ಎಲ್ಲರಿಗೂ ಜೋಶಿಮಠ ಘಟನೆ ಎಚ್ಚರಿಕೆ ಗಂಟೆಯಾಗಲಿ

Team Udayavani, Jan 14, 2023, 6:00 AM IST

ಎಲ್ಲರಿಗೂ ಜೋಶಿಮಠ ಘಟನೆ ಎಚ್ಚರಿಕೆ ಗಂಟೆಯಾಗಲಿ

ಮನುಕುಲವನ್ನು ಕಾಡುತ್ತಿರುವ ತಾಪಮಾನ ಏರಿಕೆ ಸಮಸ್ಯೆಗೆ ಅತ್ಯುತ್ತಮ ಉದಾಹರಣೆ ಜೋಶಿಮಠ ನಗರದ ಕುಸಿಯುವಿಕೆ. ದಿನದಿಂದ ದಿನಕ್ಕೆ ಮನೆಗಳೆಲ್ಲ ಬಿರುಕು ಬಿಡುತ್ತಿದ್ದು, ಜನ ಊರು ಖಾಲಿ ಮಾಡುತ್ತಿದ್ದಾರೆ. ಇಸ್ರೋ ಹೇಳಿರುವ ಪ್ರಕಾರ, ಕಳೆದ 12 ದಿನಗಳಿಂದ ಜೋಶಿಮಠದಲ್ಲಿ  5.4 ಸೆ.ಮೀ. ಭೂಮಿ ಕುಸಿದಿದೆ.

ಜೋಶಿಮಠದ ಘಟನೆಯಿಂದಾಗಿ ಉತ್ತರಾಖಂಡ ಸರಕಾರ ಒಂದು ರೀತಿಯಲ್ಲಿ ಆತಂಕಕ್ಕೆ ಒಳಗಾಗಿದೆ. ಜೋಶಿಮಠದ ಜತೆಗೆ ಕರ್ಣಪ್ರಯಾಗದಲ್ಲೂ ಕಟ್ಟಡಗಳಲ್ಲಿ ಬಿರುಕು ಮೂಡಿದ್ದು ಈ ಘಟನೆಯ ಗಂಭೀರತೆಯನ್ನು ತೋರಿದೆ.

ಜೋಶಿಮಠವು ಹಿಮಾಲಯದ ತಪ್ಪಲಿನ ಒಂದು ನಗರವಾಗಿದೆ. ಉತ್ತರಾಖಂಡದ ಪ್ರಮುಖ ಪ್ರವಾಸಿತಾಣವೂ ಹೌದು. ಸದ್ಯ ಈ ನಗರ ಭೂಗರ್ಭ ಸೇರುತ್ತಿರುವುದರಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಜೋಶಿಮಠದ ಇಂದಿನ ಪರಿಸ್ಥಿತಿಗೆ ಅರಣ್ಯ ನಾಶ, ಮಣ್ಣು ಸವಕಳಿ, ಹಿಮ ಕರಗುವಿಕೆ ಹೆಚ್ಚಳದಂಥ ಸಮಸ್ಯೆಗಳೇ ಕಾರಣ. ಹಾಗೆಯೇ ಇನ್ನೊಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಮಿತಿಮೀರಿದ ನಗರೀಕರಣವೂ ಭೂಕುಸಿತಕ್ಕೆ ಪ್ರಮುಖ ಕಾರಣ. ಅಂದರೆ ಜೋಶಿಮಠದ ನೆಲ, ನಗರೀಕರಣವನ್ನು ತಡೆದುಕೊಳ್ಳಬಲ್ಲದೇ ಎಂಬ ಬಗ್ಗೆ ಅಧ್ಯಯನವನ್ನೇ ನಡೆಸದೆ ಮನಬಂದಂತೆ ಕಟ್ಟಡಗಳ ನಿರ್ಮಾಣ ಮಾಡಿದ್ದೂ ಇಂದಿನ ಸ್ಥಿತಿಗೆ ಕಾರಣ ಎಂಬ ವಿಶ್ಲೇಷಣೆಯೂ ಇದೆ.

ಸದ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಜೋಶಿಮಠದ ಬಗ್ಗೆ ಸುದ್ದಿಯಾಗುತ್ತಿರುವುದರಿಂದ ಎಲ್ಲರ ಗಮನಸೆಳೆಯುತ್ತಿದೆ. ಅಲ್ಲದೆ ಭೂಮಿಯ ತಾಪಮಾನ ಏರಿಕೆಯಿಂದಾಗಿ ಈ ರೀತಿ ಆಗುತ್ತಿದೆ ಎಂಬ ಆತಂಕವೂ ಪರಿಸರವಾದಿಗಳಲ್ಲಿ ಹೆಚ್ಚುತ್ತಿದೆ.

ವಿಚಿತ್ರವೆಂದರೆ ಜೋಷಿಮಠದ ಭೂಕುಸಿತ ಮಾತ್ರ ಭೂಮಿಯ ತಾಪಮಾನ ಏರಿಕೆ ಅಥವಾ ಹವಾಮಾನ ಬದಲಾವಣೆಯ ಪಾಪದ ಕೂಸೇನಲ್ಲ. ಇದರ ಜತೆಯಲ್ಲೇ ಒಂದೇ ಸುಮನೆ ಸುರಿಯುತ್ತಿರುವ ಮಳೆ, ಕೆಲವೆಡೆ ಬರಗಾಲ, ಪ್ರವಾಹ, ಕಾಳ್ಗಿಚ್ಚು ಕೂಡ ಇದರಿಂದಾಗಿಯೇ ಆಗುತ್ತಿರುವುದು. ಕಳೆದ ವರ್ಷ ಭಾರತದಲ್ಲಿ ಇಂಥ ಹಲವಾರು ಘಟನೆಗಳನ್ನು ನೋಡಿದ್ದೇವೆ. ಕರ್ನಾಟಕ ಮತ್ತು ಕೇರಳದಲ್ಲಂತೂ ಕಳೆದ ಎರಡರಿಂದ ಮೂರು ವರ್ಷಗಳ ಕಾಲ ಈ ಭೂಕುಸಿತದಂಥ ಪ್ರಕರಣಗಳನ್ನು ನೋಡುತ್ತಿದ್ದೇವೆ.

ಇದಕ್ಕೆ ಕರ್ನಾಟಕದಲ್ಲಿ ಕಳೆದ ವರ್ಷ ಸುರಿದ ಮಳೆಯನ್ನೇ ನೋಡಬಹುದು. ಇಡೀ ವರ್ಷ ಒಂದೇ ಸಮನೆ ಸುರಿದು, ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ನೋಡಿದ್ದೇವೆ. ಮಳೆಯೇ ಬರದ ಜಾಗದಲ್ಲೂ ಈ ಬಾರಿ ಪ್ರವಾಹ ಸ್ಥಿತಿ ನೋಡಿದ್ದೇವೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಭೂಕುಸಿತದಂಥ ಪ್ರಕರಣಗಳನ್ನು ಕಂಡಿದ್ದೇವೆ. ಬೆಂಗಳೂರಿನಲ್ಲೂ ಕಂಡರಿಯದ ಪ್ರವಾಹ ನೋಡಿದ್ದೇವೆ. ಹಾಗಾದರೆ ಈ ಎಲ್ಲ ನೈಸರ್ಗಿಕ ವಿಕೋಪಗಳಿಗೆ ಯಾರು ಕಾರಣ ಎಂಬ ಪ್ರಶ್ನೆಯೂ ಮೂಡುತ್ತದೆ.

ಸರಿಯಾಗಿ ಗಮನಿಸಿ ಹೇಳುವುದಾದರೆ ಈ ಘಟನೆಗಳಿಗೆ ಮನುಷ್ಯನೇ ಕಾರಣ. ಮಿತಿಮೀರಿದ ಆಸೆಯಿಂದಾಗಿ ಕಾಡನ್ನು ಕಡಿದು, ನಗರ ನಿರ್ಮಿಸುತ್ತಾ ಹೋಗುತ್ತಿದ್ದಾನೆ. ಸರಾಗವಾಗಿ ನೀರು ಹರಿಯುವ ಜಾಗದಲ್ಲಿ ಅಥವಾ ಕೆರೆಗಳಿದ್ದ ಜಾಗದಲ್ಲಿ ಮನೆಗಳನ್ನು ಕಟ್ಟಿಸಿಕೊಂಡಿದ್ದೇವೆ. ಪ್ರಕೃತಿಗೆ ವಿರುದ್ಧವಾಗಿ ಹೋದರೆ ಏನಾಗುತ್ತದೆ ಎಂಬುದನ್ನು ಈ ಮೂಲಕವೇ ಪರಿಸರ ನಮಗೆ ತೋರಿಸುತ್ತಿದೆ ಎಂಬುದನ್ನು ನಾವು ಮನಗಾಣಬೇಕು.

ಟಾಪ್ ನ್ಯೂಸ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

2

Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.