ಏಷ್ಯಾ ರಾಷ್ಟ್ರಗಳ ಜತೆಗೆ ರೂಪಾಯಿ ವಹಿವಾಟು?
ಜ.25ಕ್ಕೆ ಗ್ರೀನ್ ಬಾಂಡ್ ಬಿಡುಗಡೆ
Team Udayavani, Jan 7, 2023, 6:35 AM IST
ನವದೆಹಲಿ: ದಕ್ಷಿಣ ಏಷ್ಯಾ ದೇಶಗಳೊಂದಿಗಿನ ಭಾರತದ ವ್ಯಾಪಾರ ವಹಿವಾಟು ಸುಲಭಗೊಳಿಸುವ ನಿಟ್ಟಿನಲ್ಲಿ, ಈ ರಾಷ್ಟ್ರಗಳೊಂದಿಗಿನ ವ್ಯವಹಾರವನ್ನು ರೂಪಾಯಿಗಳಲ್ಲೇ ನಡೆಸುವುದರ ಕುರಿತು ಕೇಂದ್ರಸರ್ಕಾರ ಹಾಗೂ ಆರ್‌ಬಿಐ ಮಾತುಕತೆ ನಡೆಸುತ್ತಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಸಮಾವೇಶದಲ್ಲಿ ಈ ವಿಚಾರದ ಕುರಿತು ಮಾಹಿತಿ ನೀಡಿರುವ ಅವರು, ಜಾಗತಿಕ ವ್ಯಾಪಾರ ದೃಷ್ಟಿಕೋನದಿಂದ ದಕ್ಷಿಣ ಏಷ್ಯಾ ರಾಷ್ಟ್ರಗಳು ಪ್ರಾದೇಶಿಕ ವ್ಯವಹಾರಗಳಿಗೆ ಮಾನ್ಯತೆ ನೀಡುವುದು ಅಗತ್ಯವಾಗಿದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಈ ಹಿನ್ನೆಲೆ ವ್ಯವಹಾರ ಸುಲಭಗೊಳಿಸಲು ರಾಷ್ಟ್ರಗಳ ನಡುವಿನ ವಹಿವಾಟನ್ನು ರೂಪಾಯಿಗಳಲ್ಲಿ ಇತ್ಯರ್ಥಗೊಳಿಸುವುದು ಉತ್ತಮ ಆಯ್ಕೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
ಜ.25ಕ್ಕೆ ಗ್ರೀನ್ ಬಾಂಡ್ ಬಿಡುಗಡೆ:
ಪರಿಸರ ಸ್ನೇಹಿ ಮೂಲಸೌಕರ್ಯಗಳ ಸ್ಥಾಪನೆಗಾಗಿ ರೂಪಿಸಿರುವ ಗ್ರೀನ್ ಬಾಂಡ್ ಯೋಜನೆಯ ಚೊಚ್ಚಲ ಬಾಂಡ್ ಅನ್ನು ಜನವರಿ 25 ಹಾಗೂ ಫೆಬ್ರವರಿ 9ರಂದು ಬಿಡುಗಡೆಗೊಳಿಸುವುದಾಗಿ ಆರ್‌ಬಿಐ ತಿಳಿಸಿದೆ. ಜತೆಗೆ ಬಾಂಡ್‌ಗಳು ತಲಾ 8 ಸಾವಿರ ಕೋಟಿ ರೂ, ಮೌಲ್ಯದ್ದಾಗಿವೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.