ವಯಾಕಾಮ್ 18 ಪಾಲಾದ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು: ಪ್ರತಿ ಪಂದ್ಯಕ್ಕೆ 7.09 ಕೋಟಿ ಬೆಲೆ
Team Udayavani, Jan 16, 2023, 2:36 PM IST
ಮುಂಬೈ: ಮಹಿಳಾ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಐದು ವರ್ಷಗಳ ಅವಧಿಗೆ ವಯಾಕಾಮ್ 18 ಗೆದ್ದುಕೊಂಡಿದೆ. ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. ಕಂಪನಿಯು 2023 ರಿಂದ 2027ರವರೆಗಿನ ಐದು ವರ್ಷಗಳ ಅವಧಿಗೆ 951 ಕೋಟಿ ರೂ. (USD 116.7 ಮಿಲಿಯನ್ ಅಂದಾಜು) ಪಾವತಿಸುತ್ತದೆ.
ಟೆಂಡರ್ ಅನ್ನು ಖರೀದಿಸಿದ ಎಂಟು ಪಾರ್ಟಿಗಳಲ್ಲಿ ಎರಡು ಮಾತ್ರ ಹರಾಜಿಗೆ ಬಂದಿವೆ ಎಂದು ತಿಳಿದು ಬಂದಿದೆ. ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ಹರಾಜಿನಲ್ಲಿ ಪಾಲ್ಗೊಂಡಿದೆ. ಟಿವಿ, ಡಿಜಿಟಲ್ ಮತ್ತು ಸಂಯೋಜಿತ (ಟಿವಿ ಮತ್ತು ಡಿಜಿಟಲ್) ಮೂರು ವಿಭಾಗಗಳಲ್ಲಿ ಬಿಡ್ ಒಳಗೊಂಡಿದೆ.
ಹರಾಜು ಮೊತ್ತವು ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ ಆಗಿರಲಿದೆ. ಪುರುಷರ ಐಪಿಎಲ್ ಬಳಿಕ ಅತ್ಯಂತ ದುಬಾರಿ ಟಿ20 ಲೀಗ್ ಇದಾಗಿರಲಿದೆ.
“ಇದು ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಸಬಲೀಕರಣಕ್ಕಾಗಿ ಒಂದು ದೊಡ್ಡ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ, ಇದು ಎಲ್ಲಾ ವಯಸ್ಸಿನ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ಇದು ಹೊಸ ಉದಯ!” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದರು.
ಇದನ್ನೂ ಓದಿ:ಜೋಶಿಮಠ ಭೂಗರ್ಭ ಕುಸಿತ…ಕಲಿಯುಗದ ಅಂತ್ಯದ ಮುನ್ಸೂಚನೆ?ಬದ್ರಿ ಪುರಾಣ ಭವಿಷ್ಯ ನಿಜವಾಗಲಿದೆಯಾ…
ಪ್ರತಿ ಪಂದ್ಯದ ಮೌಲ್ಯವನ್ನು ಮೊದಲ ಮೂರು ವರ್ಷಗಳಲ್ಲಿ ತಲಾ 22 ಪಂದ್ಯಗಳಿಗೆ ಲೆಕ್ಕಹಾಕಲಾಗಿದೆ, ನಂತರ 2026 ರ ಬಳಿಕ 34 ಪಂದ್ಯಗಳಿಗೆ ಹೆಚ್ಚಳವಾಗಬಹುದು.
ಮಹಿಳಾ ಐಪಿಎಲ್ ಕೂಟದಲ್ಲಿ ಐದು ತಂಡಗಳು ಇರಲಿದೆ. ಮಹಿಳಾ ಐಪಿಎಲ್ ನ ಯಶಸ್ಸನ್ನು ಆಧರಿಸಿ ಬಿಸಿಸಿಐ ಆರನೇ ಫ್ರಾಂಚೈಸ್ ಅನ್ನು ಸೇರಿಸಲು ನೋಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.