ಉಳ್ಳಾಲ: ಮಾದಕ ದ್ರವ್ಯ ಮಾರಾಟಕ್ಕೆ ಯತ್ನ: ಎಂಡಿಎಂಎ ಸಹಿತ ಆರೋಪಿ ಬಂಧನ
Team Udayavani, Jan 7, 2023, 9:01 PM IST
ಉಳ್ಳಾಲ: ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ ಡ್ರಗ್ಸ್ ಸೇರಿದಂತೆ 2,06,000 ರೂ. ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಗೇರುಕಟ್ಟೆ ನಿವಾಸಿ ಅಬ್ದುಲ್ಲಾ ಬಿ. ಯಾನೆ ಸದ್ದಾಂ ಬಂಧಿತ. ಆರೋಪಿ ನಾಟೆಕಲ್ ವಿಜಯನಗರ ಎನ್ನುವಲ್ಲಿ ಬೈಕ್‌ನಲ್ಲಿ ಬಂದು ಎಂಡಿಎಂಎ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದಾರೆ. ಬೈಕ್ ಮೇಲೆ ಕುಳಿತಿದ್ದವನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಯು ಅಕ್ರಮವಾಗಿ ನಿಷೇಧಿತ 8 ಗ್ರಾಂ ಎಂಡಿಎಂಎ ತಂದು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿಷೇಧಿತ ಮಾದಕ ವಸ್ತುವಿನ ಮೌಲ್ಯ 40,000 ರೂ. ಮತ್ತು ಮೊಬೈಲ್‌ಗಳು ಹಾಗೂ ಬೈಕ್‌ನ ಮೌಲ್ಯ 1,56,000 ಒಟ್ಟು 2,06,000 ರೂ ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಆಂಶುಕುಮಾರ್, ಡಿಸಿಪಿ ಅಪರಾಧ ಮತ್ತು ಸಂಚಾರ ದಿನೇಶ್ ಕುಮಾರ್ ಹಾಗೂ ಎಸಿಪಿ ದಿನಕರ ಶೆಟ್ಟಿ ಅವರ ನಿರ್ದೇಶನದಂತೆ ಇನ್‌ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪಿಎಸ್ಸೆ„ ಶರಣಪ್ಪ ಭಂಡಾರಿ ಹಾಗೂ ಸಿಬಂದಿ ಶಿವಕುಮಾರ್, ಪುರುಷೋತ್ತಮ, ಸುರೇಶ್, ಪ್ರಶಾಂತ ದೀಪಕ್, ಶೈಲೆಂದ್ರ, ಮಂಜಪ್ಪ ಅವರ ತಂಡ ಭಾಗವಹಿಸಿದ್ದರು.
ಇದನ್ನೂ ಓದಿ: ಕಾರ್ಕಳ: ಬಸ್ಸಿಗೆ ಬಿಡುತ್ತೇವೆಂದು ಹೇಳಿ ಬಂಗಾರ, ನಗದು ಎಗರಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.