ಎಚ್1-ಬಿ ವೀಸಾ ಶುಲ್ಕ ದುಪ್ಪಟ್ಟು? ಭಾರತೀಯ ಐಟಿ ವೃತ್ತಿಪರರಿಗೆ ಕಹಿಸುದ್ದಿ
ಹಲವು ವೀಸಾಗಳ ವಲಸೆ ಶುಲ್ಕ ಹೆಚ್ಚಿಸುವತ್ತ ಬೈಡೆನ್ ಸರ್ಕಾರ ಹೆಜ್ಜೆ
Team Udayavani, Jan 6, 2023, 7:45 AM IST
ವಾಷಿಂಗ್ಟನ್: ಭಾರತೀಯ ಟೆಕ್ ವೃತ್ತಿಪರರಿಗೆ ಅಮೆರಿಕದ ಜೋ ಬೈಡೆನ್ ಸರ್ಕಾರ ಕಹಿಸುದ್ದಿ ನೀಡಿದೆ. ಭಾರತೀಯರಿಂದ ಅತಿ ಹೆಚ್ಚು ಬೇಡಿಕೆಯಿರುವಂಥ ಎಚ್-1ಬಿ ವೀಸಾ ಸೇರಿದಂತೆ ಹಲವು ವೀಸಾಗಳಿಗೆ ಹೇರಲಾಗುವ ವಲಸೆ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಬೈಡೆನ್ ಆಡಳಿತ ಮುಂದಾಗಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು ಪ್ರಕಟಿಸಿರುವಂಥ ಪ್ರಸ್ತಾವಿತ ನಿಯಮದ ಪ್ರಕಾರ, ಎಚ್-1ಬಿ ವೀಸಾ ಅರ್ಜಿಗೆ 37,933 ರೂ.(460 ಡಾಲರ್) ಆಗಿರುವ ಶುಲ್ಕವು ಸದ್ಯದಲ್ಲೇ 64,322 ರೂ. (780 ಡಾಲರ್)ಗೆ ಏರಿಕೆಯಾಗಲಿದೆ.
ಅದೇ ರೀತಿ, ಎಲ್-1 ವೀಸಾ ಅರ್ಜಿಗೆ ಈಗಿರುವ 37,933 ರೂ.(460 ಡಾಲರ್)ನಿಂದ 1.14 ಲಕ್ಷ ರೂ. (1,385 ಡಾಲರ್)ಗೆ, ಒ-1 ವೀಸಾಗಳಿಗೆ 37,933 ರೂ.(460 ಡಾಲರ್)ನಿಂದ 87,000 ರೂ.(1,055 ಡಾಲರ್)ಗೆ ಶುಲ್ಕ ಹೆಚ್ಚಳವಾಗಲಿದೆ.
ಕೌಶಲ್ಯಯುತ ಹಾಗೂ ತಾಂತ್ರಿಕ ಪರಿಣತಿಯ ಕೆಲಸಗಳಿಗೆ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳು ಎಚ್-1ಬಿ ವೀಸಾವನ್ನು ಬಳಸಿಕೊಳ್ಳುತ್ತವೆ.
ಅಮೆರಿಕದ ತಂತ್ರಜ್ಞಾನ ಕಂಪನಿಗಳು ಪ್ರತಿ ವರ್ಷ ಭಾರತ ಮತ್ತು ಚೀನದಿಂದ ಸಾವಿರಾರು ಉದ್ಯೋಗಿಗಳನ್ನು ಇದೇ ವೀಸಾ ಮೂಲಕ ನೇಮಕ ಮಾಡಿಕೊಳ್ಳುತ್ತವೆ.
ಸರ್ಕಾರವು ಇಂಥ ವೀಸಾಗಳ ಶುಲ್ಕವನ್ನು ಹೆಚ್ಚಳ ಮಾಡುವುದರಿಂದ ಅಮೆರಿಕಕ್ಕೆ ಕಾನೂನಾತ್ಮಕವಾಗಿ ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಅಲ್ಲಿನ ನೀತಿನಿರೂಪಕರ ಆಕಾಂಕ್ಷೆಗೆ ಅಡ್ಡಿಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.