ಪಚ್ಚನಾಡಿಯಲ್ಲಿ ಮುಂದುವರಿದ ಕಾರ್ಯಾಚರಣೆ: ಪರಿಸರದಲ್ಲಿ ಘಾಟು ಹೊಗೆ
Team Udayavani, Jan 8, 2023, 7:45 AM IST
ಮಂಗಳೂರು: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಪ್ರದೇಶದ ಹಳೆಯ ಲ್ಯಾಂಡ್ ಫಿಲ್ಲಿಂಗ್ ಪ್ರದೇಶದಲ್ಲಿ ತ್ಯಾಜ್ಯಕ್ಕೆ ಬಿದ್ದರುವ ಬೆಂಕಿಯ ಜ್ವಾಲೆಗಳು ಕಡಿಮೆಯಾಗಿದ್ದರೂ ಹೊಗೆ ಮಾತ್ರ ಇನ್ನೂ ಏಳುತ್ತಲೇ ಇದೆ.
ಶುಕ್ರವಾರ ಮಧ್ಯಾಹ್ನ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದಿದ್ದು, ತಡರಾತ್ರಿ ವರೆಗೂ ಶಮನ ಗೊಳಿಸುವ ಕೆಲಸ ಮಾಡಲಾಯಿತು. ಶನಿವಾರ ಮುಂಜಾನೆಯಿಂದ ಮತ್ತೆ ಕಾರ್ಯಾಚರಣೆ ನಡೆದಿದೆ. ಕದ್ರಿ ಮತ್ತು ಪಾಂಡೇಶ್ವರ ಮೊದಲಾದೆಡೆಗಳ 6 ಅಗ್ನಿಶಾಮಕ ವಾಹನಗಳು, ಸಿಬಂದಿ ಕಾರ್ಯಾಚರಣೆ ನಡೆಸಿದರು. ಜತೆಗೆ ಸುಮಾರು 9 ಟ್ಯಾಂಕರ್‌ಗಳ ನೆರವಿನಿಂದ ಅಗ್ನಿಶಾಮಕ ವಾಹನಗಳಿಗೆ ನಿರಂತರ ನೀರು ಪೂರೈಕೆ ಮಾಡಲಾಗಿದೆ.
ತ್ಯಾಜ್ಯದಿಂದ ದಿನವಿಡೀ ಹೊಗೆಯಾಡುತ್ತಿದ್ದು, ಬೋಂದೆಲ್, ಪದವಿನಂಗಡಿ, ಕಾವೂರು, ಕುಡುಪು, ಮಂದಾರ, ವಾಮಂಜೂರು ಮೊದಲಾದ ಪ್ರದೇಶಗಳಲ್ಲಿ ವಾತಾವರಣದಲ್ಲಿ ಘಾಟು ಸಹಿತ ಹೊಗೆ ವ್ಯಾಪಿಸಿದೆ. ಮಂದಾರ ಪ್ರದೇಶದ ಜನರು ಸಂಕಷ್ಟ ಅನುಭವಿಸಿದ್ದಾರೆ. ಕಾರ್ಯಾಚರಣೆಗೂ ಹೊಗೆ ಅಡ್ಡಿಯಾಗಿದೆ. ಡಂಪಿಂಗ್ ಯಾರ್ಡ್ ಪಕ್ಕದ ಎಸ್‌ಡಿಎಂ ಮಂಗಳಜ್ಯೋತಿ ಶಾಲೆಗೆ ರಜೆ ಘೋಷಿಸಲಾಗಿತ್ತು.
ಬೆಂಕಿ ಆಕಸ್ಮಿಕದ ಕುರಿತು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯೆ ನೀಡಿ, ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಹೊಗೆ ಸಂಪೂರ್ಣ ಶಮನಕ್ಕೆ ಇನ್ನೂ ಕೆಲವು ದಿನ ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.