ರಾಶಿ ಫಲ; ಧನಾಗಮ ವೃದ್ಧಿ, ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ವೃದ್ಧಿ
Team Udayavani, Jan 17, 2023, 7:12 AM IST
ಮೇಷ: ಮಾತೃ ಸಮಾನರಿಂದ, ಸ್ತ್ರೀಯರಿಂದ ಸುಖ. ಗೃಹೋಪಕರಣಗಳಲ್ಲಿ ವೃದ್ಧಿ. ದೂರದ ಮಿತ್ರರ ಸಮಾಗಮ. ಆಹಾರ ಸೇವನೆಯಲ್ಲಿ ಮಿತವಿರಲಿ. ಹಿಂದೆ ಮಾಡಿದ ಸತ್ಕಾರ್ಯದಿಂದ ಶ್ಲಾಘನೆ. ದೇವತಾ ಸನ್ನಿಧಾನ ದರ್ಶನದಿಂದ ತೃಪ್ತಿ.
ವೃಷಭ: ಕಾರ್ಯ ಕ್ಷೇತ್ರದಲ್ಲಿ ಅತೀ ಶ್ರಮ ವಹಿಸಿ ಗುರಿ ಸಾಧನೆ. ಮಾನಸಿಕ ಗೊಂದಲವಿದ್ದರೂ ಕಿರಿಯರಿಂದ ಸಹಾಯ ಒದಗುವುದು. ಆತುರದ ನಿರ್ಣಯ ಬೇಡ. ಸಣ್ಣ ಪ್ರಯಾಣದಿಂದ ಲಾಭ. ಗೃಹದಲ್ಲಿ ಅಶಾಂತಿಗೆ ಅವಕಾಶ ನೀಡದಿರಿ.
ಮಿಥುನ: ಧನಾಗಮ ವೃದ್ಧಿ. ಸಮಯಕ್ಕೆ ಸರಿಯಾಗಿ ಸಹಾಯ ಒದಗುವುದು. ಉತ್ತಮ ವ್ಯಕ್ತಿಗಳ ಒಡನಾಟ. ಪರವೂರ ಕಾರ್ಯದಲ್ಲಿ ಜಯ. ಉತ್ತಮ ಬದಲಾವಣೆ ಲಾಭದ ವಿಚಾರದಲ್ಲಿ ತೃಪ್ತಿ ಇರಲಿ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ವೃದ್ಧಿ.
ಕರ್ಕ: ಸಾಹಸದಿಂದ ದಿನ ಆರಂಭ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಉತ್ತಮ ಆಲೋಚನೆ. ಮಿತ್ರರ ಸಹಾಯದಿಂದ ಜಯ. ಹಿಂದೆ ಶತ್ರುಗಳಾದವರಿಂದ ಸಂಧಾನ ಪ್ರಸ್ತಾವ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ.
ಸಿಂಹ: ಉನ್ನತ ಸ್ಥಾನಮಾನ ಕಾರ್ಯ ಸಾಧನೆಗೆ ಆರ್ಥಿಕ ವ್ಯಯ. ಮಾತಿನಲ್ಲಿ ಸಹನೆ ಅಗತ್ಯ. ನಿರೀಕ್ಷಿತ ಸಹಾಯ ಲಭಿಸದು. ವಿರೋಧಿಗಳಿಗೆ ಅವಕಾಶ ನೀಡಬೇಡಿ. ನಿಮ್ಮ ಆಲೋಚನೆಯೊಂದಿಗೆ ನಡೆಯಿರಿ. ಅನ್ಯರ ಸಹಾಯ ಬೇಡ.
ಕನ್ಯಾ: ಅನಿರೀಕ್ಷಿತ ಸ್ಥಾನಮಾನ ಸಿಗುವ ದಿನ. ಉದ್ಯೋಗದಲ್ಲಿ ತೃಪ್ತಿ. ಧನಲಾಭವಿದ್ದರೂ ಖರ್ಚಿನ ಹಿಡಿತವಿರಲಿ. ನೂತನ ವ್ಯವಹಾರದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ಇರಲಿ. ಹಿರಿಯರ ಆಶೀರ್ವಾದದಿಂದ ಅಭಿವೃದ್ಧಿ.
ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲವೆಂದು ಬೇಸರ ಬೇಡ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟವಾಗುವ ಸಾಧ್ಯತೆ. ದೂರ ಪ್ರದೇಶದ ಕೆಲಸ ಕಾರ್ಯಗಳಲ್ಲಿ ತೃಪ್ತಿ ಸಮಾಧಾನ. ಮಿತ್ರರಲ್ಲಿ ನಿಷ್ಠುರ ಬೇಡ. ವಿಶ್ರಾಂತಿಯಿಂದ ದಿನ ಕಳೆಯಿರಿ.
ವೃಶ್ಚಿಕ: ದೇವತಾ ಸ್ಥಳ ಸಂದರ್ಶನ. ದೂರ ಪ್ರಯಾಣ ಸಂಭವ. ಗುರು ಹಿರಿಯರಿಂದ ಆಶೀರ್ವಾದ. ನೂತನ ಮಿತ್ರರ ಸಮಾಗಮ. ಮನೆಯಲ್ಲಿ ಸಂತಸದ ವಾತಾವರಣ. ಆರೋಗ್ಯದ ಕಡೆಗೆ ಗಮನವಿರಲಿ. ದಂಪತಿಗಳು ಸಾಮರಸ್ಯ ಕಾಪಾಡಿ.
ಧನು: ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ವಿಘ್ನ ಪರಿಹಾರ ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ, ಹಿಡಿತವಿರಲಿ. ದಾಂಪತ್ಯ ಸುಖ ಪರಸ್ಪರ ಪ್ರೋತ್ಸಾಹ. ಮಿತ್ರರಿಂದ ಲಾಭ. ಧನಾಗಮನಕ್ಕೆ ಕೊರತೆ ಇರದು.
ಮಕರ: ಹಿರಿಯರ ಮನಸ್ಸನ್ನು ನೋಯಿಸದಿರಿ. ಕೆಲಸ ಕಾರ್ಯಗಳಲ್ಲಿ ಪಾಲುದಾರಿಕಾ ವ್ಯವಹಾರಗಳಲ್ಲಿ ಲಾಭ. ಸಣ್ಣ ಪ್ರಯಾಣದಿಂದ ಲಾಭ. ಆರೋಗ್ಯ ಸುಧಾರಣೆ. ಅವಿವಾಹಿತರಿಗೆ ಕಂಕಣ ಭಾಗ್ಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಕಾರ್ಯ ಸಿದ್ಧಿ.
ಕುಂಭ: ಶೀತ, ಕಫ ಬಾದೆ ಇದ್ದರೂ ಆರೋಗ್ಯ ಸುಧಾರಿಸುವುದು. ಧನಲಾಭದ ಕೊರತೆ ಇರದು. ಅನ್ಯರ ಸಂಪರ್ಕ ಸಹಾಯದ ನಿರೀಕ್ಷೆ ಸಲ್ಲದು. ಮನೆಯಲ್ಲಿ ಶಾಂತಿ ಸಮಾಧಾನಕ್ಕೆ ಆದ್ಯತೆ ನೀಡಿ. ಕಾರ್ಯಕ್ಷೇತ್ರದಲ್ಲಿ ಏಕಾಗ್ರತೆ ಅಗತ್ಯ.
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಗೌಪ್ಯತೆಯಿಂದ ಲಾಭ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶಿಸಿ. ದೂರದ ವ್ಯವಹಾರದಲ್ಲಿ ಲಾಭ. ದಾಂಪತ್ಯ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಮಕ್ಕಳ ಬಗ್ಗೆ ಹೆಚ್ಚಿದ ಗಮನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.