ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ
ಸಿಐಡಿ ಎಡಿಜಿಪಿ ಕೆ.ವಿ.ಶರತ್ ಚಂದ್ರಗೆ ವಿಶಿಷ್ಟ ಸೇವಾ ಪದಕ
Team Udayavani, Jan 25, 2023, 8:01 PM IST
ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿ ಅವರ ವಿಶಿಷ್ಟ ಸೇವಾ ಪದಕಕ್ಕೆ ಸಿಐಡಿ ವಿಭಾಗದ ಎಡಿಜಿಪಿ ಕೆ.ವಿ.ಶರತ್ ಚಂದ್ರ ಭಾಜನರಾಗಿದ್ದು, 19 ಮಂದಿ ಪೊಲೀಸರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ಪುರಸ್ಕೃತರಾಗಿದ್ದಾರೆ.
ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಪೊಲೀಸರಿಗೆ ನೀಡಲಾಗುವ ಅತ್ಯುನ್ನತ ಗೌರವ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಎಡಿಜಿಪಿ ಶರತ್ ಚಂದ್ರ ಅವರಿಗೆ ಸಿಕ್ಕಿದೆ. ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸಹಿತ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಶರತ್ ಚಂದ್ರ ಪಾತ್ರ ಪ್ರಮುಖವಾಗಿದೆ.
ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ
ರಾಜ್ಯ ಗುಪ್ತ ವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್, ಪೊಲೀಸ್ ಪ್ರಧಾನ ಕಚೇರಿಯ ಪಿಆರ್‌ಸಿ ವಿಭಾಗದ ಡಿವೈಎಸ್‌ಪಿ ಎಸ್. ನಾಗರಾಜು, ಬೆಂಗಳೂರು ಕೆಎಲ್‌ಎಯ ಡಿವೈಎಸ್‌ಪಿಗಳಾದ ಪಿ. ವೀರೇಂದ್ರ ಕುಮಾರ್, ಪಿ. ಪ್ರಮೋದ್ ಕುಮಾರ್, ಕರ್ನಾಟಕ ಲೋಕಾಯುಕ್ತದ ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡ ಆರ್. ಪಾಟೀಲ್, ಬೆಂಗಳೂರು ಎನ್‌ಕ್ರೋಚ್‌ಮೆಂಟ್ ಎಸ್‌ಟಿ ಎಫ್ಎನ್‌ನ ಡಿವೈಎಸ್‌ಪಿ ಸಿ.ವಿ.ದೀಪಕ್, ಬೆಂಗಳೂರು ನಗರ ವಿಶೇಷ ವಿಭಾಗದ ಡಿವೈಎಸ್‌ಪಿ ಎಚ್.ವಿಜಯ್, ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಎಸ್.ಮಂಜುನಾಥ್, ಬೆಂಗಳೂರು ಅಶೋಕನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ರಾವ್ ಗಣೇಶ್ ಜನಾರ್ದನ್, ದಾವಣಗೆರೆ ಸಂಚಾರ ವೃತ್ತ, ಪೊಲೀಸ್ ವೃತ್ತ ನಿರೀಕ್ಷಕ ಆರ್.ಪಿ.ಅನಿಲ್ , ಬೆಂಗಳೂರು ನಗರ ಸಂಚಾರ ಮತ್ತು ಯೋಜನಾ ವಿಭಾಗದ ಇನ್‌ಸ್ಪೆಕ್ಟರ್ ಮನೋಜ್ ಹೋವಳೆ, ಬೆಂಗಳೂರು 3ನೇ ಪಡೆ ಕೆಎಸ್‌ಆರ್‌ಪಿಯ ಸ್ಪೆ.ಆರ್‌ಪಿಐ ಬಿ.ಟಿ. ವರದರಾಜು, ಬೆಂಗಳೂರು 4ನೇ ಪಡೆ ಕೆಎಸ್‌ಆರ್‌ಪಿಯ ಸ್ಪೆಷಲ್ ಎಆರ್‌ಎಸ್‌ಐಗಳಾದ ಟಿ.ಎ.ನಾರಾಯಣ್ ರಾವ್, ಎಸ್.ಎಸ್ ವೆಂಕಟರಮಣ ಗೌಡ, ಬೆಂಗಳೂರು 9ನೇ ಪಡೆ ಕೆಎಸ್‌ಆರ್‌ಪಿಯ ಸ್ಪೆಷಲ್ ಎಆರ್‌ಎಸ್‌ಐ ಎಸ್.ಎಂ.ಪಾಟೀಲ್, ಬೆಂಗಳೂರು ಸಿಐಡಿಯ ಹೆಡ್‌ಕಾನ್‌ಸ್ಟೆಬಲ್ ಕೆ.ಪ್ರಸನ್ನ ಕುಮಾರ್, ತುಮಕೂರು ಸಂಚಾರ ಪಶ್ಚಿಮ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಎಚ್.ಪ್ರಭಾಕರ್, ಬೆಂಗಳೂರು ಎಸ್‌ಸಿಅರ್‌ಬಿ, ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಡಿ.ಸುಧಾ, ಬೆಂಗಳೂರು ಸಿಟಿ ಕಂಟ್ರೋಲ್ ರೂಮ್ ಹೆಡ್‌ಕಾನ್‌ಸ್ಟೆಬಲ್ ಟಿ.ಆರ್.ರವೀಂದ್ರ ಕುಮಾರ್ 2023ನೇ ಸಾಲಿನ ಗಣರಾಜ್ಯೋತ್ಸವದ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
BJP Rift; ಆರ್. ಅಶೋಕ್ ದೆಹಲಿಗೆ: ನನಗೆ ಸ್ಪಷ್ಟ ಮಾಹಿತಿ ಇಲ್ಲ ಎಂದ ವಿಜಯೇಂದ್ರ
Earthquake; ತೆಲಂಗಾಣದ ಮುಲುಗುವಿನಲ್ಲಿ ಭೂಕಂಪನ: 5.3 ತೀವ್ರತೆ
Power sharing: ನಮ್ಮಲ್ಲಿ ಒಪ್ಪಂದ ನಿಜ: ಡಿ.ಕೆ.ಶಿವಕುಮಾರ್ ಪ್ರಥಮ ಹೇಳಿಕೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.