ಜ. 15: ಸೇನಾ ಶಕ್ತಿ ಪ್ರದರ್ಶನ: ಉದ್ಯಾನನಗರಿಯಲ್ಲಿ ಮೊದಲ ಬಾರಿಗೆ ಸೇನಾ ದಿನ ಆಚರಣೆ
Team Udayavani, Jan 11, 2023, 6:20 AM IST
ಬೆಂಗಳೂರು: ದಕ್ಷಿಣ ಭಾರತದಲ್ಲಿ ನಡೆಯಲಿರುವ ಮೊತ್ತಮೊದಲ ಭಾರತೀಯ ಸೇನಾ ದಿನಾಚರಣೆಗೆ ಉದ್ಯಾನ ನಗರಿ ಸಜ್ಜಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಹೊರಗಡೆ ಇದೇ ಪ್ರಥಮ ಬಾರಿಗೆ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆ್ಯಂಡ್ ಸೆಂಟರ್ (ಎಂಇಜಿ) ಮೈದಾನ ಸಾಕ್ಷಿಯಾಗಲಿದೆ.
ಇಲ್ಲಿನ ಗೋವಿಂದಸ್ವಾಮಿ ಪರೇಡ್ ಮೈದಾನದಲ್ಲಿ ಪೂರ್ವಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಸೇನಾ ದಿನದ ಅಂಗವಾಗಿ ಜ. 15ರಂದು ದೇಶದ ಪ್ರಮುಖ ಎಂಟು ರೆಜಿಮೆಂಟ್‌ಗಳ ಆಕರ್ಷಕ ಪಥಸಂಚಲನ, ದೇಶೀಯ ನಿರ್ಮಿತ ರಕ್ಷಣ ಉಪಕರಣಗಳ ಪ್ರದರ್ಶನ, ಸೇನಾ ಸಾಮರ್ಥ್ಯ ಪ್ರದರ್ಶನ ನಡೆಯಲಿದೆ. ಅಂದು ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಭೂಸೇನಾ ಮುಖ್ಯಸ್ಥ ಜ| ಮನೋಜ್ ಪಾಂಡೆ ಭಾಗವಹಿಸಲಿದ್ದಾರೆ ಎಂದು ಕೇರಳ ಆ್ಯಂಡ್ ಕರ್ನಾಟಕ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಜ| ರವಿ ಮುರುಗನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವೈಮಾನಿಕ ಕಸರತ್ತು
ಪ್ರಮುಖ ಆಕರ್ಷಣೆ
ಧ್ರುವ ಮತ್ತು ರುದ್ರ ಹೆಲಿಕಾಪ್ಟರ್‌ಗಳಿಂದ ವೈಮಾನಿಕ ಕಸರತ್ತು ಪ್ರದರ್ಶನ, ಬಹುಹಂತದ ರಾಕೆಟ್ ಉಡ್ಡಯನ ವ್ಯವಸ್ಥೆ “ಪಿನಾಕಾ’, ಸ್ವಯಂಚಾಲಿತ ಕೆ-9 ವಜ್ರ ಗನ್, ಟಿ-90 ಟ್ಯಾಂಕ್‌ಗಳು, ಸ್ವಾತಿ ರೇಡಾರ್, 155 ಎಂಎಂ ಗನ್‌ಗಳು, ಬಿಎಂಪಿ- 2, ಭೀಷ್ಮ ಟ್ಯಾಂಕರ್, ತುಂಗುಸ್ಕಾ ವೈಮಾನಿಕ ರಕ್ಷಣ ವ್ಯವಸ್ಥೆ, ಸೇತುವೆ ನಿರ್ಮಾಣಕ್ಕೆ ಬಳಸುವ ಟ್ಯಾಂಕ್‌ಗಳನ್ನು ಪ್ರದರ್ಶಿಸಲಾಗುತ್ತದೆ.
ರಕ್ಷಣ ಸಚಿವರು ಭಾಗಿ
ಜ. 15ರಂದು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಆರ್ಮಿ ಸರ್ವಿಸ್ ಸೆಂಟರ್ (ಎಸ್‌ಸಿ)ನಲ್ಲಿ ನಡೆಯಲಿರುವ ಮಿಲಿಟರಿ ಟ್ಯಾಟೂನಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಅಲ್ಲಿ ವಿನೂತನ ಕಾರ್ಯಕ್ರಮಗಳು ಜರಗಲಿವೆ.
11 ಸಾವಿರ ಜನ ವೀಕ್ಷಣೆ
3 4ದಿನಗಳಿಂದ ಎಂಇಜಿ ಮೈದಾನದಲ್ಲಿ ಸೇನಾ ದಿನಾಚರಣೆಯ ಪೂರ್ವಪ್ರದರ್ಶನ ನಿರಂತರವಾಗಿ ನಡೆಯುತ್ತಿದ್ದು, ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಇದುವರೆಗೆ 11 ಸಾವಿರ ಜನ ಪ್ರದರ್ಶನ ವೀಕ್ಷಿಸಿದ್ದು, ಇದರಲ್ಲಿ ಮಕ್ಕಳೇ ಹೆಚ್ಚು ಎಂದು ಜ| ರವಿ ಮುರುಗನ್ ತಿಳಿಸಿದರು. ಬುಧವಾರದಿಂದ ಪಾಸ್ ಹೊಂದಿದವರಿಗೆ ಮಾತ್ರ ಅವಕಾಶ ಇರಲಿದೆ.
ಸಾಮಾನ್ಯವಾಗಿ ದಿಲ್ಲಿಯಲ್ಲಿ ಭಾಗವಹಿಸುತ್ತಿದ್ದೆವು. ಈಗ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲೇ ನಮ್ಮವರೆದುರು ಪ್ರದರ್ಶನ ನೀಡಲಿರುವುದು ಸಹಜವಾಗಿ ಹೆಮ್ಮೆ ಮತ್ತು ಖುಷಿ ಕೊಡುತ್ತಿದೆ. ಹತ್ತು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
– ಶಿವನಗೌಡ ಕೆಂಚನಗೌಡರ,
ಎಂಇಜಿ ಆ್ಯಂಡ್ ಸೆಂಟರ್ ಯೋಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.