ಸೈರನ್ ಗಾಗಿ ಹಾಡಿದ ಮಂಗ್ಲಿ
Team Udayavani, Jan 23, 2023, 5:15 PM IST
ಯುವನಟ ಪ್ರವೀರ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ “ಸೈರನ್’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೀಗ “ಸೈರನ್’ ಸಿನಿಮಾದ ಗೀತೆಯೊಂದಕ್ಕೆ ತೆಲುಗಿನ ಖ್ಯಾತ ಗಾಯಕಿ
ಮಂಗ್ಲಿ ಧ್ವನಿಯಾಗಿದ್ದಾರೆ. “ಸೈರನ್’ ಸಿನಿಮಾದಲ್ಲಿ ಬರುವ ಚಿನ್ಮಯ್ ಬಾವಿಕೆರೆ ಬರೆದಿರುವ “ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ..’ ಎಂಬ ಹಾಡು ಮಂಗ್ಲಿ ಕಂಠಸಿರಿಯಲ್ಲಿ ಮೂಡಿಬಂದಿದ್ದು, ಈ ಗೀತೆಗೆ ಭಾರದ್ವಾಜ್ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ, “ಸೈರನ್’ ಸಿನಿಮಾದಲ್ಲಿ ಮಂಗ್ಲಿ ಹಾಡಿರುವ ಈ ಹಾಡಿನ ಲಿರಿಕಲ್ ವಿಡಿಯೋ ಇದೇ ಜ. 24 ರಂದು ಯು-ಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ.
ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಮೊದಲ ಬಾರಿಗೆ “ಸೈರನ್’ ಮೂಲಕ ನಾಯಕ ನಟನಾಗಿ ಚಿತ್ರರಂಗ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ಪ್ರವೀರ್ಗೆ ಜೋಡಿಯಾಗಿ ಲಾಸ್ಯಾ ಜೋಡಿಯಾಗಿದ್ದು, ಉಳಿದಂತೆ ಶರತ್ ಲೋಹಿತಾಶ್ವ, ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್, ಸ್ಪರ್ಶ ರೇಖಾ, ಸಾಯಿ ಧೀನ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ದೇವೇಗೌಡರ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆ?: ಮಾಧುಸ್ವಾಮಿಗೆ ಜೆಡಿಎಸ್ ಪ್ರಶ್ನೆ
“ಡೆಕ್ಕನ್ ಕಿಂಗ್ ಮೂವೀ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಬಿಜು ಶಿವಾನಂದ್ ನಿರ್ಮಿಸುತ್ತಿಸಿರುವ, ಜುನಿ ಜೋಸೆಫ್ ಮತ್ತು ಕೆ.ರಮೇಶ್ ಸಹ ನಿರ್ಮಾಪಕರಾಗಿರುವ “ಸೈರನ್’ ಸಿನಿಮಾಕ್ಕೆ ರಾಜ ವೆಂಕಯ್ಯ ನಿರ್ದೇಶನವಿದೆ. ಚಿತ್ರಕ್ಕೆ ನಾಗೇಶ್ ವಿ. ಆಚಾರ್ಯ ಛಾಯಾಗ್ರಹಣ, ವಾಲಿ ಕುಲೇಸ್ ಸಂಕಲನವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.