ಭೇಟೆಗೆಂದು ತೆರೆಳಿದ್ದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಶ್ವಾನ ! ನಡೆದಿದ್ದರೂ ಏನು?
Team Udayavani, Jan 25, 2023, 8:14 PM IST
ವಾಷಿಂಗ್ಟನ್: ಸಾಕು ಶ್ವಾನದೊಂದಿಗೆ ಭೇಟೆಗೆಂದು ತೆರೆಳಿದ್ದ ವ್ಯಕ್ತಿಯನ್ನು ಶ್ವಾನವೇ ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.
ವ್ಯಕ್ತಿಯೊಬ್ಬ ಶ್ವಾನದೊಂದಿಗೆ ಭೇಟೆಗೆಂದು ಮಿನಿ ಟ್ರಕ್ನಲ್ಲಿ ತೆರಳಿದ್ದಾನೆ. ಈ ವೇಳೆ ಗನ್ ಅನ್ನು ಬುಲೆಟ್ ಲೋಡ್ ಮಾಡಿ,ಹಿಂಬದಿಯ ಸೀಟ್ನಲ್ಲಿ ಇರಿಸಲಾಗಿದ್ದು, ಚಾಲಕ ಮತ್ತು ಭೇಟೆಗೆ ತೆರಳುತ್ತಿದ್ದ ವ್ಯಕ್ತಿ ಇಬ್ಬರು ಮುಂಬದಿಯಲ್ಲಿ ಕುಳಿತಿದ್ದಾರೆ. ಅಚಾನಕ್ಕಾಗಿ ಶ್ವಾನ ಹಿಂಬದಿಯಲ್ಲಿದ್ದ ಗನ್ ಮೇಲೆ ಕಾಲಿಟ್ಟಿದ್ದು, ಈ ವೇಳೆ ಬುಲೆಟ್ ಫೈರ್ ಆಗಿದೆ ಎಂದು ಕನ್ಸಾಸ್ ಪೊಲೀಸರು ತಿಳಿಸಿದ್ದಾರೆ.
ಮುಂಬದಿ ಸೀಟ್ನಲ್ಲಿದ್ದ ಚಾಲಕನಿಗೆ ಯಾವುದೇ ಅಪಾಯವಾಗಿರಲಿಲ್ಲ. ಆದರೆ, ಭೇಟೆಗೆ ತೆರಳಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಆತ ಶ್ವಾನದ ಮಾಲೀಕನೇ, ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅಮೆರಿಕದಲ್ಲಿ ಮನಷ್ಯರಿಗಿಂತ ಹೆಚ್ಚು ಗನ್ಗಳೇ ಇವೆ ಎನ್ನುವ ಮಾತೂ ಇದ್ದು, ಪದೇ ಪದೇ ಮಿಸ್ ಫೈಯರಿಂಗ್ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ವರದಿಯೊಂದರ ಪ್ರಕಾರ 2021ರ ಇದೇ ಕಾರಣಕ್ಕಾಗಿ 500 ಮಂದಿ ಮೃತರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಾಲೇಜು ಬಸ್ – ಲಾರಿ ನಡುವೆ ಅಪಘಾತ: ಬಸ್ ಚಾಲಕ ಗಂಭೀರ, ವಿದ್ಯಾರ್ಥಿಗಳು ಪಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.