ಶನಿವಾರದ ರಾಶಿ ಫಲ: ಈ ರಾಶಿಯವರಿಗೆ ಇಂದು ಅಭಿವೃದ್ಧಿದಾಯಕ ಧನಾರ್ಜನೆ
Team Udayavani, Jan 7, 2023, 7:20 AM IST
ಮೇಷ: ದೈರ್ಯ ಉತ್ಸಾಹದಿಂದ ಕೂಡಿದ ದಿನ. ಭೂಮಿ ವಾಹನಾದಿಗಳಿಂದ ನಿರೀಕ್ಷಿತ ಧನಲಾಭ. ಗುರುಹಿರಿಯರ ಉತ್ತಮ ಮಾರ್ಗದರ್ಶನ ವ್ಯವಹಾರಗಳಲ್ಲಿ ಅಧಿಕ ಶ್ರಮ. ನೂತನ ಮಿತ್ರರ ಸಮಾಗಮ. ದಾಂಪತ್ಯ ತೃಪ್ತಿದಾಯಕ.
ವೃಷಭ: ಉದ್ಯೋಗ ವ್ಯವಹಾರದಲ್ಲಿ ಜವಾಬ್ದಾರಿಯುತ ನಡೆಯಿಂದ ಉತ್ತಮ ಪ್ರಗತಿ. ಆರೋಗ್ಯ ವೃದ್ಧಿ. ಪಾಲುದಾರಿಕಾ ಚಟುವಟಿಕೆಗಳಲ್ಲಿ ಗೌರವ ಆದರಾದಿ ಪ್ರಾಪ್ತಿ. ಅಭಿವೃದ್ಧಿದಾಯಕ ಧನಾರ್ಜನೆ. ಸಾಂಸಾರಿಕ ಸುಖ ಉತ್ತಮ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ.
ಮಿಥುನ: ಜಲೋತ್ಪನ್ನ ವಸ್ತುಗಳಿಂದಲೂ, ಆಹಾರ ಉದ್ಯಮಗಳಿಂದಲೂ ಪಾಲುದಾರಿಕಾ ವ್ಯವಹಾರಗಳಿಂದ ಅನುಕೂಲಕರ ಪರಿಸ್ಥಿತಿ. ನಿರೀಕ್ಷಿತ ಧನಾರ್ಜನೆ. ಉತ್ತಮ ವಾಕ್ಚತುರತೆ. ಸಹೋದ್ಯೋಗಿ ಗಳಿಂದ ಸಹಕಾರ. ಸಾಂಸಾರಿಕ ಸುಖ ಮಧ್ಯಮ.
ಕರ್ಕ: ಅನಿರೀಕ್ಷಿತ ಗೌರವ ಪ್ರಾಪ್ತಿ. ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾಗಮ. ಮಕ್ಕಳು, ಸಂಸಾರದಿಂದ, ವ್ಯವಹಾರದಿಂದ ತೃಪ್ತಿ ಸಮಾಧಾನ. ಧಾರ್ಮಿಕ ಕೆಲಸಗಳಲ್ಲಿ ಭಾಗಿ. ಸಾರ್ವಜನಿಕ ಸಂಪರ್ಕ ಕಾರ್ಯದಲ್ಲಿ ಶ್ರೇಯಸ್ಸು. ಇತ್ಯಾದಿ ಶುಭ ಫಲ.
ಸಿಂಹ: ದೀರ್ಘ ಪ್ರಯಾಣ. ವಿದೇಶ ಮೂಲ ವ್ಯವಹಾರದಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ. ನೂತನ ಉದ್ಯೋಗ ವ್ಯವಹಾರಕ್ಕೆ ಅವಕಾಶ. ಆರೋಗ್ಯ ಮಧ್ಯಮ. ಆಹಾರಾದಿ ಸೇವನೆಯಲ್ಲಿ ಎಚ್ಚರಿಕೆ ವಹಿಸಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕನ್ಯಾ: ಆತ್ಮೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜ್ಞಾನಾರ್ಜನೆಗೆ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾರ್ಜನೆಗೆ ಸರಿಸಮನಾದ ಖರ್ಚು. ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಅಗತ್ಯ. ಹಿರಿಯರ ಆರೋಗ್ಯ ಬಗ್ಗೆ ಗಮನವಿರಲಿ.
ತುಲಾ: ಉತ್ತಮ ಆರೋಗ್ಯ. ಅಧಿಕ ಧನಾರ್ಜನೆ. ಗೃಹ ವಾಹನ ಭೂಮಿ ವಿಚಾರಗಳಲ್ಲಿ ಒಳ್ಳೆ ಬದಲಾವಣೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ. ನಿರೀಕ್ಷಿತ ಸ್ಥಾನ ಲಾಭ. ಗುರುಹಿರಿಯರಿಂದ ಸಂತೋಷದ ವಾರ್ತೆ.
ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಗಮನದಿಂದ ಯಶಸ್ಸು. ಅಧಿಕ ಧನಾರ್ಜನೆ ಅವಕಾಶ. ಗುರುಹಿರಿಯ ಸಹಕಾರ ಮಾರ್ಗದರ್ಶನ. ದಾಂಪತ್ಯದಲ್ಲಿ ಹೆಚ್ಚಿದ ಪ್ರೀತಿ ವಾತ್ಸಲ್ಯ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇತ್ಯಾದಿ ಶುಭಫಲ.
ಧನು: ಸಣ್ಣ ಪ್ರಯಾಣದಿಂದ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಸಂಪಾದನೆ. ಕುಟುಂಬ ಸುಖ ವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ. ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ಕಾರ್ಯ ಸಪಲತೆ.
ಮಕರ: ಉತ್ತಮ ಧನಾಗಮವಿದ್ದರೂ ಖರ್ಚಿಗೆ ಹಲವುದಾರಿ. ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಮಾತಿನಲ್ಲಿ ತಾಳ್ಮೆ ಹಿಡಿತದಿಂದ ಸಫಲತೆ. ದಾಂಪತ್ಯ ಸುಖ ವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ.
ಕುಂಭ: ದೀರ್ಘ ಪ್ರಯಾಣದಿಂದ ನಿರೀಕ್ಷಿತ ಸುಖ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ ನಡೆಯಿಂದ ಪ್ರಗತಿ. ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಇರಲಿ. ಗುರು ಹಿರಿಯರ ಆರೋಗ್ಯ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮ ಪ್ರಗತಿ.
ಮೀನ: ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ. ಪಾಲುಗಾರಿಕಾ ವ್ಯವಹಾರಸ್ಥರು ಸಹನೆಯಿಂದ ಕಾರ್ಯಸಾಧಿಸಿಕೊಳ್ಳಿ. ಉದ್ಯೋಗಸ್ಥರಿಗೆ ಅಧಿಕ ಶ್ರಮದಿಂದ ಧನಾರ್ಜನೆ. ನೂತನ ಅವಕಾಶಗಳು ಒದಗಿ ಬರುವವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.