ಪಡುಬಿದ್ರಿ: ಅಧಿಕಾರ ಸ್ಥಾಪನೆಯ ತಿಕ್ಕಾಟ… ಜಾರಂದಾಯ ದೈವದ ನೇಮಕ್ಕೆ ತಡೆ
Team Udayavani, Jan 8, 2023, 6:45 AM IST
ಪಡುಬಿದ್ರಿ: ಪಡುಹಿತ್ಲು ಜಾರಂದಾಯ ದೈವಸ್ಥಾನದ ಮೇಲೆ ಅಧಿಕಾರ ಸ್ಥಾಪನೆಯ ಸಲುವಾಗಿ ನಡೆಯುತ್ತಿರುವ ಎರಡು ಬಣಗಳ ತಿಕ್ಕಾಟವು ನ್ಯಾಯಾಲಯದ ಮೆಟ್ಟಿಲೇರಿದ್ದು ವಿಚಾರಣೆ ಮುಂದುವರಿದಿದೆ. ಈ ನಡುವೆ ಒಂದು ಬಣವು ಶನಿವಾರ ನಿಗದಿಗೊಳಿಸಿದ್ದ ಜಾರಂದಾಯ ದೈವದ ನೇಮವನ್ನು ನಡೆಯದಂತೆ ತಡೆಹಿಡಿದಿದೆ.
ಒಂದು ಊರು – ಒಂದು ಟ್ರಸ್ಟ್ – ಒಂದು ಮನೆ ನಡುವೆ ಈ ವ್ಯಾಜ್ಯ ಇದ್ದು, ನ್ಯಾಯಾಲಯದಲ್ಲಿದ್ದ ಮಧ್ಯಾವಧಿ ತಡೆಯಾಜ್ಞೆ ತೆರವಾದ ಕಾರಣ ಟ್ರಸ್ಟ್ನವರು ಹಾಗೂ ಊರಿನವರು ಒಳಪ್ರವೇಶಿಸದಂತೆ ಸಾನದ ಮನೆಯವರ ಪರ ಜಾರಂದಾಯ ಸೇವಾ ಸಮಿತಿಯು ದೈವಸ್ಥಾನದ ಬಾಗಿಲಿಗೆ ಜ. 6ರಂದು ರಾತ್ರಿ ಬೀಗ ಜಡಿದಿದೆ. ಪೊಲೀಸ್ ಕಾವಲನ್ನೂ ಹಾಕಲಾಗಿದೆ.
ಬೀಗ ತೆರೆಸುವುದು ನಮ್ಮ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ. ಕಾನೂನು ಸುವ್ಯವಸ್ಥೆಯಷ್ಟೇ ನಮ್ಮದು. ಶಾಂತಿ ಭಂಗವಾದಲ್ಲಿ ಎರಡೂ ಕಡೆಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾಪು ವೃತ್ತ ನಿರೀಕ್ಷಕ ಪೂವಯ್ಯ ತಿಳಿಸಿದ್ದಾರೆ.
ಸಾನದ ಮನೆಯಲ್ಲಿ ಪಡುಹಿತ್ಲು ಜಾರಂದಾಯ ಸೇವಾ ಟ್ರಸ್ಟ್ನ ನಿರ್ಮಾತೃ ದಿ| ಜಯ ಪೂಜಾರಿ ಅವರ ಉತ್ತರಕ್ರಿಯೆ ಶನಿವಾರ ನಡೆದಿದೆ. ಆದರೆ ಇತ್ತ ದೈವಕೋಲ ನಡೆಸಲಾಗದ್ದರಿಂದ 1,500 ಮಂದಿಗೆ ಸಿದ್ಧಪಡಿಸಿದ್ದ ಊಟವನ್ನು ಶಾಲಾ ಮಕ್ಕಳಿಗೆ ಹಂಚಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್ಪಾತ್ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.