ಕಾರು – ಟ್ರಕ್ ಅಪಘಾತ: ಐಎಎಸ್ ದಂಪತಿ ಸೇರಿ ಏಳು ಮಂದಿಗೆ ಗಾಯ; ಓರ್ವ ಗಂಭೀರ
Team Udayavani, Jan 9, 2023, 9:56 AM IST
ತಿರುವನಂತಪುರಂ: ಕೇರಳ ಗೃಹ ಕಾರ್ಯದರ್ಶಿ ಡಾ.ವಿ.ವೇಣು ದಂಪತಿ ಹಾಗೂ ಕುಟುಂಬ ಸಂಚಾರಿಸುತ್ತಿದ್ದ ಕಾರು ಟ್ರಕ್ ಗೆ ಢಿಕ್ಕಿಯಾಗಿ ಗಾಯಗಳಾದ ಘಟನೆ ಆಲಪ್ಪುಳ ಜಿಲ್ಲೆಯ ಕೊಟ್ಟುಕುಲಂಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ (ಜ.9 ರಂದು) ಮುಂಜಾನೆ ನಡೆದಿದೆ.
ಐಎಎಸ್ ದಂಪತಿ ಡಾ.ವೇಣು, ಶಾರದ ಮುರಳೀಧರನ್ ಮಗ ಶಬರಿ, ಚಾಲಕ ಅಭಿಲಾಶ್ ಹಾಗೂ ಕಾರಿನಲ್ಲಿದ್ದ ಇತರರಿಗೆ ಗಾಯಗಳಾಗಿವೆ.
ವೇಣು ಕುಟುಂಬ ಕಾರಿನಲ್ಲಿ ಕೊಚ್ಚಿಯಿಂದ ತಿರುವನಂತಪುರಕ್ಕೆ ತೆರಳುತ್ತಿತ್ತು. ಟ್ರಕ್ ಎರ್ನಾಕುಲಂ ಕಡೆಗೆ ಹೋಗುತ್ತಿತ್ತು. ಟ್ರಕ್ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಏಟಾಗಿದೆ.
ಘಟನೆಯಲ್ಲಿ ವೇಣು ಅವರ ಮೂಗು, ಹಣೆ ಮತ್ತು ಮೂತ್ರಕೋಶದ ಮೇಲೆ ಗಾಯಗಳಾಗಿವೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷದ ಜೂನ್ ನಲ್ಲಿ ವೇಣು ರಾಜ್ಯ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
Kerala Home Secy Dr V Venu, his wife Sarada Muraleedharan, their son, driver & two others got injured after a truck collided with their car near Kayamkulam today. All of them have been admitted to a pvt hospital in Parumala& their condition is out of danger now: Kayamkulam Police
— ANI (@ANI) January 9, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.