![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 15, 2023, 5:01 PM IST
ಮೈಸೂರು: ರಾಜ್ಯದಿಂದ ತಪ್ಪಿಕೊಂಡು ಪೊಲೀಸರಿಗೆ ತಲೆನೋವಾಗಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಶುಕ್ರವಾರ ಬಂಧಿಸಲಾಗಿದೆ. ತನ್ನ ವೇಷ ಭಾಷೆ ಬದಲಿಸಿ ಗುಜರಾತ್ ಗೆ ತೆರಳಿದ್ದ ರವಿಯನ್ನು ಪತ್ತೆ ಮಾಡುವಲ್ಲಿ ಆತನ ಹಣೆಯ ಮೇಲಿನ ಮಚ್ಚೆ ಸಹಕಾರಿಯಾಗಿದೆ.
ಡ್ರಾಮಾ ಮಾಡುತ್ತಿದ್ದ ಸ್ಯಾಂಟ್ರೋ ರವಿ ಪತ್ತೆಗೆ ಹಣೆಯ ಮೇಲಿರುವ ಗುರುತು ಸಹಕಾರಿಯಾಗಿತ್ತು. ಆತನ ಹಣೆಯ ಎಡಭಾಗದಲ್ಲಿರುವ ಕಟ್ ಆದ ರೀತಿಯಲ್ಲಿರುವ ಹಣೆಯ ಭಾಗದ ಮಾರ್ಕ್ ನಿಂದ ಪತ್ತೆ ಮಾಡಲು ಸಾಧ್ಯವಾಗಿದೆ. 20 ವರ್ಷದ ಹಿಂದಿನ ಪೋಟೋ, ತಲೆಗೆ ವಿಗ್ ಹಾಕದ ಪೋಟೋ, ಸದ್ಯ ಬಂಧಿಸಿದ ಸಮಯದ ಪೋಟೊದಲ್ಲಿ ಮಾರ್ಕ್ ಹೈಲೈಟ್ ಆಗಿದೆ.
ಮೈಸೂರು ಪೊಲೀಸರಿಗೂ ಮೊದಲು ಈತನೇ ಸ್ಯಾಂಟ್ರೋ ರವಿ ಅಲ್ಲವೇ ಎಂಬ ಅನುಮಾನ ವ್ಯಕ್ತವಾಗಿತ್ತು. ಆಗ ಆತನ ಹಣೆಯ ಮೇಲಿರುವ ಗುರುತಿನ ಸಹಾಯದಿಂದ ದೃಢಪಡಿಸಲಾಯಿತು.
ಇದನ್ನೂ ಓದಿ:ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಬೆಂಕಿ
ಪೊಲಿಸ್ ಕಸ್ಟಡಿಗೆ ಮನವಿ: ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ನಾಳೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಕೇಳುತ್ತೇವೆ. ರಜಾ ದಿನಗಳಲ್ಲಿ ಸಾಮಾನ್ಯವಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೊಡುವುದಿಲ್ಲ. ಈಗಾಗಲೇ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದೇವೆ. ನಾಳೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದುಕೊಳ್ಳುತ್ತೇವೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾತ್ರ ತನಿಖೆ ನಡೆಯುತ್ತಿದೆ ಎಂದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.