![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jan 12, 2023, 7:22 AM IST
ಮೇಷ: ಮಕ್ಕಳ ಬಗ್ಗೆ ವಿಶೇಷ ಗಮನ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಪ್ರಗತಿ. ತಾಳ್ಮೆಯಿಂದ ನಡೆದುಕೊಳ್ಳಿ. ಮೇಲಧಿಕಾರಿಗಳ ಪ್ರೀತಿ ಪ್ರಾಪ್ತಿ. ಸತ್ಕರ್ಮದಲ್ಲಿ ಆಸಕ್ತಿ. ಆತುರದ ನಿರ್ಣಯ ಮಾಡದಿರಿ. ಸಾಧನಕಾರರಿಗೆ ಶೈಕ್ಷಣಿಕರಂಗದಲ್ಲಿ ಉತ್ತಮ ಅವಕಾಶ.
ವೃಷಭ: ನಿರೀಕ್ಷಿಸಿದಂತೆ ಅಧಿಕ ಧನಲಾಭ. ಉತ್ತಮ ವಾಕ್‌ಪಟುತ್ವ. ಜನಮನ್ನಣೆ ಕುಟುಂಬ ಸುಖ ವೃದ್ಧಿ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳ ಪ್ರಶಂಸೆ. ಜ್ಞಾನ ವಿದ್ಯೆಯ ಪ್ರದರ್ಶನದಿಂದ ಗೌರವ ಪ್ರಾಪ್ತಿ.
ಮಿಥುನ: ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಪರಿಶ್ರಮ ನಿಷ್ಠೆ ತೋರಿದರೂ ಅಡಚಣೆ ತೋರೀತು. ಪರರ ಕೆಲಸ ನಿರ್ವಹಿಸುವಲ್ಲಿ ಜಾಗ್ರತೆ ವಹಿಸಿ. ವಿದ್ಯೆ ಜ್ಞಾನ ಸಂಪಾದನೆ ಕಡೆಗೆ ಗಮನ ಹರಿಸಿದರೆ ಯಶಸ್ಸು ಲಭಿಸಲಿದೆ. ಮಕ್ಕಳಿಂದ ಸಂತೋಷ.
ಕರ್ಕ: ದೂರ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಹೊಸ ವ್ಯವಹಾರಗಳ ಆರಂಭ. ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಮನೋರಂಜನೆ. ಆರೋಗ್ಯ ಗಮನಿಸಿ. ನಷ್ಟ ದ್ರವ್ಯ ಸಿಗುವ ಯೋಗ . ಮಿತ್ರರಿಂದ ಉತ್ತಮ ಸಹಕಾರ.
ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ಧನ ವೃದ್ಧಿ. ಪ್ರಿತ್ರಾರ್ಜಿತ ಆಸ್ತಿ ವಿಚಾರಗಳ ಜವಾಬ್ದಾರಿ ಹೆಚ್ಚಳ. ಮಾತಿನಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ದೂರದ ಊರಿನ ಕೆಲಸ ಕಾರ್ಯಗಳಲ್ಲಿ ಪ್ರಗತಿ.
ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ದೂರ ಪ್ರಯಾಣ. ದಂಪತಿಗಳಿಂದ ಪರಸ್ಪರ ಸಹಕಾರ. ಮನೋರಂಜನೆ. ಗೃಹದಲ್ಲಿ ಸಂತಸದ ವಾತಾವರಣ. ಮಕ್ಕಳಿಂದ ಶುಭ ವಾರ್ತೆ. ಅಧಿಕ ಧನ ವ್ಯಯ ಸಂಭವ.
ತುಲಾ: ಅನಿರೀಕ್ಷಿತ ಧನ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗೌರವ ಮನ್ನಣೆ ಲಭ್ಯ. ಉತ್ತಮ ತಿಳುವಳಿಕೆ ಜ್ಞಾನ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಬಹು ಜನ ಸಂಪರ್ಕ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಿರೀಕ್ಷಿತ ನೂತನ ಉದ್ಯೋಗ ಕೆಲಸ ವ್ಯವಹಾರಗಳ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ ಮನಃ ತೃಪ್ತಿ. ಭೂಮ್ಯಾದಿ ವಾಹನಗಳ ಸುಖ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಗೃಹದಲ್ಲಿ ಸಂತಸದ ವಾತಾವರಣ.
ಧನು: ದೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕತೆ. ಅನಗತ್ಯ ಖರ್ಚುಗಳಿಗೆ ತಡೆ. ಸಣ್ಣ ಪ್ರಯಾಣ. ಪರರಿಂದ ಜ್ಞಾನ ತಿಳಿಯುವ ಹಂಬಲ. ಅಧ್ಯಯನಶೀಲತೆ ಸಂಭವ.
ಮಕರ: ಆರೋಗ್ಯ ಗಮನಿಸಿ. ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆದಾಯ ಖರ್ಚು ಸಮಾನಾಗಿರುವುದು. ಆತುರದ ನಿರ್ಧಾರ ಮಾಡದಿರಿ. ಬಂಧುಮಿತ್ರರ ಸಹಾಯ ಸಹಕಾರ ಲಭಿಸುವುದು.
ಕುಂಭ: ಮನೋರಂಜನೆಯಲ್ಲಿ ಆಸಕ್ತಿ. ದೂರ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ವಾಕ್‌ಚತುರತೆ. ಕೆಲಸ ಕಾರ್ಯಗಳಲ್ಲಿ ಚುರುಕುತನ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ಮೀನ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ಮಾನಸಿಕ ನೆಮ್ಮದಿ ಕಂಡುಬರುವುದು ಬಂಧುಮಿತ್ರರಿಗಾಗಿ ಹೆಚ್ಚಿನ ಸಮಯ ಕಳೆಯುವಿಕೆ. ಅನಗತ್ಯ ಸಾಲ ನೀಡದಿರಿ ಅಥವಾ ಪಡೆಯದಿರಿ. ದಾಕ್ಷಿಣ್ಯ ತೊರೆದು ವ್ಯವಹರಿಸಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.