![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jan 14, 2023, 7:10 AM IST
ಪಣಂಬೂರು: ದಿ ವರ್ಲ್ಡ್ ಐಷಾರಾಮಿ ಬೃಹತ್ ಪ್ರವಾಸಿ ಹಡಗು ಹೊಸ ವರ್ಷದಲ್ಲಿ ಪ್ರಥಮವಾಗಿ ನವಮಂಗಳೂರು ಬಂದರಿಗೆ ಶುಕ್ರವಾರ ಆಗಮಿಸಿತು. ಇದು 123 ಪ್ರವಾಸಿಗರು, 280 ಸಿಬಂದಿಗಳನ್ನೊಳಗೊಂಡಿದೆ.
ಈ ಬಾರಿ ಕರ್ನಾಟಕದ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ವಿವಿಧ ಸಾಂಪ್ರದಾಯಿಕ ಭರತನಾಟ್ಯ, ಡೋಲು ಕುಣಿತ,ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಲಾಯಿತು. ಬಸ್ ಹಾಗೂ ಖಾಸಗೀ ಪ್ರವಾಸಿ ಕಾರುಗಳಲ್ಲಿ ತೆರಳಿದ ಪ್ರವಾಸಿಗರು ಸೈಂಟ್ ಎಲೋಶಿಯಸ್ ಚಾಪೆಲ್, ಕದ್ರಿ, ಮಾರ್ಕೆಟ್, ಕುದ್ರೋಳಿ ದೇವಸ್ಥಾನ ಸಹಿತ ಆಕರ್ಷಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದರು. ಭಾರತೀಯ ಆಯುಷ್ ಆರೋಗ್ಯ ಚಿಕಿತ್ಸೆ, ಯೋಗವನ್ನು ಪ್ರವಾಸಿಗರಿಗೆ ಪರಿಚಯಿಸಲಾಯಿತು.
ಐಷಾರಾಮಿ ಮನೆಗಳಿರುವ ಹಡಗು!
ದಿ ವರ್ಲ್ಡ್ ಐಷಾರಾಮಿ ಮನೆಗಳುಳ್ಳ ಹಡಗಾಗಿದ್ದು, ಇದರಲ್ಲಿ ಹಲವಾರು ಶ್ರೀಮಂತರು ಮನೆಗಳನ್ನು ಖರೀದಿಸಿ ಪ್ರಯಾಣದ ಸಂದರ್ಭ ಆಗಮಿಸಿ ದೀರ್ಘಾವಧಿ ಉಳಿದುಕೊಳ್ಳುತ್ತಾರೆ. ಇನ್ನು ಹಲವರು ಈ ಹಡಗಿನಲ್ಲಿಯೇ ವಾಸ ಮಾಡುತ್ತಾರೆ. 196 ಮೀ ಉದ್ದ, 7.05 ಮೀಟರ್ ಆಳ, 43,188 ಟನ್ ಭಾರವಿದೆ. ದುಬಾೖಯಿಂದ ಆಗಮಿಸಿದ ಈ ಹಡಗು ಕೊಚ್ಚಿನ್‌ಗೆ ಹೋಗಲಿದೆ.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.