ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಪುರೋಹಿತ ವರ್ಗದಿಂದ ವ್ಯಾಪಕ ಆಕ್ರೋಶ
ಅರ್ಚಕರಿಂದ ರಾಹುಲ್ ಗಾಂಧಿ ಪ್ರತಿಕೃತಿ ದಹನ , ಕ್ಷಮೆಗೆ ಪಟ್ಟು
Team Udayavani, Jan 9, 2023, 8:14 PM IST
ನವದೆಹಲಿ: ‘ಭಾರತವು ಅರ್ಚಕರ ದೇಶವಲ್ಲ, ತಪಸ್ವಿಗಳ ದೇಶ’ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೂಜೆಯಲ್ಲಿ ತೊಡಗಿರುವವರನ್ನು ಅವಮಾನಿಸಿದ್ದಾರೆ ಎಂದು ಸೋಮವಾರ ಹಲವು ಪುರೋಹಿತರು ಆರೋಪಿಸಿ ಅಸಮಾಧಾನ ಹೊರ ಹಾಕಿದ್ದಾರೆ.
ಕಾಂಗ್ರೆಸ್ ‘ತಪಸ್ಯ’ದಲ್ಲಿ ನಂಬಿಕೆ ಇಟ್ಟಿದ್ದರೆ, ಬಿಜೆಪಿ ಪೂಜೆಯ ಸಂಘಟನೆಯಾಗಿದೆ ಎಂದು ರಾಹುಲ್ ಗಾಂಧಿ ಹರಿಯಾಣದಲ್ಲಿ ಹೇಳಿದ್ದರು. ಬಿಜೆಪಿ-ಆರ್‌ಎಸ್‌ಎಸ್ ಜನರನ್ನು ಪೂಜಿಸಲು ಒತ್ತಾಯಿಸುತ್ತದೆ, ಭಾರತವು ತಪಸ್ವಿಗಳ ದೇಶವಾಗಿದೆ ಮತ್ತು ಪುರೋಹಿತರ ದೇಶ ಅಲ್ಲ ಎಂದು ಹೇಳಿದ್ದರು.
ಪುರೋಹಿತರು ಪ್ರಧಾನ ಪಾತ್ರ ವಹಿಸಿರುವ ಭಾರತದ ಪ್ರಾಚೀನ ಸಂಸ್ಕೃತಿ ಸಂಪ್ರದಾಯಗಳನ್ನು ಗಾಂಧಿ ಅವಮಾನಿಸಿದ್ದಾರೆ. ಗಾಂಧಿಯವರ ಹೇಳಿಕೆಗಳು ಬ್ರಾಹ್ಮಣರ ವಿರುದ್ಧವಾಗಿದೆ ಎಂದು ಯುವತೀರ್ಥ ಪುರೋಹಿತ್ ಮಹಾಸಭಾದ ಉಜ್ವಲ್ ಪಂಡಿತ್ ಆಕ್ರೋಶ ಹೊರ ಹಾಕಿದ್ದಾರೆ.
ಗಾಂಧಿ ವಂಶಸ್ಥರು ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಅವರ “ಮೊಹಬ್ಬತ್ ಕಿ ದುಕಾನ್” ಎಂದು ಬಣ್ಣಿಸಿದ್ದಾರೆ, ಆದರೆ ಈಗ ದ್ವೇಷದ ಬಗ್ಗೆ ಮಾತನಾಡುತ್ತಿದ್ದಾರೆ. ಒಂದೆಡೆ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದು ಮತ್ತೊಂದೆಡೆ ಈ ರೀತಿಯ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಮಾತನಾಡುವ ಮುನ್ನ ಯೋಚಿಸಬೇಕು. ನಂತರ ಅರ್ಚಕರನ್ನು ಸಮುದ್ರಕ್ಕೆ ಎಸೆಯಬೇಕೇ ಎಂದು ಎಂದು ಸ್ವಾಮಿ ದೀಪಂಕರ್ ಕೇಳಿದ್ದಾರೆ.
ಗಂಗೋತ್ರಿಧಾಮದ ರಜನಿಕಾಂತ್ ಸೆಮ್ವಾಲ್ ಮಾತನಾಡಿ, ಸನಾತನ ಧರ್ಮದ ಭೂಮಿಯಲ್ಲಿ ಪುರೋಹಿತರಿಗೆ ಪ್ರಮುಖ ಸ್ಥಾನವಿದೆ. ಪುರಾತನ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದ್ದಾರೆ, ಗಾಂಧೀಜಿಯವರು ಅದನ್ನೇ ಅಧ್ಯಯನ ಮಾಡುವಂತೆ ಒತ್ತಾಯಿಸಿದ್ದರು ಎಂದರು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಸೇರಿದಂತೆ ಕೆಲವೆಡೆ ಪುರೋಹಿತರು ಪ್ರತಿಭಟನೆ ನಡೆಸಿ ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿದರು. ಜಾರ್ಖಂಡ್‌ನ ದೇವಸ್ಥಾನ ಪಟ್ಟಣವಾದ ದಿಯೋಘರ್‌ನಲ್ಲಿ, ತಮ್ಮ ಸಂಪ್ರದಾಯವನ್ನು ಅವಮಾನಿಸಿದ್ದಕ್ಕಾಗಿ ಅರ್ಚಕರು ಕಾಂಗ್ರೆಸ್ ನಾಯಕರಿಂದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.