ಸಂಕ್ರಾಂತಿಗೆ ಪರಭಾಷಾ ಅಬ್ಬರ; ಕನ್ನಡ ಚಿತ್ರಗಳಿಗೆ ಕಾಡಲಿದೆ ಥಿಯೇಟರ್‌ ಸಮಸ್ಯೆ


Team Udayavani, Jan 6, 2023, 2:41 PM IST

ಸಂಕ್ರಾಂತಿಗೆ ಪರಭಾಷಾ ಅಬ್ಬರ; ಕನ್ನಡ ಚಿತ್ರಗಳಿಗೆ ಕಾಡಲಿದೆ ಥಿಯೇಟರ್‌ ಸಮಸ್ಯೆ

ವರ್ಷ ಆರಂಭವಾಗಿದೆ. ಮತ್ತೆ ಸಿನಿಮಾ ಜಾತ್ರೆ ಶುರುವಾಗಿದೆ. 2022ರ ಅದೃಷ್ಟದ ನೆನಪು ಒಂದು ಕಡೆಯಾದರೆ 2023 ಆಶಾಭಾವನೆಯೊಂದಿಗೆ ಸಿನಿಮಾ ಬಿಡುಗಡೆಯಾಗುತ್ತಿವೆ. ಮೊದಲ ವಾರ (ಜ.06) ಕನ್ನಡದಿಂದ 9 ಸಿನಿಮಾಗಳು ತೆರೆಕಾಣುತ್ತಿವೆ. ಹಾಗಾದರೆ, ಮುಂದಿನ ವಾರ ಅಂದರೆ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಿಂದ ಬರುತ್ತಿರುವ ಸ್ಟಾರ್‌ ಸಿನಿಮಾ ಯಾವುದು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರವಿಲ್ಲ. ಏಕೆಂದರೆ ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿಯಲ್ಲಿ ಪರಭಾಷಾ ಅಬ್ಬರ ಜೋರಾಗಿರಲಿದೆ.

ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಪರಭಾಷಾ ಸ್ಟಾರ್‌ ಸಿನಿಮಾಗಳು ಸಂಕ್ರಾಂತಿಗೆ ಅಖಾಡಕ್ಕೆ ಇಳಿಯುತ್ತಿವೆ. ಹೀಗಾಗಿ, ಸಂಕ್ರಾಂತಿಗೆ ಕನ್ನಡದಿಂದ ಯಾವುದೇ ದೊಡ್ಡ ಸ್ಟಾರ್‌ ಸಿನಿಮಾಗಳು ಘೋಷಣೆಯಾಗಿಲ ತಮಿಳಿನ ಎರಡು ಹಾಗೂ ತೆಲುಗಿನ ಎರಡು ಸಿನಿಮಾಗಳು ಸಂಕ್ರಾಂತಿಗೆ ಅಭಿಮಾನಿಗಳನ್ನು ರಂಜಿಸಲಿವೆ.

ತಮಿಳಿನಿಂದ ವಿಜಯ್‌ ನಟನೆಯ “ವಾರಿಸು’ ಹಾಗೂ ಅಜಿತ್‌ ನಟನೆಯ “ತುನಿವು’ ಚಿತ್ರಗಳು ಬಿಡುಗಡೆಯಾದರೆ, ತೆಲುಗಿನಿಂದ ಮೆಗಾಸ್ಟಾರ್‌ ಚಿರಂಜೀವಿ ನಟನೆಯ “ವಾಲ್ಟರ್‌ ವೀರಯ್ಯ’ ಹಾಗೂ ಬಾಲಕೃಷ್ಣ ನಾಯಕರಾ ಗಿರುವ “ವೀರಸಿಂಹ ರೆಡ್ಡಿ’ ಚಿತ್ರಗಳು ಸಂಕ್ರಾಂತಿಗೆ ತೆರೆಕಾಣುತ್ತಿವೆ. ಈ ಎಲ್ಲಾ ನಟರಿಗೂ ದೊಡ್ಡ ಫ್ಯಾನ್‌ಬೇಸ್‌ ಇರುವುದರಿಂದ ಸಿನಿಮಾಗಳು “ಹಬ್ಬ’ವಾಗಲಿದೆ. “ವಾರಿಸು’ ಹಾಗೂ “ತುನಿವು’ ಚಿತ್ರಗಳು ಜ.11ರಂದು ತೆರೆಕಂಡರೆ, ತೆಲುಗಿನ “ವೀರ ಸಿಂಹ ರೆಡ್ಡಿ’ ಜ.12ರಂದು ಹಾಗೂ “ವಾಲ್ಟರ್‌ ವೀರಯ್ಯ’ ಜ.13ರಂದು ಬಿಡುಗಡೆಯಾಗುತ್ತಿವೆ ಈಗಾಗಲೇ ಈ ಸಿನಿಮಾಳ ಹಾಡು, ಟೀಸರ್‌, ಟ್ರೇಲರ್‌ ಹಿಟ್‌ಲಿಸ್ಟ್‌ ಸೇರುವ ಮೂಲಕ ಸಿನಿಮಾ ಅಭಿಮಾನಿಗಳಲ್ಲಿ ಕ್ರೇಜ್‌ ಕೂಡಾ ಹೆಚ್ಚಾಗಿದೆ. ಹಾಗಾಗಿ, ಸಂಕ್ರಾಂತಿಗೆ ಕರ್ನಾಟಕದಲ್ಲೂ ಪರಭಾಷಾ ಸಿನಿಮಾಗಳ ಅಬ್ಬರ ಜೋರಾಗಿಯೇ ಇರಲಿದೆ.

‌ಕನ್ನಡದಿಂದ ಹೊಸಬರ ಸಿನಿಮಾ

ಮೊದಲೇ ಹೇಳಿದಂತೆ ಕನ್ನಡದಿಂದ ಯಾವುದೇ ಸ್ಟಾರ್‌ ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹೊಸಬರ ಒಂದೆರಡು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದಕ್ಕೆ ಕಾರಣ ಚಿತ್ರಮಂದಿರಗಳ ಸಮಸ್ಯೆ. ಹೌದು, ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಪರಭಾಷೆಯ 4 ಚಿತ್ರಗಳು ಕೂಡಾ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಹಾಗಾಗಿ, ಕನ್ನಡ ಚಿತ್ರಗಳಿಗೆ ಮತ್ತೆ ಚಿತ್ರಮಂದಿರಗಳ ಸಮಸ್ಯೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋ ಸಮಸ್ಯೆ ಕಾಡಲಿದೆ.

ಜನವರಿ ಬಿಡುಗಡೆಯಲ್ಲಿ ಇಳಿಕೆ

ಹೊಸ ವರ್ಷದಲ್ಲಿ ಸಾಲು ಸಾಲು ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆಯಾದರೂ ಜನವರಿಯಲ್ಲಿ ಮಾತ್ರ ಬಿಡುಗಡೆಯ ಸಂಖ್ಯೆಯಲ್ಲಿ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ. ಈ ವಾರ 9 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ಮುಂದಿನ ವಾರ ಮೂರ್‍ನಾಲ್ಕು ಹಾಗೂ ಜ.20ಕ್ಕೆ ಮೂರ್‍ನಾಲ್ಕು ಸಿನಿಮಾಗಳಷ್ಟೇ ತೆರೆಕಾಣುತ್ತಿವೆ. ಅದಕ್ಕೆ ಸಂಕ್ರಾಂತಿಗೆ ತೆರೆಕಾಣುತ್ತಿರುವ ಪರಭಾಷಾ ಸಿನಿಮಾಗಳು ಒಂದು ಕಡೆಯಾದರೆ, ಜ.25ರಂದು ಶಾರುಖ್‌ ಖಾನ್‌ “ಪಠಾಣ್‌’ ಹಾಗೂ ಜ.26ರಂದು ದರ್ಶನ್‌ “ಕ್ರಾಂತಿ’ ತೆರೆಗೆ ಬರುತ್ತಿರುವುದು ಮತ್ತೂಂದು ಕಾರಣ. ಸದ್ಯ “ಕ್ರಾಂತಿ’ ಜೊತೆ ಕನ್ನಡದಿಂದ ಯಾವ ಸಿನಿಮಾವೂ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ.

ವಿಜಯ್ ಗ್ರ್ಯಾಂಡ್ ಎಂಟ್ರಿ

ನಟ ದುನಿಯಾ ವಿಜಯ್‌ ತೆಲುಗಿನ “ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಕೃಷ್ಣ ಅವರ ಎದುರು ವಿಲನ್‌ ಆಗಿ ಅಬ್ಬರಿಸಿದ್ದಾರೆ. ಸಖತ್‌ ರಗಡ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ್‌ “ವೀರಸಿಂಹರೆಡ್ಡಿ’ ಚಿತ್ರದ ಮೂಲಕ ತೆಲುಗಿಗೆ ಗ್ರ್ಯಾಂಡ್‌ ಎಂಟ್ರಿಕೊಡಲಿದ್ದಾರೆ. ಇನ್ನು, ಕನ್ನಡದಲ್ಲಿ ಅವರ ನಿರ್ದೇಶನ, ನಟನೆಯ “ಭೀಮ’ ಚಿತ್ರ ಚಿತ್ರೀಕರಣದಲ್ಲಿದ್ದು, ಈ ವರ್ಷವೇ ತೆರೆಕಾಣಲಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.