ಸುಡಾನ್ ಗೆ ಭಾರತದ ಪೂರ್ಣ ಮಹಿಳಾ ಶಾಂತಿಪಾಲನಾ ಪಡೆ
ಮಹಿಳಾ ಶಾಂತಿಪಾಲಕರ ಅತಿದೊಡ್ಡ ಘಟಕ ನೇಮಕ
Team Udayavani, Jan 7, 2023, 7:15 AM IST
ನವದೆಹಲಿ: ವಿಶ್ವಸಂಸ್ಥೆ ಶಾಂತಿಪಾಲನೆ ಯೋಜನೆಯಲ್ಲಿ ಭಾರತದ ಮಹಿಳಾ ಶಾಂತಿಪಾಲಕರ ಅತಿದೊಡ್ಡ ತುಕಡಿ ನಿಯೋಜಿಸಲು ಭಾರತ ಸರ್ವಸನ್ನದ್ಧಾಗಿದ್ದು, ಈ ಮೂಲಕ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ.
ಸುಡಾನ್‌ನ ಅಬೈ ಪ್ರದೇಶದಲ್ಲಿ ವಿಶ್ವಸಂಸ್ಥೆ ಮಧ್ಯಂತರ ಭದ್ರತಾಪಡೆಯ (ಯುಎನ್‌ಐಎಸ್‌ಎಫ್ಎ) ಭಾರತೀಯ ಬೆಟಾಲಿಯನ್ ಭಾಗವಾಗಿ ಇಬ್ಬರು ಅಧಿಕಾರಿ ಗಳು ಮತ್ತು ಇತರೆ ರ್‍ಯಾಂಕ್‌ನ 25 ಮಹಿಳಾ ಶಾಂತಿಪಾಲಕರ ತುಕಡಿಯನ್ನು ನಿಯೋಜಿಸಲು ಭಾರತ ಸಿದ್ಧತೆ ನಡೆಸಿದೆ. ಇದು ವಿಶ್ವಸಂಸ್ಥೆ ಮಿಷನ್‌ನಲ್ಲಿ ಈ ವರೆಗೆ ನೇಮಕಗೊಂಡಿರುವ ಭಾರತೀಯ ಮಹಿಳಾ ಶಾಂತಿಪಾಲಕರ ಪೈಕಿ ಅತಿದೊಡ್ಡ ಘಟಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರಿಗೆ ಎಲ್ಲಾಕ್ಷೇತ್ರದಲ್ಲೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಬದ್ಧವಾಗಿದೆ ಎಂಬುದಕ್ಕೆ ಈ ನಿಯೋಜನೆ ನಿದರ್ಶನವಾಗಿದೆ. ಇದಕ್ಕೂ ಮುನ್ನ 2007ರಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನೆ ಯೋಜನೆಯ ಭಾಗವಾಗಿ ಭಾರತ, ಸಂಪೂರ್ಣ ಮಹಿಳಾ ತುಕಡಿಯನ್ನು ನೇಮಿಸಿ, ಸಂಪೂರ್ಣ ಮಹಿಳಾ ಘಟಕವನ್ನು ನೇಮಿಸಿದ ಮೊದಲ ದೇಶ ಎನ್ನುವ ಖ್ಯಾತಿಗೂ ಪಾತ್ರವಾಗಿತ್ತು. ಈಗ ಸುಡಾನ್‌ನ ಸಂಘರ್ಷಗಳ ಕೇಂದ್ರಬಿಂದುವಾಗಿರುವ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಸವಾಲಿನ ವಿಚಾರವಾಗಿರುವ ಅಬೈ ಪ್ರಾಂತ್ಯದಲ್ಲಿ ಅತಿದೊಡ್ಡ ಘಟಕವನ್ನು ನೇಮಿಸುತ್ತಿರುವುದು ಮಾನ್ಯತೆ ಪಡೆದುಕೊಂಡಿದೆ.
ನಾರಿ ಶಕ್ತಿಗೆ ಮೋದಿ ಶ್ಲಾಘನೆ
ಸುಡಾನ್ ನಲ್ಲಿ ಭಾರತದ ಮಹಿಳಾ ಶಾಂತಿಪಾ ಲಕರ ಪಡೆ ನೇಮಕವಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಸೇನೆಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತದ ನಾರಿ ಶಕ್ತಿ ಭಾಗವಹಿಸುವಿಕೆಯಿಂದಾಗಿ ಹೆಚ್ಚು ಸಂತೋಷವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.