ಸುಬ್ರಹ್ಮಣ್ಯ: ಸ್ಕೂಟರ್‌ನಲ್ಲಿ 63 ಸಾವಿರ ಕಿ.ಮೀ. ಸುತ್ತಾಟ ನಡೆಸಿದ ತಾಯಿ-ಮಗ
ಕೃಷ್ಣಕುಮಾರ್ ತಾಯಿ ಜತೆ ಧಾರ್ಮಿಕ ಕ್ಷೇತ್ರಗಳ ಸುತ್ತಾಟವನ್ನು ಆರಂಭಿಸಿದ್ದರು.
Team Udayavani, Jan 23, 2023, 6:03 PM IST
ಸುಬ್ರಹ್ಮಣ್ಯ: ಕೆಲವು ತಿಂಗಳ ಹಿಂದೆ ಕುಕ್ಕೆಯಿಂದ ಹಳೆಯ ಸ್ಕೂಟರಲ್ಲಿ ದೇಶ ಸುತ್ತಲು ಹೊರಟ ತಾಯಿ-ಮಗ ತಿರುಗಾಟ ಮುಗಿಸಿ ಇದೀಗ ಮತ್ತೆ ಕುಕ್ಕೆಗೆ ಆಗಮಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ:ಕಾಲೇಜಿನ ಬಾತ್‍ರೂಮ್ ನಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ… ಡೆತ್ ನೋಟ್ ಪತ್ತೆ
ಮೈಸೂರಿನ 44 ವರ್ಷದ ಕೃಷ್ಣಕುಮಾರ್ ಅವರು ತಮ್ಮ ತಾಯಿ 72 ವರ್ಷದ ಚೂಡ ರತ್ನಮ್ಮ ಅವರೊಂದಿಗೆ ತನ್ನ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ದೇಶ ಸುತ್ತಾಟ ನಡೆಸಿದವರು.
2018ರಲ್ಲಿ ಮೈಸೂರಿನಿಂದ ತಾಯಿ ಜತೆ ಸ್ಕೂಟರ್‌ನಲ್ಲಿ ಪ್ರವಾಸ ಆರಂಭಿಸಿದ ಅವರು ನೇಪಾಲ, ಭೂತಾನ್, ಮ್ಯಾನ್ಮಾರ್ ದೇಶಗಳಲ್ಲೂ ಸುತ್ತಾಟ ನಡೆಸಿದ್ದಾರೆ. ಕೋವಿಡ್ ಆರಂಭವಾದಾಗ ಸುತ್ತಾಟ ನಿಲ್ಲಿಸಿದ್ದರು. ಕೊರೊನಾ ಬಳಿಕ ಮತ್ತೊಮ್ಮೆ ಕೃಷ್ಣಕುಮಾರ್ ತಾಯಿ ಜತೆ ಧಾರ್ಮಿಕ ಕ್ಷೇತ್ರಗಳ ಸುತ್ತಾಟವನ್ನು ಆರಂಭಿಸಿದ್ದರು.
ಆಗಸ್ಟ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ತಮ್ಮ ಪಯಣ ಆರಂಭಿಸಿದ ಅವರು ಧರ್ಮಸ್ಥಳ, ಪುತ್ತೂರು, ವಿಟ್ಲ ಬಳಿಕ ಕೇರಳ, ತಮಿಳುನಾಡು ಪೂರ್ತಿ ಸುತ್ತಾಟ ನಡೆಸಿದ್ದಾರೆ. ಇವರು ಜತೆಯಾಗಿ ಈವರೆಗೆ ಸುಮಾರು 63,449 ಕಿ.ಲೋ. ಮೀಟರ್ ಸುತ್ತಾಟ ಪೂರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.