ಚುನಾವಣೆ ಗೆಲ್ಲಲು ಆಕಾಂಕ್ಷಿಗಳ ಪರ ಪತ್ನಿಯರ ಮತಬೇಟೆ
Team Udayavani, Jan 24, 2023, 2:10 PM IST
ಮಾಸ್ತಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನದ ಆಕಾಂಕ್ಷಿಗಳು ಗ್ರಾಮಾಂತರ ಪ್ರದೇಶದ ಹಳ್ಳಿಗಳಲ್ಲಿ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಶ್ರೀ ಅಯ್ಯಪ್ಪಸ್ವಾಮಿ, ಓಂ ಶಕ್ತಿ ಮಾಲಾಧಾರಿಗಳಿಗೆ ಹಾಗೂ ಪುಣ್ಯ ಕ್ಷೇತ್ರಗಳಿಗೆ ತೆರಳಲು ಆರ್ಥಿಕ ನೆರವು ನೀಡುವುದರ ಜತೆಗೆ ಹಲವು ರೀತಿಯ ಸವಲತ್ತು ನೀಡುತ್ತಿದ್ದಾರೆ.
ಆರ್ಥಿಕ ನೆರವು: ಹಾಲಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು, ಆಕಾಂಕ್ಷಿಗಳ ಪತ್ನಿಯರು ಹಾಗೂ ಅವರ ಕುಟುಂಬಸ್ಥರು ಪ್ರತಿ ದಿನ ಗ್ರಾಮಾಂತರ ಪ್ರದೇಶಗಳ ಹಳ್ಳಿಗಳಿಗೆ ತೆರಳಿ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಅಯ್ಯಪ್ಪ ಸ್ವಾಮಿ, ಓಂ ಶಕ್ತಿ ಮಾಲಾಧಾರಿಗಳಿಗೆ ಹಾಗೂ ಪುಣ್ಯ ಕ್ಷೇತ್ರಗಳಿಗೆ ತೆರಳಲು ಆರ್ಥಿಕ ನೆರವು ನೀಡುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಶಬರಿಮಲೆಗೆ ಹಾಗೂ ಓಂ ಶಕ್ತಿ ಮಹಿಳಾ ಮಾಲಾಧಾರಿಗಳು ಮೇಲ್‌ವುರವತ್ತೂರಿಗೆ ಪ್ರವಾಸ ತೆರಳಲು ಆರ್ಥಿಕ ಸಹಾಯ ಸೇರಿದಂತೆ ಪ್ರವಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಾದ ಕಾಂಗ್ರೆಸ್‌ನ ಶಾಸಕ ಕೆ.ವೈ.ನಂಜೇಗೌಡ, ಜೆಡಿಎಸ್‌ನ ಜಿ.ಇ.ರಾಮೇಗೌಡ, ಬಿಜೆಪಿಯ ಹೂಡಿ ವಿಜಯ್‌ಕುಮಾರ್ ಆರ್ಥಿಕ ನೆರವು ನೆರವು ನೀಡುತ್ತಿದ್ದು, ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡರೂ ಕೆಲವು ಕಡೆ ಆರ್ಥಿಕ ಸಹಾಯ ಮಾಡುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ.
ಹರ ಸಾಹಸ: ಕಾಂಗ್ರೆಸ್‌ನ ಶಾಸಕ ಕೆ.ವೈ.ನಂಜೇಗೌಡರ ಪತ್ನಿ ಜಿಪಂ ಮಾಜಿ ಅಧ್ಯಕ್ಷೆ ರತ್ನಮ್ಮನಂಜೇಗೌಡ, ಜೆಡಿಎಸ್‌ನ ಜಿ.ಇ.ರಾಮೇಗೌಡರ ಪತ್ನಿ ರಶ್ಮೀ ರಾಮೇಗೌಡ ಅವರೂ ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗಳಿಗೂ ತೆರಳಿ ಅಯ್ಯಪ್ಪಸ್ವಾಮಿ ಹಾಗೂ ಓಂ ಶಕ್ತಿ ಭಕ್ತಾದಿಗಳ ಪ್ರವಾಸಕ್ಕೆ ಅನುವು ಮಾಡುತ್ತಿದ್ದಾರೆ. ಜೆಡಿಎಸ್‌ನ ಜಿ.ಇ.ರಾಮೇಗೌಡರ ಪತ್ನಿ ರಶ್ಮೀ ರಾಮೇಗೌಡ ಅವರು ಹಗಲು-ರಾತ್ರಿ ಎನ್ನದೆ ಓಡಾಡುತ್ತಿದ್ದಾರೆ. ಆಕಾಕ್ಷಿಗಳ ಪತ್ನಿಯರ ಪ್ರಯತ್ನ ಹೆಚ್ಚಾಗಿದ್ದು, ತನ್ನ ಪತಿಯನ್ನು ಗೆಲ್ಲಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಚುನಾವಣೆಗಳಲ್ಲಿ ಗೆಲ್ಲಲು ಮಹಿಳೆಯರ ಮತ ನಿರ್ಣಾಯಕ. ಹೀಗಾಗಿ ಓಂ ಶಕ್ತಿ ಭಕ್ತರನ್ನು ಮೇಲ್ ಮರವತ್ತೂರು ಕ್ಷೇತ್ರಕ್ಕೆ ಪ್ರವಾಸ ಕಳುಹಿಸುತ್ತಿರುವುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಈ ಹಿಂದೆ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ ಸಹ ಮತದಾರರನ್ನು ಸೆಳೆಯಲು ಪ್ರವಾಸ ಕಳುಹಿಸಿಕೊಡುತ್ತಿದ್ದರು.
ಗೌಪ್ಯ: ಈಗಾಗಲೇ ಬಹುತೇಕ ಕಡೆಯ ಹಳ್ಳಿಗಳಲ್ಲಿ ಅಯ್ಯಪ್ಪ ಸ್ವಾಮಿ ಹಾಗೂ ಓಂ ಶಕ್ತಿ ಮಾಲಾಧಾರಿಗಳು ರಾಜಕೀಯ ಪಕ್ಷಗಳ ಪಡೆದು ಪ್ರವಾಸ ಮುಗಿಸಿ ಬಂದಿದ್ದೇವೆ. ಇಂದು ಅಯ್ಯಪ್ಪ ಸ್ವಾಮಿ ಹಾಗೂ ಓಂ ಶಕ್ತಿ ದೇವರ ಭಕ್ತಿಯೋ ಅಥವಾ ಚುನಾವಣೆ ಗಿಮಿಕ್ ಎಂಬಂತಾಗಿದೆ ಇನ್ನು ಚುನಾವಣೆ ದಿನದಂದು ಯಾರಿಗೆ ಮತ ಚಲಾಯಿಸುತ್ತಾರೆ ಎಂಬುದು ಗೌಪ್ಯವಾಗಿದ್ದು, ದೇವರ ಶಕ್ತಿ ಯಾರನ್ನು ಕೈಹಿಡಿಯಲಿದೆ ಎಂದು ಕಾದು ನೋಡಬೇಕಾಗಿದೆ.
ತಾನು ಹಿಂದಿನಿಂದಲೂ ಹಾಗೂ ಶಾಸಕನಾಗಿ ಆಯ್ಕೆಯಾದ ಮೇಲೂ ಅಯ್ಯಪ್ಪ, ಓಂ ಶಕ್ತಿ ಭಕ್ತಾದಿಗಳು, ದೇವರ ಕಾರ್ಯಗಳಿಗೆ ಸಹಾಯ ಮಾಡುತ್ತಿದ್ದೇನೆ. ಆದರೆ, ಚುನಾವಣೆ ಮುಂದಿಟ್ಟುಕೊಂಡು ಈ ಸೇವೆ ಮಾಡುತ್ತಿಲ್ಲ. ಚುನಾವಣೆಯ ಗಿಮಿಕ್ಕೂ ಅಲ್ಲ. -ಕೆ.ವೈ.ನಂಜೇಗೌಡರು, ಶಾಸಕರು ಮಾಲೂರು
ನಾನು 18 ವರ್ಷದಿಂದ ಶಾಲಾ-ಕಾಲೇಜು ಮಕ್ಕ ಳಿಗೆ ನೋಟ್ ಪುಸ್ತಕ, ಪಠ್ಯ ಪುಸ್ತಕ, ಬ್ಯಾಗ್ ವಿತ ರಣೆ ಮತ್ತಿತರ ಕಾರ್ಯ ಮಾಡುತ್ತಿದ್ದೇನೆ. ನನ್ನ ಪತ್ನಿ ಅಯ್ಯಪ್ಪ ಸ್ವಾಮಿ, ಓಂ ಶಕ್ತಿ ಭಕ್ತರಿಗೆ ನೆರವು ನೀಡುತ್ತಿದ್ದಾರೆ. ಚುನಾ ವಣೆ ಮುಂದಿಟ್ಟುಕೊಂಡು ಈ ಸೇವೆ ಮಾಡುತ್ತಿಲ್ಲ. –ಜಿ.ಇ.ರಾಮೇಗೌಡ, ಜೆಡಿಎಸ್ ಅಭ್ಯರ್ಥಿ, ಮಾಲೂರು ವಿಧಾನ ಸಭಾ ಕ್ಷೇತ್ರ
–ಮಾಸ್ತಿ ಎಂ.ಮೂರ್ತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.