ಆಟೊಮೊಬೈಲ್: ಮೂರನೇ ಸ್ಥಾನಕ್ಕೆ ಏರಿದ ಭಾರತ
ಹೊಸ ವಾಹನಗಳ ಮಾರಾಟದಲ್ಲಿ ಜಪಾನ್ ಹಿಂದಿಕ್ಕಿದ ಇಂಡಿಯಾ
Team Udayavani, Jan 6, 2023, 7:20 AM IST
ನವದೆಹಲಿ: ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಭಾರತ ಜಪಾನ್ ಅನ್ನು ಹಿಂದಿಕ್ಕುವ ಮೂಲಕ ಮೂರನೇ ಸ್ಥಾನಕ್ಕೆ ಏರಿದೆ. ವರದಿಗಳ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ಒಟ್ಟು 4.25 ಮಿಲಿಯನ್ ಹೊಸ ವಾಹನಗಳು ಮಾರಾಟವಾಗಿವೆ. ಇದೇ ವರ್ಷ ಜಪಾನ್‌ನಲ್ಲಿ 4.2 ಮಿಲಿಯನ್ ವಾಹನಗಳು ಮಾರಾಟವಾಗಿವೆ.
ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ ಬಿಡುಗಡೆಗೊಳಿಸಿದ ಡೇಟಾ ಪ್ರಕಾರ, 2022ರ ಜನವರಿಯಿಂದ ನವೆಂಬರ್‌ವರೆಗೆ ಭಾರತದಲ್ಲಿ ಒಟ್ಟು 4.13 ಮಿಲಿಯನ್ ಹೊಸ ವಾಹನಗಳು ಮಾರಾಟವಾಗಿವೆ. ಡಿಸೆಂಬರ್ ಸೇಲ್ಸ್ ಗಮನಿಸಿದರೆ ಈ ಸಂಖ್ಯೆಯು 4.25 ಮಿಲಿಯನ್‌ಗೆ ತಲುಪಿದೆ. ಈ ಡೇಟಾದಲ್ಲಿ ವಾಣಿಜ್ಯ ವಾಹನಗಳ ಮಾರಾಟ ಸೇರ್ಪಡೆಯಾಗಿಲ್ಲ. ಟಾಟಾ ಮೋಟರ್ ಮತ್ತು ಇತರೆ ಕಂಪನಿಗಳು ಇನ್ನೂ ವಾಣಿಜ್ಯ ವಾಹನಗಳ ಮಾರಾಟದ ಮಾಹಿತಿ ಬಿಡುಗಡೆ ಮಾಡಿಲ್ಲ.
ನಂಬರ್ ಒನ್ ಸ್ಥಾನದಲ್ಲಿ ಚೀನ ಮುಂದುವರಿದಿದ್ದು, ಕಳೆದ ವರ್ಷ ಆ ದೇಶದಲ್ಲಿ 26.27 ಮಿಲಿಯನ್ ಹೊಸ ವಾಹನಗಳು ಮಾರಾಟವಾಗಿವೆ. 15.4 ಮಿಲಿಯನ್ ವಾಹನಗಳ ಮಾರಾಟ ಆಗಿರುವ ಅಮೆರಿಕವು ಎರಡನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.