ಆಕಾಶ ಮಾರ್ಗದಲ್ಲೇ ವಿಮಾನದೊಳಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕ…ವಿಡಿಯೋ ವೈರಲ್; ನೆಟ್ಟಿಗರ ಆಕ್ರೋಶ
Team Udayavani, Jan 10, 2023, 1:46 PM IST
ಢಾಕಾ: ಇತ್ತೀಚೆಗೆ ವಿಮಾನ ಪ್ರಯಾಣಿಕರ ಒಂದಲ್ಲಾ ಒಂದು ಕಿರಿಕ್ ಗಳು ಸುದ್ದಿಯಾಗುತ್ತಲೇ ಇರುತ್ತದೆ. ಗಗನಸಖಿಯರನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುವುದು, ಮಹಿಳೆಯರ ಮೂತ್ರ ವಿಸರ್ಜಿಸುವುದು ಹೀಗೆ ಪ್ರಯಾಣಿಕರ ರಂಪಾಟ ನಡೆಯುತ್ತಿದ್ದು, ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಬಾಂಗ್ಲಾದೇಶದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮಾರಾಮಾರಿಯಲ್ಲಿ ತೊಡಗಿರುವ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಟಾಂಕೋ ಬಿಸ್ವಾಸ್ ಎಂಬ ಟ್ವೀಟರ್ ಬಳಕೆದಾರರೊಬ್ಬರು ಶೇರ್ ಮಾಡಿರುವ ವಿಡಿಯೋದಲ್ಲಿ, ಬಿಮಾನ್ ಬಾಂಗ್ಲಾದೇಶ್ ಏರ್ ವೇಸ್ ನೊಳಗೆ ಆಕಾಶ ಮಾರ್ಗದಲ್ಲಿರುವಾಗಲೇ ಶರ್ಟ್ ಬಿಚ್ಚಿಕೊಂಡ ಪ್ರಯಾಣಿಕನೊಬ್ಬ ಮತ್ತೊಬ್ಬ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ.
ಆದರೆ ಈ ಘಟನೆ ಯಾವಾಗ ನಡೆದದ್ದು, ವಿಮಾನದ ಮಾರ್ಗದ ಕುರಿತು ನಿಖರ ಮಾಹಿತಿ ಇಲ್ಲ ಎಂದು ವರದಿ ವಿವರಿಸಿದೆ. ಶರ್ಟ್ ಬಿಚ್ಚಿಕೊಂಡಿದ್ದ ಪ್ರಯಾಣಿಕ, ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಶರ್ಟ್ ಬಿಚ್ಚಿಕೊಂಡಿದ್ದ ಪ್ರಯಾಣಿಕ ಅಳುತ್ತಿರುವಂತಿದೆ. ಇತರ ಕೆಲವು ಸಹ ಪ್ರಯಾಣಿಕರು ಇಬ್ಬರ ಜಗಳ ತಪ್ಪಿಸಲು ಪ್ರಯತ್ನಿಸುತ್ತಿದ್ದು, ಈ ವಿಡಿಯೋದಲ್ಲಿ ಮತ್ತೊಬ್ಬ ಪ್ರಯಾಣಿಕನ ಮುಖ ವಿಡಿಯೋದಲ್ಲಿ ಗೋಚರಿಸುವುದಿಲ್ಲ.
Another “Unruly Passenger” 👊
This time on a Biman Bangladesh Boeing 777 flight!🤦♂️ pic.twitter.com/vnpfe0t2pz— BiTANKO BiSWAS (@Bitanko_Biswas) January 7, 2023
ವಿಮಾನದಲ್ಲಿನ ಹೊಯ್ ಕೈ ಘಟನೆ ಬಗ್ಗೆ ಇಂಟರ್ನೆಟ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆ ವಿಮಾನದಲ್ಲಿ ನಿರಂತರ ಎಂಬಂತಾಗಿದೆ. ಇದೊಂದು ದಕ್ಷಿಣ ಏಷ್ಯಾದ ಸಮಸ್ಯೆಯಾಗಿದೆ. ಅನಾಗರಿಕರಿಗೆ ವಿದೇಶಿ ಕೆಲಸ ದೊರಕುತ್ತದೆ, ಆದರೆ ಅವರಿಗೆ ಸಭ್ಯತೆಯ ಪಾಠ ಕಲಿಸಿಕೊಟ್ಟಿಲ್ಲ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.