಾಸು ವಿಚಾರದಲ್ಲಿ ಸುಮಾರು 9 ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣದಲ್ಲಿ 10 ಆರೋಪಿಗಳು ಭಾಗಿಯಾಗಿದ್ದು, ಕೊಲೆ ಮಾಡಿದ ಬಳಿಕ ಶವವನ್ನು ಚಾರ್ಮಾಡಿ ಘಾಟಿಯಲ್ಲಿ ಎಸೆದಿರುವ ಕುರಿತು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದರು. ವ್ಯಕ್ತಿಯೊಬ್ಬರು ಬರೆದ ಪತ್ರ ಮತ್ತು ಹಲ್ಲೆಯ ವೀಡಿಯೋ ದೃಶ್ಯಗಳ ಆಧಾರದಲ್ಲಿ ವಿಶೇಷ ತಂಡ ರಚಿಸಿ ರಹಸ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಈ ಬಗ್ಗೆ ಪೊಲೀಸರು, ಸ್ಥಳೀಯರ ಸಹಕಾರದಲ್ಲಿ ಚಾರ್ಮಾಡಿ ಘಾಟಿ ಭಾಗದಲ್ಲಿ ಮಂಗಳವಾರದಿಂದ ಶವದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸರು ಕರೆದುಕೊಂಡು ಬಂದಿರುವ ಇಬ್ಬರು ಆರೋಪಿಗಳು ಕ್ಷಣಕ್ಕೊಂದು ಸ್ಥಳ ವನ್ನು ತೋರಿಸುತ್ತಿದ್ದುದರಿಂದ ಕಾರ್ಯಾಚರಣೆ ಜಟಿಲಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಇಷ್ಟರವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಚಾರ್ಮಾಡಿ ಘಾಟಿ ಪ್ರಪಾತದಲ್ಲಿ ಹುಡುಕಾಟ ಕಠಿನವಾಗಿದ್ದು ಹಗ್ಗದ ಸಹಾಯದಿಂದ ಕೆಳಕ್ಕಿಳಿದು ಪರಿಶೀಲನೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.