ಉಚಿತ ವಿದ್ಯುತ್ ಭರವಸೆ: ಕೈ ಗಿಮಿಕ್
Team Udayavani, Jan 15, 2023, 4:55 PM IST
ಹಾಸನ: ಗೃಹ ಬಳಕೆದಾರರಿಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವ ಕಾಂಗ್ರೆಸ್. ಭರವಸೆ ಚುನಾ ವಣಾ ಗಿಮಿಕ್. ಉಚಿತ ವಿದ್ಯುತ್ ನೀಡಿದರೆ ಈಗಾಗಲೇ 48 ಸಾವಿರ ಕೋಟಿ ರೂ. ನಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ದಿವಾಳಿ ಯಾಗಲಿವೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ಎಸ್ಕಾಂಗಳಿಗೆ ವರ್ಷಕ್ಕೆ ಆಗುವ ನಷ್ಟವೆಷ್ಟು ? ಅದನ್ನು ತುಂಬಿಕೊಡಲು ಸರ್ಕಾರಕ್ಕೆಷ್ಟು ಆರ್ಥಿಕ ಹೊರೆಯಾಗುತ್ತದೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಲೆಕ್ಕ ಹಾಕಿದ್ದಾರೆಯೇ ? ಚುನಾವಣೆ ವೇಳೆ ಉಚಿತ ವಿದ್ಯುತ್ ಭರವಸೆ ನೀಡುತ್ತಿರುವ ಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿದ್ದಾಗ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರೇ ಇಂಧನ ಸಚಿವರಾಗಿದ್ದಾಗ ಏಕೆ ಉಚಿತವಾಗಿ ವಿದ್ಯುತ್ ಕೊಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಮತಕ್ಕಾಗಿ ಕೈ ಹುಸಿ ಭರವಸೆ: ಈಗಲೇ ಒಂದೊಂದು ವಿದ್ಯುತ್ ಸರಬರಾಜು ಕಂಪನಿಯು ವರ್ಷಕ್ಕೆ 6 ರಿಂದ 8 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಈಗಲೂ ಸಮಪರ್ಕಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರೈತರು ಯಾವಾಗ ವಿದ್ಯುತ್ ಬರುತ್ತದೆ, ಹೋಗುತ್ತದೆ ಎಂಬುದರ ಮಾಹಿತಿ ಇಲ್ಲದೆ ಬೆಳೆಗಳಿಗೆ ನೀರು ಹಾಯಿಸಲು ಹಗಲು – ರಾತ್ರಿ ಪರದಾಡುತ್ತಿದ್ದಾ ರೆ. ಪೂರ್ವಪರ ಚಿಂತಿಸದೆ ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಉಚಿತವಾಗಿ ವಿದ್ಯುತ್ ಕೊಡುವ ಸುಳ್ಳು ಭರವಸೆ ಕಾಂಗ್ರೆಸ್ ನೀಡಿದೆ ಎಂದರು.
ಎಸ್ಕಾಂ ದಿವಾಳಿ ಮಾಡಿದ ರಾಷ್ಟ್ರೀಯ ಪಕ್ಷಗಳು: ನಾನೂ 4 ವರ್ಷ ಇಂಧನ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. 70 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ ಒಂ ದು ರೂ., 70 ರಿಂದ 200 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ ರೂ. 1.80 ರೂ. ದರ ಇತ್ತು. ಈಗ ಪ್ರತಿ ಯೂನಿಟ್‌ಗೆ 6 ರೂ. ದರ ನಿಗದಿಯಾಗಿದೆ. ನಾನು ಇಂಧನ ಸಚಿವನಾಗಿದ್ದಾಗ ಬೆಸ್ಕಾಂನಲ್ಲಿ 500 ಕೋಟಿ ರೂ. ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದೆ. ಆದರೆ ಈಗ ಏನಾಗಿದೆ ? ಎರಡು ರಾಷ್ಟ್ರೀಯ ಪಕ್ಷಗಳೂ 10 ವರ್ಷಗಳ ಆಡಳಿತದಲ್ಲಿ ಎಸ್ಕಾಂಗಳನ್ನು ದಿವಾಳಿ ಮಾಡಿವೆ. ಅಂತಿಮವಾಗಿ ನಿರ್ವಹಣೆ ಮಾಡಲಾಗದೆ ಎಸ್ಕಾಂಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪರಿಸ್ಥಿ ಬರಬಹು ದು ಎಂದು ಆತಂಕ ವ್ಯಕ್ತಪಡಿಸಿದರು.
ನಷ್ಟದ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಿ: ನಾನು ಇಂಧನ ಸಚಿವನಾಗಿದ್ದಾಗ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಮೈಸೂರು, ಚಾಮ ರಾಜ ನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಬೇರ್ಪಡಿಸಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ರೂಪಿಸಿದೆ. ನಾನು ಸಚಿವನಾಗಿದ್ದಾಗ ಎಲ್ಲ ಎಸ್ಕಾಂ ಗಳೂ ಅರ್ಥಿಕವಾಗಿ ಸದೃಢವಾಗಿದ್ದವು. ಆನಂತರ ಹಂತ, ಹಂತವಾಗಿ ನಷ್ಟ ಅನುಭವಿಸುತ್ತಾ ಬಂದವು. ಯಾರ್ಯಾರ ಅಧಿಕಾರವಧಿಯಲ್ಲಿ ಎಸ್ಕಾಂಗಳು ಎಷ್ಟೆಷ್ಟು ನಷ್ಟ ಆನುಭವಿಸಿವೆ ಎಂಬ ಮಾಹಿತಿ ಬಿಡುಗಡೆ ಮಾಡಲಿ ಎಂದು ರೇವಣ್ಣ ಅವರು ಸವಾಲು ಹಾಕಿದರು.
ಮತಯಾಚಿಸಲು ಕಾಂಗ್ರೆಸ್ ಬಳಿ ಸರಕಿಲ್ಲ: ಕಾಂಗ್ರೆ ಸ್‌ಗೆ ಈಗ ಜನರ ಬಳಿ ಹೋಗಲುವಿಷಯಗಳೇ ಇಲ್ಲ. ಜೆಡಿಎಸ್‌ನ ಪಂಚ ರತ್ನ ಯಾತ್ರೆಯಿಂದ ಕಂಗೆಟ್ಟಿ ರುವ ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಪೊಳ್ಳು ಭರವಸೆ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸರಿಲ್ಲದೆ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸದ ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವಂತಹ ಕೀಳು ಪ್ರಚಾರಕ್ಕೆ ಮುಂದಾಗಿದೆ ಎಂದು ರೇವಣ್ಣ ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಏನೇ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ – ಬಿಜೆಪಿ ನಡುವೆ ಒಳ ಒಪ್ಪಂದ ಪ್ರತಿ ಚುನಾವಣೆಯಲ್ಲೂ ನಡೆದುಕೊಂಡೇ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ – ಬಿಜೆಪಿ ಯಾವ ಅಭ್ಯರ್ಥಿ ಬೆಂಬಲಿಸಿದರು ? ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 6 ಮಂದಿ ಶಾಸಕರಿದ್ದರೂ ಅಲ್ಲಿ ಪರಿಶಿಷ್ಟ ಸಮು ದಾಯದ ಹಿರಿಯ ನಾಯಕ ಮುನಿಯಪ್ಪ ಸೋಲುತ್ತಾರೆ. ಮುನಿಯಪ್ಪನವರನ್ನು ಸೋಲಿಸಿದ್ದು ಬಿಜೆಪಿಯವರಲ್ಲ. ಕಾಂಗ್ರೆಸ್‌ನವರೇ ಸೋಲಿಸಿದ್ದು. ಕಾಂಗ್ರೆಸ್ ಮುಖಂಡರು ಬಿಜೆಪಿಯವರ ಜೊತೆ ಒಳ ಒಪ್ಪಂದ ಮಾಡಿಕೊಂಡು ಸತತ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ನಾಯಕ ಮುನಿಯಪ್ಪ ಅವರನ್ನು ಸೋಲಿಸಿದರು ಎಂದು ಆರೋಪಿಸಿದರು.
ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದರೆ, ಅವರಲ್ಲಿ ಸಮರ್ಥ ಅಭ್ಯರ್ಥಿಗಳಿದ್ದರೆ ಜೆಡಿಎಸ್‌ನ ಶಾಸಕರು, ಮುಖಂಡರನ್ನು ಏಕೆ ಕಾಂಗ್ರೆಸ್‌ಗೆ ಸೇರಿಸಿ ಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವೈಎಸ್‌ವಿ ದತ್ತಾಗೆ ಇನ್ನೇನು ಮಾಡಬೇಕಿತ್ತು ? : ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತ ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಪ್ರಕಟಿಸಿರುವ ಬಗ್ಗೆ ಪ್ರತಿಕ್ರಿಯಿಸಿ ದ ರೇವಣ್ಣ ಅವರು, ದತ್ತ ಅವರನ್ನು ಜೆಡಿಎಸ್ ಒಮ್ಮೆ ಎಂಎಲ್‌ಸಿ. , ಒಮ್ಮೆ ಎಂಎಲ್‌ಎ ಮಾಡಿತ್ತು. ಈ ಬಾರಿಯೂ ಅವರಿಗೆ ಜೆಡಿಎಸ್ ಟಿಕೆಟ್ ಕೊಡಲು ನಿರ್ಧರಿಸಿತ್ತು. ಆದರೂ ಅವರಿಗೆ ಜೆಡಿಎಸ್ ಇನ್ನೇನು ಮಾಡಬೇಕಾಗಿತ್ತು ? ಅವರು ಜೆಡಿಎಸ್ ಬಿಟ್ಟು ಹೋಗುವುದಾ ದರೆ ಅವರಿಗೆ ಶುಭವಾಗಲಿ ಎಂದು ರೇವಣ್ಣ ಹಾರೈಸಿದರು.
ಜ.17 ರವರೆಗೆ ಶಾಸಕ ಕೆಎಂಶಿಗೆ ಶನಿಕಾಟವಿದೆ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡರು ಜೆಡಿಎಸ್ ಬಿಡುವುದಾಗಿ ಎಲ್ಲೂ ಹೇಳಿಲ್ಲ. ಅವರಿಗೆ ಜ.17 ರವರೆಗೆ ಶನಿಕಾಟವಿದೆ. ಆನಂತರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಶಿವಲಿಂಗೇಗೌಡರು ಜೆಡಿಎಸ್‌ನಲ್ಲೇ ಜಿ.ಪಂ. ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದವರು. ಅವರಿಗೆ ನಾಲ್ಕು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜೆಡಿ ಎಸ್ ಟಿಕೆಟ್ ನೀಡದೆ. 15 ವರ್ಷ ಸತತವಾಗಿ ಶಾಸಕರಾಗಿದ್ದಾರೆ. ಈ ಬಾರಿಯೂ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದರೆ ನಿರಾಯಾಸವಾಗಿ ಗೆಲ್ಲುತ್ತಾರೆ. ಅದನ್ನೂ ಮೀರಿ ಪಕ್ಷ ಬಿಟ್ಟು ಹೋದರೆ ಅವರಿಗೆ ಶುಭವಾಗಲಿ. ದೇವೇಗೌಡರನ್ನು ಬಿಟ್ಟು ಹೋದ ಮಾಜಿ ಸಂಸದ ಜವರೇಗೌಡ, ಮಾಜಿ ಶಾಸಕರಾದ ಪುಟ್ಟೇಗೌಡ, ವಿಶ್ವನಾಥ್ ಏನಾಗಿದ್ದಾರೆ ನೆನಪಿಸಿಕೊಳ್ಳಲಿ ಎಂದು ಮಾಜಿ ಸಚಿವ ರೇವಣ್ಣ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್!
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Mangaluru: ಕೊಕ್ಕಡದ ʼಸಾಂತಾ ಕ್ಲಾಸ್ʼ ವಿನ್ಸೆಂಟ್ ಕ್ರಿಸ್ಮಸ್ ತಿರುಗಾಟಕ್ಕೆ 25 ವರ್ಷ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.