ಹೊಸ ಪಾತ್ರಗಳ ಮೇಲೆ ‘ಮಿಲನಾ’ ನಿರೀಕ್ಷೆ
Team Udayavani, Jan 15, 2023, 2:50 PM IST
ಕಳೆದ ವರ್ಷ ಅತಿಹೆಚ್ಚು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ನಾಯಕ ನಟಿಯರ ಪೈಕಿ ಮಿಲನಾ ನಾಗರಾಜ್ ಕೂಡ ಒಬ್ಬರು. “ಲವ್ ಮಾಕ್ಟೇಲ್-2′, “ವಿಕ್ರಾಂತ್ ರೋಣ’ ಮತ್ತು “ಓ’ ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಮಿಲನಾ ನಾಗರಾಜ್, ವರ್ಷಪೂರ್ತಿ ಎಂಗೇಜ್ ಆಗಿದ್ದರು.
ಇನ್ನು ಈ ವರ್ಷ ಕೂಡ ವರ್ಷದ ಆರಂಭದಲ್ಲಿ “ಮಿ. ಬ್ಯಾಚುಲರ್’ ಸಿನಿಮಾದ ಮೂಲಕ ವಿಲನಾ ಭರ್ಜರಿಯಾಗಿಯೇ ಬಿಗ್ ಸ್ಕ್ರೀನ್‌ಗೆ ಎಂಟ್ರಿಕೊಟ್ಟಿದ್ದರು. “ಮಿ. ಬ್ಯಾಚುಲರ್’ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿ ಬಿದ್ದರೂ, ಮಿಲನಾ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ಸದ್ಯ ಹೊಸ ವರ್ಷದ ಮೊದಲ ವಾರದಲ್ಲಿಯೇ, ವರ್ಷದ ಮೊದಲ ದರ್ಶನ ಕೊಟ್ಟಿರುವ ಮಿಲನಾ ನಾಗರಾಜ್, ಈ ವರ್ಷ ಇನ್ನಷ್ಟು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ಅಭಿಮಾನಿಗಳ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ಸದ್ಯ ಮಿಲನಾ ನಾಗರಾಜ್ ನಾಲ್ಕೈದು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವುಗಳ ಪೈಕಿ ಈ ವರ್ಷಾಂತ್ಯದೊಳಗೆ ಕನಿಷ್ಟ ಮೂರ್‍ನಾಲ್ಕು ಸಿನಿಮಾಗಳಾದರೂ ತೆರೆಗೆ ಬರೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಇನ್ನು ವಿಲನಾ ನಾಗರಾಜ್ ನಾಯಕಿಯಾಗಿ ಅಭಿನಯಿಸುತ್ತಿರುವ ಸಿನಿಮಾಗಳ ಪೈಕಿ “ಫಾರ್ ರಿಜಿಸ್ಟ್ರೇಷನ್’, “ಆರಾಮ್ ಅರವಿಂದ್ ಸ್ವಾಮಿ’, ಮತ್ತು “ಲವ್ ಬರ್ಡ್ಸ್’ ಸಿನಿಮಾಗಳು ಪ್ರಮುಖವಾದವು. ಈಗಾಗಲೇ “ಫಾರ್ ರಿಜಿಸ್ಟ್ರೇಷನ್’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಇನ್ನೆರಡು ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ಉಳಿದಂತೆ “ಲವ್ ಬರ್ಡ್ಸ್’ ಸಿನಿಮಾದ ಚಿತ್ರೀಕರಣ ಕೂಡ ಬಹುತೇಕ ಪೂರ್ಣಗೊಂಡಿದ್ದು, ಈ ವರ್ಷದ ಮಧ್ಯ ಭಾಗದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಇನ್ನು ಅನೀಶ್ ತೇಜೇಶ್ವರ್ ನಾಯಕನಾಗಿರುವ “ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾದಲ್ಲಿ ಮಿಲನಾ ನಾಯಕಿಯಾಗಿದ್ದು, ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ.
ಇನ್ನು ತೆರೆಗೆ ಬರಲು ರೆಡಿಯಾಗುತ್ತಿರುವ ಈ ಮೂರೂ ಸಿನಿಮಾಗಳಲ್ಲೂ ಮಿಲನಾ ಅವರಿಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಿವೆ. “ಫಾರ್ ರಿಜಿಸ್ಟ್ರೇಷನ್’ ಸಿನಿಮಾದಲ್ಲಿ ಲೈವ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಿಲನಾ, “ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾದಲ್ಲಿ ಮಲೆಯಾಳಿ ಹುಡುಗಿಯಾಗಿ ಜೊತೆಗೆ ಟೀಚರ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. “ಲವ್ ಬರ್ಡ್ಸ್’ ಸಿನಿಮಾದಲ್ಲಿ ಮಿಲನಾ ನಾಗರಾಜ್ ಅವರದ್ದು ಫ್ಯಾಷನ್ ಡಿಸೈನರ್ ಪಾತ್ರವಂತೆ. ಒಟ್ಟಾರೆ ಒಂದರ ಹಿಂದೊಂದು ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳ ಮೂಲಕ ಬರುತ್ತಿರುವ ಮಿಲನಾ ತಮ್ಮ ಪಾತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.