ಬದಲಾಗುತ್ತಿರುವ ಹವಾಮಾನ; ಆಲಿವ್ ರಿಡ್ಲಿ ಸಮುದ್ರ ಆಮೆಗಳ ಮೇಲೆ ದುಷ್ಪರಿಣಾಮ
ತಡವಾಗಿ ಮೊಟ್ಟೆ ಇಟ್ಟ ಸ್ಥಳದಲ್ಲಿ ಗೋವಾ ಅರಣ್ಯ ಇಲಾಖೆಯಿಂದ ಭದ್ರತೆ
Team Udayavani, Jan 7, 2023, 3:56 PM IST
ಪಣಜಿ: ಬದಲಾಗುತ್ತಿರುವ ಹವಾಮಾನವು ಆಲಿವ್ ರಿಡ್ಲಿ ಸಮುದ್ರ ಆಮೆಗಳ ಮೇಲೆ ಪರಿಣಾಮ ಬೀರಿದೆ. ನವೆಂಬರ್ ತಿಂಗಳಿನಲ್ಲಿ ಆಮೆಗಳು ಬರುತ್ತಿದ್ದವು. ಆದರೆ ಈ ಬಾರಿ ಎರಡು ತಿಂಗಳು ತಡವಾಗಿ ಅಂದರೆ ಜನವರಿ 1ರಂದು ಸಂಜೆ 7 ಗಂಟೆಗೆ ಆಮೆ ದಡದಲ್ಲಿ ಕಾಣಿಸಿಕೊಂಡು ಮೊಟ್ಟೆ ಇಟ್ಟಿದೆ. ಮೊಟ್ಟೆ ಇಡುವ ಜಾಗದಲ್ಲಿ ಅರಣ್ಯ ಇಲಾಖೆ ಸಿಬಂದಿ ಭದ್ರತೆ ಕೈಗೊಂಡಿದ್ದಾರೆ.
ಗೋವಾದ ಆಶ್ವೆಯ ಪ್ರಶಾಂತ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಕಡಲಾಮೆ ಮೊಟ್ಟೆ ಇಟ್ಟಿದೆ ಎಂದು ಭದ್ರತಾ ಸಿಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ, ಅವರು ಮೊಟ್ಟೆಗಳನ್ನು ಇಟ್ಟ ಜಾಗವನ್ನು ಬಲೆಯಿಂದ ಭದ್ರಪಡಿಸಿದರು. 1997 ರಿಂದ ತಂಬವಾಡ-ಮೋರ್ಜಿ ಪ್ರದೇಶದಲ್ಲಿ ಆಮೆ ಸಂರಕ್ಷಣಾ ಅಭಿಯಾನವನ್ನು ಜಾರಿಗೊಳಿಸಲಾಗಿದೆ. ಈ ಮೂಲಕವಾಗಿ ಕಡಲಾಮೆ ಮರಿಗಳನ್ನು ಕಡಲಿಗೆ ಸುರಕ್ಷಿತವಾಗಿ ಬಿಡುವಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ತೆಂಬವಾರದಲ್ಲಿ ಐನೂರು ಚದರ ಮೀಟರ್ ಜಾಗವನ್ನು ಆಗಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸಮುದ್ರ ಆಮೆಗಳ ಮೊಟ್ಟೆಗಳ ರಕ್ಷಣೆಗೆ ಮೀಸಲಿಟ್ಟಿದ್ದರು. ಇದೇ ಸ್ಥಳದಲ್ಲಿ ಅರಣ್ಯ ಇಲಾಖೆಯಿಂದ ಋತುಮಾನ ಅಧ್ಯಯನ ಕೇಂದ್ರವಾಗಿ ಗುಡಿಸಲು ನಿರ್ಮಿಸಲಾಗಿದೆ.
ಆಮೆಗಳು ಇಲ್ಲಿ ಮೊಟ್ಟೆ ಇಡಲು ಪ್ರತಿವರ್ಷ ಆಗಮಿಸುವ ಹಿನ್ನೆಲೆಯಲ್ಲಿ ಗೋವಾದ ಮೊರ್ಜಿ ಮತ್ತು ಮಾಂಡ್ರೆಯನ್ನು ಸೂಕ್ಷ್ಮ ಕರಾವಳಿ ಎಂದು ಘೋಷಿಸಲಾಯಿತು. ಆದರೆ 2022ರ ನಂತರದ ಈ ಕರಾವಳಿಯನ್ನು ವಾಣಿಜ್ಯ ವಲಯ ಎಂದು ಘೋಷಿಸಿ ಇಂಥದ್ದೊಂದು ಸುತ್ತೋಲೆಯನ್ನು ಸರ್ಕಾರಿ ಗೆಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಅಶ್ವೆ-ಮಾಂಡ್ರೆಯಲ್ಲಿ, ಸಮುದ್ರ ಆಮೆಗಳು ಮೊಟ್ಟೆ ಇಡುವ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ನಿರ್ಮಾಣವನ್ನು ಕಾಂಕ್ರೀಟ್ ಮಾಡಲಾಗಿಲ್ಲ. ಡೆನ್ಜಿಲ್ ಸಿಕ್ವೇರಾ, ಪರಿಸರವಾದಿ, ನೈಸರ್ಗಿಕ ತೀರವನ್ನು ಮತ್ತು ಪ್ರದೇಶದಲ್ಲಿ ಹಳೆಯ ಮರಗಳನ್ನು ಸಂರಕ್ಷಿಸಲು ಪ್ರಯತ್ನಿಸಿದ್ದಾರೆ.
ಕೆಲವೆಡೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕರಾವಳಿ ತಮ್ಮದೆಂದು ಭ್ರಮಿಸಿ ಕೆಲವರು ಜೀವನ ನಡೆಸುತ್ತಿದ್ದಾರೆ. ಅರಣ್ಯ ಸಚಿವ ರಾಣೆ ಒಮ್ಮೆಯಾದರೂ ಈ ಪ್ರದೇಶಕ್ಕೆ ಭೇಟಿ ನೀಡಿ ಈ ಕಟ್ಟಡಗಳನ್ನು ತಮ್ಮ ಕಣ್ಣಾರೆ ನೋಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಈ ಭಾಗದ ಪರಿಸರವಾದಿಗಳ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.