ರಾಶಿ ಫಲ; ಕಾರ್ಯ ಒತ್ತಡವಿದ್ದರೂ ವಿದ್ಯಾರ್ಥಿಗಳಿಗೆ ಉದ್ಯೋಗಸ್ಥರಿಗೆ ಉತ್ತಮ ದಿನ
Team Udayavani, Jan 16, 2023, 7:17 AM IST
ಮೇಷ: ಗುರು ಹಿರಿಯರಲ್ಲಿ ಬೇಸರ ಬೇಡ. ವಿದ್ಯಾರ್ಥಿಗಳಿಗೆ ಉದ್ಯೋಗಿಗಳಿಗೆ ಉತ್ತಮ ಅವಕಾಶ. ಪ್ರಯಾಣದಿಂದ ಸುಖ. ಧನ ಲಾಭ. ಮನೆಯಲ್ಲಿ ಸಂತಸದ ವಾತಾವರಣ. ಉತ್ತಮ ಸ್ಥಾನಮಾನ ಗೌರವ ಪ್ರಾಪ್ತಿ.
ವೃಷಭ: ವಿದ್ಯಾರ್ಥಿಗಳಿಗೆ ಅನುಕೂಲಕರ. ಮಾತಿನಲ್ಲಿ ಎಚ್ಚರ ವಹಿಸಿ. ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ. ಧೈರ್ಯದಿಂದ ಕಾರ್ಯ ಸಿದ್ಧಿ. ಧನಾಗಮನಕ್ಕೆ ಕೊರತೆ ಇರದು. ವಿದ್ಯಾರ್ಥಿಗಳಿಗೆ ಪ್ರಯತ್ನ ಪಟ್ಟರೆ ಶುಭ ಫಲ.
ಮಿಥುನ: ಚಟುವಟಿಕೆಯಿಂದ ಕೂಡಿದ ದಿನ. ಸಾಮಾಜಿಕ ಜನಪರ ಕಾರ್ಯದಲ್ಲಿ ತೊಡಗುವುದರಿಂದ ಗೌರವ. ಸುಖ ಸಂತೋಷ ವೃದ್ಧಿ. ಕಾರ್ಯ ಒತ್ತಡವಿದ್ದರೂ ವಿದ್ಯಾರ್ಥಿಗಳಿಗೆ ಉದ್ಯೋಗಸ್ಥರಿಗೆ ಉತ್ತಮ. ಫಲಿತಾಂಶ ಸಿಗುವ ಸಮಯ.
ಕರ್ಕ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಬೇಡ. ತಾಳ್ಮೆ ಕಳೆದುಕೊಳ್ಳದೇ ನೇರ ಸಾಮಾಜಿಕ ಜನಪರ ವ್ಯವಹಾರ ಕೆಲಸ ಕಾರ್ಯಗಳಿಂದ ಗೌರವ ಪ್ರಾಪ್ತಿ. ವಾಹನ ಗೃಹೋಪಕರಣ ವಸ್ತುಗಳಿಂದ ಲಾಭ. ಹಿರಿಯರ ಮಾರ್ಗದರ್ಶನದಿಂದ ಲಾಭ.
ಸಿಂಹ: ತೀಕ್ಷ್ಣ ಗುರಿ ನಡೆಯಿಂದ ದಿನಚರಿ ಆರಂಭಿಸಬೇಡಿ. ತಾಳ್ಮೆ ಇರಲಿ. ಕೋರ್ಟು ರಾಜಕೀಯ ಕ್ಷೇತ್ರದಲ್ಲಿ ಅನುಕೂಲ. ಚಿಕ್ಕ ಪ್ರಯಾಣದಿಂದ ಸಂತಸ. ಉದ್ಯೋಗದಿಂದ ಧನಾಗಮನದಲ್ಲಿ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ವೃದ್ಧಿ.
ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಅನಿರೀಕ್ಷಿತ ಸ್ಥಾನ ಗೌರವದ ಸುಖ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಹಿರಿಯರ ಆರೋಗ್ಯದ ವಿಚಾರದಲ್ಲಿ ಗಮನವಿರಲಿ. ಮನೆಯಲ್ಲಿ ಸಂಭ್ರಮಾಚರಣೆ.ದೇವತಾ ಕಾರ್ಯಗಳಿಂದ ಶುಭ.
ತುಲಾ: ಉದ್ಯೋಗದಲ್ಲಿ ಸ್ಥಾನಮಾನ ವೃದ್ಧಿ, ಧನ ಸಂಪಾದನೆ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿ. ಬಂದ ಅವಕಾಶವನ್ನು ಉಪಯೋಗಿಸಿ ನಿಮ್ಮ ವಿನಯ ನಮ್ರತೆಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಸಂಪಾದಿಸುವ ದಿನ. ದಂಪತಿಗಳಿಗೆ ಉತ್ತಮ ಆರೋಗ್ಯ.
ವೃಶ್ಚಿಕ: ಗುರು ಹಿರಿಯರಿಂದ ಅತ್ಯುತ್ತಮ ಮಾರ್ಗದರ್ಶನ ಸಲಹೆ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ತಾಳ್ಮೆಯ ಪರೀಕ್ಷೆ. ಪ್ರಯಾಣ. ಉದ್ಯೋಗದಲ್ಲಿ ಪ್ರಗತಿ. ಧನ ಸಂಪಾದನೆ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ. ಮಾನಸಿಕ ಒತ್ತಡ.
ಧನು: ವಿಚಾರ ವಿನಿಮಯದಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರ್ಥಿಕ ಹಿಡಿತವಿರಲಿ. ಸಣ್ಣ ಪ್ರಯಾಣದಿಂದ ಲಾಭ. ಜಲೋತ್ಪನ್ನ ವ್ಯವಹಾರ ನಡೆಸುವವರಿಗೆ ಉತ್ತಮ ಲಾಭ.
ಮಕರ: ಆರೋಗ್ಯದಲ್ಲಿ ನಿರ್ಲಕ್ಷ್ಯ ಬೇಡ. ಪಾಲುದಾರಿಕಾ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಶ್ರಮವಿದ್ದರೂ ಅಂತಿಮವಾಗಿ ಗುರಿ ಸಾಧಿಸುವಿರಿ. ಭೂಮ್ಯಾದಿ ವಿಚಾರಗಳಲ್ಲಿ ಚರ್ಚೆ.
ಕುಂಭ: ಅನಿರೀಕ್ಷಿತ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾಗಮನಕ್ಕೆ ಕೊರತೆ ಇರದು. ಮಿತ್ರರಲ್ಲಿ ನಿಷ್ಠುರ ಬೇಡ. ಗೃಹದಲ್ಲಿ ಅಶಾಂತಿಗೆ ಅವಕಾಶ ನೀಡದಿರಿ. ದಂಪತಿಗಳು ಸಾಮರಸ್ಯ ಕಾಪಾಡಿ.
ಮೀನ: ವಿದ್ಯಾರ್ಥಿಗಳು ಆತುರದ ನಿರ್ಧಾರ ಮಾಡದಿರಿ. ಆರೋಗ್ಯದ ಕಡೆಗೆ ಗಮನಹರಿಸಿ. ಮಾನಸಿಕ ಗೊಂದಲಕ್ಕೆ ಅವಕಾಶ ನೀಡದಿರಿ. ವಿಶ್ರಾಂತಿಯಿಂದ ದಿನ ಕಳೆಯಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.