ಮಂಗಳೂರು: ಜಿಲ್ಲೆಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ: ನಾಗಣ್ಣ
ಮಕ್ಕಳ ಹಕ್ಕು ರಕ್ಷಣ ಆಯೋಗಕ್ಕೆ ಸದಸ್ಯರ ನೇಮಕ ಶೀಘ್ರ
Team Udayavani, Jan 5, 2023, 11:42 PM IST
ಮಂಗಳೂರು: ರಾಜ್ಯ ಮಕ್ಕಳ ಹಕ್ಕು ರಕ್ಷಣ ಆಯೋಗಕ್ಕೆ ಐವರು ಸದಸ್ಯರ ನೇಮಕ ಶೀಘ್ರ ಆಗಲಿದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿನ ಮಕ್ಕಳ ಕಲ್ಯಾಣ ಸಮಿತಿ ರಚನೆಯೂ ಕೊನೆಯ ಹಂತದಲ್ಲಿದೆ ಎಂದು ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅವರು ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಕುರಿತಂತೆ ಪರಿಶೀಲನೆ ಸಭೆ ನಡೆಸಿ ಸುದ್ದಿಗಾರ ರೊಂದಿಗೆ ಮಾತನಾಡಿ ದರು. ಜ. 9ರಂದು ಈ ಕುರಿತು ಉನ್ನತ ಮಟ್ಟದ ವಿವಿಧ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳನ್ನೊಳಗೊಂಡ ಸಮಾಲೋಚನೆ ನಡೆಯಲಿದೆ ಎಂದರು.
1 ವರ್ಷದ ಅಂತರದ ಬಳಿಕ ಅಧ್ಯಕ್ಷರ ನೇಮಕ ಆಗಿದೆ. ಈಗ ಸದಸ್ಯರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು ಶೀಘ್ರ ಅಂತಿಮಗೊಳ್ಳಲಿದೆ. ವಿವಿಧ ಜಿಲ್ಲೆಗಳಲ್ಲಿನ ಮಕ್ಕಳ ಕಲ್ಯಾಣ ಸಮಿತಿಗಳು 3 ವರ್ಷ ಅವಧಿ ಪೂರ್ಣಗೊಳಿಸಿದ್ದರೂ ಕೋವಿಡ್ ಕಾರಣ ಅವಧಿ ವಿಸ್ತರಿಸಲಾಗಿತ್ತು. ಈಗ ಹೊಸ ಸಮಿತಿ ಗಳ ರಚನೆಯೂ ಆಗಲಿದೆ ಎಂದರು.
ನಮ್ಮ ಮಕ್ಕಳು ನಮ್ಮ ರಕ್ಷಣೆ
ಮಕ್ಕಳ ರಕ್ಷಣೆ ಗ್ರಾಮ ಮಟ್ಟದಲ್ಲೇ ಎಲ್ಲರ ಹೊಣೆಯಾಗಬೇಕು. ಆ ನಿಟ್ಟಿನಲ್ಲಿ ಗ್ರಾಮದಿಂದ ತೊಡಗಿ ಜಿಲ್ಲಾ ಮಟ್ಟದ ಸಮಿತಿಗಳಿದ್ದರೂ ಅವುಗಳಿಗೆ ಸಾಂವಿಧಾನಿಕ ಶಕ್ತಿ ತುಂಬುವ ಕೆಲಸ ಮಾಡುವ ಉದ್ದೇಶವಿದೆ. ಗ್ರಾಮ ಮಟ್ಟದ ಸಮಿತಿಯನ್ನು ಗ್ರಾ.ಪಂ. ಮಟ್ಟದ ಸಮಿತಿ ಪರಿಶೀಲಿಸಬೇಕು, ಇವುಗಳಿಂದ ಫಾರಂ 1, 2 ಆ ಬಳಿಕ ತಾಲೂಕು, ಜಿಲ್ಲಾ ಮಟ್ಟದ ಸಮಿತಿಗಳ ಪರಿಶೀಲನೆಗೊಳಪಟ್ಟು ಜಿಲ್ಲಾ ಕೆಡಿಪಿ ಸಭೆಗಳಲ್ಲೂ ಚರ್ಚೆಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಸೂಕ್ತ ನಿಯಮ ಬದಲಾವಣೆ ಮಾಡಲಾಗುವುದು ಎಂದರು.
ಕಳೆದ ಎರಡೇ ತಿಂಗಳಲ್ಲಿ 22 ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇನೆ. ಮಾಧ್ಯಮ ವರದಿಗಳನ್ನು ಆಧರಿಸಿ 180 ಪ್ರಕರಣಗಳನ್ನು ಆಯೋಗ ಸ್ವಯಂ ದಾಖಲಿಸಿಕೊಂಡಿದೆ. ಇದರಲ್ಲಿ ಬಾಲಕಾರ್ಮಿಕ, ಪೋಕೊÕ, ಬಾಲನ್ಯಾಯ ಕಾಯ್ದೆ ಇತ್ಯಾದಿ ಸೇರಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪಾ ಭೋವಿ, ಎಎಸ್‌ಪಿ ಕುಮಾರ್‌ಚಂದ್ರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಹಾಜರಿದ್ದರು.
ಉಡುಪಿಯಲ್ಲೂ ಸಭೆ
ಮಣಿಪಾಲ: ನಾಗಣ್ಣ ಗೌಡ ಅವರು ಉಡುಪಿ ಜಿ.ಪಂ. ಸಭಾಂಗಣದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ, ಡಿಸಿ ಕೂರ್ಮಾರಾವ್ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್., ಅಧಿಕಾರಿಗ ಳಾದ ಯತೀಶ್, ವೀಣಾ ಬಿ.ಎನ್., ಸಿದ್ದಲಿಂಗಪ್ಪ, ಶಿವಕುಮಾರಯ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಆಯೋಗದ ಅಧ್ಯಕ್ಷರ ಸೂಚನೆ
– ಮಹಿಳಾ ಹಾಸ್ಟೆಲ್‌ಗಳಿಗೆ ಮಹಿಳೆ ಯರೇ ವಾರ್ಡನ್ ಆಗಿರಬೇಕು. ಹಿಂದುಳಿದ ವರ್ಗಗಳ ವಸತಿ ನಿಲಯ ಗಳಲ್ಲಿ ವಾರ್ಡನ್‌ಗಳು ಮಕ್ಕಳಿಗೆ ಅವರ ಹಕ್ಕು ಕರ್ತವ್ಯಗಳನ್ನು ಹೇಳಿಕೊಡ ಬೇಕು, ಮಕ್ಕಳಿಗೆ “ಹಾಸ್ಟೆಲ್ ತಮ್ಮ ಮನೆಯಂತೆ’ ಅನ್ನಿಸುವ ವಾತಾವರಣ ರೂಪಿಸಬೇಕು.
– ವಸತಿ ನಿಲಯ ಹಾಗೂ ಶಾಲೆಗ ಳಲ್ಲಿ ನುಗ್ಗೆ, ಪಪ್ಪಾಯಿ, ನಿಂಬೆ ಗಿಡ, ತರಕಾರಿ ಕೃಷಿ ಮಾಡಬೇಕು. ಚಿಕ್ಕಂದಿನಲ್ಲೇ ಮರ ಉಳಿಸುವ ಬಗ್ಗೆ ಅರಿವು ಹೊಂದಲು ಇದು ಪೂರಕ.
– ಗ್ರಾ.ಪಂ.ಗಳಲ್ಲಿ ಮಕ್ಕಳ ಜಾಗೃತಿ ಜಾಥಾ ಆಯೋಜಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಇರುವ ಕಠಿನ ಕಾನೂನುಗಳ ಬಗ್ಗೆ ಜಾಥಾದಲ್ಲಿ ಜನರಿಗೆ ಮುಟ್ಟುವಂತಹ ಘೋಷಣೆ ಕೂಗಬೇಕು, ಆ ಕುರಿತು ಪ್ರದರ್ಶನವೂ ಇರಬೇಕು.
– ಬಾಲ್ಯವಿವಾಹ ತಡೆ ಸಮಿತಿಯಲ್ಲಿ ತಹಶೀಲ್ದಾರ್, ತಾ.ಪಂ. ಇಒಗಳು, ಬಿಇಒ, ವೈದ್ಯರು, ಪೊಲೀಸ್ ಮತ್ತಿತರ ರನ್ನು ಸೇರಿಸಿಕೊಂಡು ಸಮಗ್ರವಾಗಿ ಆಗಾಗ ಸಭೆ ನಡೆಸುತ್ತಿರಬೇಕು.
ಬಾರ್, ಪಬ್‌ಗ ಮಕ್ಕಳು ಬೇಡ
ಬಾರ್, ಪಬ್‌ಗ ಹೆತ್ತವರು ಮಕ್ಕಳನ್ನು ಕರೆದುಕೊಂಡು ಹೋದರೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಮಕ್ಕಳ ಪ್ರವೇಶಕ್ಕೆ ನಿರ್ಬಂಧ ಕಾನೂನು ಈಗಾ ಗಲೇ ಇದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಅಬಕಾರಿ ಅಧಿಕಾರಿಗಳಿಗೂ ಸೂಚಿಸು ವುದಾಗಿ ನಾಗಣ್ಣ ಗೌಡ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.