ಪದವಿ ಉತ್ತರಪತ್ರಿಕೆ ಮೌಲ್ಯ ಮಾಪನ ಇನ್ನು ಡಿಜಿಟಲ್! ಮಂಗಳೂರು ವಿ.ವಿ. ತೀರ್ಮಾನ
Team Udayavani, Jan 12, 2023, 7:10 AM IST
ಮಂಗಳೂರು: ಎನ್‌ಇಪಿ ಪದವಿ ಫಲಿತಾಂಶದಲ್ಲಿ ಎದುರಾದ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಸೆಮಿಸ್ಟರ್‌ನ ಉತ್ತರಪತ್ರಿಕೆಯ “ಡಿಜಿಟಲ್ ಮೌಲ್ಯಮಾಪನ’ ಮಾಡಲು ಮಂಗಳೂರು ವಿಶ್ವವಿದ್ಯಾನಿಲಯ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
ಫೆಬ್ರವರಿಯಲ್ಲಿ ನಡೆಯುವ ಪರೀಕ್ಷೆಯನ್ನು ಹೊರತುಪಡಿಸಿ, ಮೇಯಲ್ಲಿ ನಡೆಯುವ ಪರೀಕ್ಷೆಯ ಉತ್ತರ ಪತ್ರಿಕೆ ಡಿಜಿಟಲ್ ಸ್ವರೂಪ ದಲ್ಲಿಯೇ ಮೌಲ್ಯ ಮಾಪನವಾಗುವ ಸಾಧ್ಯತೆಗಳಿವೆ.
ಮೈಸೂರು ಹಾಗೂ ಕುವೆಂಪು ವಿ.ವಿ.ಯಲ್ಲಿ ಈಗಾಗಲೇ ಜಾರಿಯಲ್ಲಿರುವ ಡಿಜಿಟಲ್ ಮೌಲ್ಯಮಾಪನವನ್ನು ಮಂಗ ಳೂರಿ ನಲ್ಲಿಯೂ ಅನುಷ್ಠಾನಿಸಲಾಗುತ್ತದೆ. ಪರೀಕ್ಷೆ ನಡೆದ ಅನಂತರ ವಿವಿಗೆ ಬರುವ ಎಲ್ಲ ಉತ್ತರ ಪತ್ರಿಕೆಯನ್ನು ಸ್ಕ್ಯಾನಿಂಗ್ ಮಾಡಿ ಯುಯುಸಿಎಂಎಸ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ಮೌಲ್ಯ ಮಾಪನ ಮಾಡುವವರ “ಮ್ಯಾಪಿಂಗ್’ ಮಾಡ ಲಾಗುತ್ತದೆ. ಅದರ ಆಧಾರದಲ್ಲಿ ಅವರಿಗೆ “ಕೋಡ್’ ಹಾಗೂ “ರಿಮೋಟ್ ಆ್ಯಕ್ಸೆಸ್’ ನೀಡಲಾಗುತ್ತದೆ. ಹೀಗಾಗಿ ಸಂಬಂಧ ಪಟ್ಟ ಪ್ರಾಧ್ಯಾಪಕರು ಆಯಾಯ ಕಾಲೇಜಿ ನಲ್ಲಿಯೇ ಮೌಲ್ಯಮಾಪನ ಮಾಡಲು ಸಾಧ್ಯವಾಗಲಿದೆ.
ಮನೆಯಲ್ಲೂ ಮೌಲ್ಯಮಾಪನ!
ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಡಿಜಿಟಲ್ ಮಾದರಿಯಲ್ಲಿ ಮಾಡುವಾಗ ಅತ್ಯುನ್ನತ ತಂತ್ರಜ್ಞಾನದ ಸಾಫ್ಟ್ವೇರ್ ಸಹಾಯದಿಂದ ನಡೆಸಲು ಚಿಂತನೆ ನಡೆಸ ಲಾಗಿದೆ. ಇದರಂತೆ ಉಪನ್ಯಾಸಕರ ಮನೆಯ ಕಂಪ್ಯೂಟರ್/ಲ್ಯಾಪ್‌ಟಾಪ್‌ಗ್ಳಲ್ಲಿ “ಫೇಸ್ ರೆಕಗ್ನಿಷನ್’ ಸಾಫ್ಟ್‌ವೇರ್ ಹಾಕಿ ಉತ್ತರಪತ್ರಿಕೆಯನ್ನು ಮನೆಯಲ್ಲಿಯೇ ಮೌಲ್ಯಮಾಪನ ಮಾಡುವಾಗ ಎಲ್ಲ ಅಪ್‌ಡೇಟ್‌ಗಳು ಕೇಂದ್ರ ಕಚೇರಿಯಲ್ಲಿ ಸಂಗ್ರಹವಾಗಿರುವಂತೆ ವ್ಯವಸ್ಥೆ ಮಾಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ.
ಪ್ರಾಯೋಗಿಕ ಯಶಸ್ವಿ
ಮೌಲ್ಯಮಾಪನ ಡಿಜಿಟಲೀಕರಣ ಗೊಳಿ ಸಲು ವರ್ಷದ ಹಿಂದೆಯೇ ವಿ.ವಿ. ತೀರ್ಮಾನಿ ಸಿತ್ತು. ಅದರಂತೆ ಪ್ರಾಯೋಗಿಕ ವಾಗಿ ಎಂಬಿಎ 3ನೇ ಸೆಮಿಸ್ಟರ್‌ನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಡಿಜಿಟಲ್ ಮೂಲಕ ನಡೆಸಲಾಗಿತ್ತು. ವಿ.ವಿ. ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಂದೊಂದು ಕೇಂದ್ರವನ್ನು ಗುರುತಿಸಿ ಅಲ್ಲಿ ಒಂದು ಸ್ಕಾ Âನಿಂಗ್ ಸೆಂಟರ್ ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಹಾಗೂ ಮಳೆಯ ನೆಪದಿಂದ ಇದು ಜಾರಿಯಾಗಿರಲಿಲ್ಲ!
ಲಾಭವೂ… ನಷ್ಟವೂ!
ಮೌಲ್ಯಮಾಪನಕ್ಕೆ ಪ್ರಾಧ್ಯಾಪಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರುವ ಸಮಸ್ಯೆಗೆ ಪರಿಹಾರ ಡಿಜಿಟಲ್ ಮೌಲ್ಯಮಾಪನದಿಂದ ದೊರೆಯಲಿದೆ. ಜತೆಗೆ ಯುಯುಸಿಎಂಎಸ್ ಬಂದ ನಂತರ ಎದುರಾಗಿರುವ “ಕೋಡಿಂಗ್’ ಹಾಗೂ “ಡಿಕೋಡಿಂಗ್’ ಸಮಸ್ಯೆಗೂ ಪರಿಹಾರವಾಗಲಿದೆ. ಯಾಕೆಂದರೆ ಡಿಜಿಟಲ್ ಮೌಲ್ಯಮಾಪನದಲ್ಲಿ ಕೋಡಿಂಗ್-ಡಿಕೋಡಿಂಗ್ ಇರುವುದಿಲ್ಲ. ಆದರೆ ಡಿಜಿಟಲ್ ಮೌಲ್ಯಮಾಪನ ಆಗಬೇಕಾದರೆ ಕಾಲೇಜಿನಲ್ಲಿ ಇಂಟರ್‌ನೆಟ್ ವ್ಯವಸ್ಥೆ ಉತ್ತಮವಾಗಿ ಇರಬೇಕು ಹಾಗೂ ಉಪನ್ಯಾಸಕರಿಗೆ ವಿಶೇಷ ತರಬೇತಿಯೂ ಅಗತ್ಯ. ಕಂಪ್ಯೂಟರ್ ಹಾಗೂ ಲ್ಯಾಬ್ ಸಹಿತ ವಿವಿಧ ಮೂಲಭೂತ ವ್ಯವಸ್ಥೆಗಳು ಸರಿ ಇರಬೇಕು. ಬಹುಮುಖ್ಯವಾಗಿ ಈಗಾಗಲೇ ತಾಂತ್ರಿಕ ಎಡವಟ್ಟುಗಳಿಗೆ ಕಾರಣವಾಗಿರುವ ಯುಯುಸಿಎಂಎಸ್‌ನಲ್ಲಿ ಮುಂದೆ ತಾಂತ್ರಿಕ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದ ದೊಡ್ಡ ಸವಾಲು ಇದೆ.
ಮೌಲ್ಯಮಾಪನ ಮತ್ತೆ “ಏಕಕೇಂದ್ರಿತ’!
ಏಕಕಾಲದಲ್ಲಿ ತರಗತಿ, ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆ ಸಲು ಅನುಕೂಲವಾಗುವಂತೆ ಏಕಕೇಂದ್ರದಲ್ಲಿ ಇದ್ದ ಮೌಲ್ಯಮಾಪನ ವನ್ನು 8 ಕೇಂದ್ರಗಳಿಗೆ ವಿಸ್ತರಿ ಸಿದ ಇತ್ತೀಚಿನ ತೀರ್ಮಾನವನ್ನು ಕೈಬಿಟ್ಟು, ಏಕ ಕೇಂದ್ರ ದಲ್ಲಿಯೇ ಮತ್ತೆ ನಡೆಸಲು ವಿ.ವಿ. ನಿರ್ಧರಿಸಿದೆ.
ಡಿಜಿಟಲ್ ಮೌಲ್ಯಮಾಪನ ಆರಂಭಕ್ಕೂ ಮುನ್ನ ಫೆಬ್ರವರಿಯಲ್ಲಿ ನಡೆಯಲಿರುವ 1, 3 ಹಾಗೂ 5ರ ಪದವಿ ವಿವಿಧ ಹಂತದ ಪರೀಕ್ಷೆಯ ಉತ್ತರ ಪತ್ರಿಕೆ ಯನ್ನು ಏಕಕೇಂದ್ರದಲ್ಲಿಯೇ ನv ೆಸಲು ವಿ.ವಿ. ಚಿಂತನೆ ನಡೆಸಿದೆ. ಹೀಗಾಗಿ ಮಡಿಕೇರಿ, ಉಡುಪಿ, ಸುಳ್ಯ ಸಹಿತ ವಿವಿಧ ಭಾಗದ ಪ್ರಾಧ್ಯಾಪಕರು ತರಗತಿ ಬಿಟ್ಟು ಮಂಗಳೂರಿಗೆ ಬಂದು ಮೌಲ್ಯಮಾಪನ ನಡೆಸಬೇಕಾದ ಪ್ರಮೇಯ ಮತ್ತೆ ಎದುರಾಗಲಿದೆ!
ಪದವಿ ಪರೀಕ್ಷೆಯ ಮೌಲ್ಯಮಾಪನವನ್ನು ಡಿಜಿಟಲ್ ಮಾಡಲು ಈ ಹಿಂದೆಯೇ ತೀರ್ಮಾನಿಸಲಾಗಿದ್ದರೂ ವಿವಿಧ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದರೆ ಮುಂಬರುವ ಮೌಲ್ಯಮಾಪನವನ್ನು ಡಿಜಿಟಲ್ ಸ್ವರೂಪದಲ್ಲಿಯೇ ನಡೆಸಲು ಈಗಾಗಲೇ ಸೂಚನೆ ಬಂದಿದೆ. ಇದರಂತೆ ಸಿದ್ಧತೆ ನಡೆಸಲಾಗುವುದು.
– ಪ್ರೊ| ಪಿ.ಎಲ್.ಧರ್ಮ, ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿ.ವಿ.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.