![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jan 19, 2023, 9:29 AM IST
ಹೈದರಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯ ಸಾಧಿಸಿದೆ. ರನ್ ಮೇಲಾಟದಲ್ಲಿ ರೋಹಿತ್ ಶರ್ಮಾ ಬಳಗವು 12 ರನ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಶುಭ್ಮನ್ ಗಿಲ್ ದ್ವಿಶತಕದ ನೆರವಿನಿಂದ 349 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನತ್ತಿದ ಕಿವೀಸ್ 337 ರನ್ ಗಳಿಸಿತು. ಕೇವಲ 78 ಎಸೆತಗಳಲ್ಲಿ 140 ರನ್ ಹೊಡೆದ ಬ್ರೇಸ್ ವೆಲ್ ಕಿವೀಸ್ ಗೆ ಒಮ್ಮೆ ಗೆಲುವಿನ ಆಸೆ ಮೂಡಿಸಿದ್ದರು.
ಕೊನೆಯ ಐದು ಎಸೆತಗಳಲ್ಲಿ ಕಿವೀಸ್ ಗೆ 13 ರನ್ ಅಗತ್ಯವಿತ್ತು. ಈ ವೇಳೆ ಶಾರ್ದೂಲ್ ಠಾಕೂರ್ ಎಸೆತಕ್ಕೆ ಬ್ರೇಸ್ ವೆಲ್ ಔಟಾದರು. ಇದರೊಂದಿಗೆ ಭಾರತ ಗೆಲುವು ಸಾಧಿಸಿತು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಸಲಹೆಯು ಅಂತಿಮ ವಿಕೆಟ್ ಪಡೆಯಲು ಹೇಗೆ ಸಹಾಯ ಮಾಡಿತು ಎಂಬುದನ್ನು ಠಾಕೂರ್ ಪಂದ್ಯದ ಬಳಿಕ ಬಹಿರಂಗಪಡಿಸಿದರು.
ಇದನ್ನೂ ಓದಿ:ಸಾಕು ಅಧಿಕಾರ..: ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ನ್ಯೂಜಿಲ್ಯಾಂಡ್ ಪಿಎಂ ಜೆಸಿಂಡಾ ಘೋಷಣೆ
ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಠಾಕೂರ್ ಅವರು “ವಿರಾಟ್ ಭಾಯ್ ನನ್ನನ್ನು ಬ್ಯಾಟ್ಸ್‌ಮನ್ ಔಟ್ ಮಾಡಲು ಯಾರ್ಕರ್ ಲೆಂತ್ ಬೌಲ್ ಮಾಡಲು ಕೇಳಿದರು” ಎಂದು ಹೇಳಿದರು. ಬ್ರೇಸ್ ವೆಲ್ ಅವರು ಎಲ್ ಬಿಡಬ್ಲ್ಯೂ ರೀತಿಯಲ್ಲಿ ಔಟಾಗಿದ್ದರು.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಅಂತರದ ಮುನ್ನಡೆ ಸಾಧಿಸಿದೆ.
Bracewell was good but not against Lord Shardul #INDvsNZ
Extraordinary inns by Bracewell 🙏 pic.twitter.com/sLrpJNXsUP— Divyanshu Rai (@i_am_divyanshu) January 18, 2023
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.