ಅಹ್ವಾನ ಪತ್ರಿಕೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ!
ಕುರುಗೋಡು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜೋರಾದ ಜಟಾಪಟಿ
Team Udayavani, Jan 26, 2023, 10:03 PM IST
ಕುರುಗೋಡು: ಜ.27 ರಂದು ಕುರುಗೋಡು ತಾಲೂಕಿನಲ್ಲಿ ಸುಮಾರು ಕೋಟಿ ವೆಚ್ಚದಲ್ಲಿ ಬೃಹತ್ ಮಟ್ಟದಲ್ಲಿ 100 ಹಾಸಿಗೆಗಳುಳ್ಳ ಆಸ್ಪತ್ರೆ ನಿರ್ಮಾಣ ಗೊಳ್ಳಲಿರುವ ಕಟ್ಟಡ ಕಾಮಗಾರಿಗೆ ಶಾಸಕ ಗಣೇಶ್ ಭೂಮಿ ಪೂಜೆ ನೆರೆವೇರಿಸಲಿದ್ದು,ಈಗಾಗಲೇ ಪಟ್ಟದ ಜನರಿಗೆ ಹಾಗೂ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಅಹ್ವಾನ ಮಾಡಲು ಕರ ಪತ್ರ ಮುಂದ್ರಣ ಮಾಡಲಾಗಿದ್ದು, ಪಟ್ಟಣದ ಬಹುತೇಕ ಜನತೆಗೆ ತಲುಪಿದ್ದು ಅದರಲ್ಲಿ ಜಿಲ್ಲೆ ಉಸ್ತುವಾರಿ ಮಂತ್ರಿಗಳು, ತಾಲೂಕು ಮಟ್ಟದ ಅಧಿಕಾರಿಗಳ ಹೆಸರುಗಳು ಸೇರಿದಂತೆ ಇತರರ ಹೆಸರುಗಳು ಮುದ್ರೆ ಆಗದೆ ಕೇವಲ ಶಾಸಕ ಗಣೇಶ್ ಅವರ ಬಗ್ಗೆ ಮುಂದ್ರಣ ವಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳು ಜೋರಾಗಿ ಚರ್ಚೆಗಳು ನಡಿಯುತ್ತಿವೆ.
ಈಗಾಗಲೇ ಕುರುಗೋಡು 100 ಹಾಸಿಗೆಗಳುಳ್ಳ ಆಸ್ಪತ್ರೆ ಸೇರಿದಂತೆ ಕಂಪ್ಲಿ ತಾಲೂಕಿನ ಕೆಲ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೂಮಿ ಪೂಜೆ ನೆರೆವೆರಿಸಿದ್ದಾರೆ ಮತ್ತೆ ಶಾಸಕ ಗಣೇಶ್ ಅವರು ಭೂಮಿ ಪೂಜೆ ಮಾಡುವ ಅವಶ್ಯಕತೆ ಇದೆಯೇ? ಕರ ಪತ್ರದಲ್ಲಿ ಪ್ರೋಟೋಕಾಲ್ ನಿಯಮಗಳು ಒಳಗೊಂಡಿವಿಯೇ? ಎಂಬ ವಿಷಯಗಳು ಕಾರ್ಯಕರ್ತರಲ್ಲಿ ತೀವ್ರವಾಗಿ ವ್ಯಕ್ತವಾಗುತ್ತಿವೆ.
ಸುರೇಶ್ ಬಾಬು ಶಾಸಕರಿದ್ದಾಗ ಸಿದ್ದರಾಮಯ್ಯ ಅವರನ್ನು ಕೆರೆ ಭೂಮಿ ಪೂಜೆ ಮಾಡಲು ಕರಿಸಿದ್ದೇವೆ, ಆದರೆ ಶಾಸಕ ಗಣೇಶ್ ಅವರು ಈ ತರ ಮಾಡೋದು ಅವರ ಸ್ಥಾನಕ್ಕೆ ಶೋಭೆಯಲ್ಲ ಎಂದು ನಾಳೆ ನಡೆಯುವ ಕಾರ್ಯಕ್ರಮದ ಬಗ್ಗೆ ಚರ್ಚೆಗಳು ಜೋರಾಗಿ ನಡಿಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.