ಪುರುಷರ ಹಾಕಿ ವಿಶ್ವಕಪ್: ಇಂದು ಸೆಮಿಫೈನಲ್ ಹೋರಾಟ
Team Udayavani, Jan 27, 2023, 7:00 AM IST
ಭುವನೇಶ್ವರ: ವಿಶ್ವದ ಅಗ್ರ ರ್ಯಾಂಕಿನ ನಾಲ್ಕು ತಂಡಗಳು ನಿರೀಕ್ಷೆಯಂತೆ ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ ಕೂಟದ ಸೆಮಿಫೈನಲ್ ಹಂತಕ್ಕೆ ತಲುಪಿವೆ. ಆಸ್ಟ್ರೇಲಿಯ, ಜರ್ಮನಿ, ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂ ಶುಕ್ರವಾರ ನಡೆಯುವ ಸೆಮಿಫೈನಲ್ನಲ್ಲಿ ಹೋರಾಡಲಿದ್ದು ಯಾರು ಪ್ರಶಸ್ತಿ ಸುತ್ತಿಗೆ ನೆಗೆಯುತ್ತಾರೆಂದು ಊಹಿಸಲು ಕಷ್ಟಸಾಧ್ಯವಾಗಿದೆ.
ವಿಶ್ವದ ನಂ.1 ಆಸ್ಟ್ರೇಲಿಯ ತಂಡವು ನಾಲ್ಕನೇ ರ್ಯಾಂಕಿನ ಜರ್ಮನಿಯನ್ನು ಮೊದಲ ಸೆಮಿಫೈನಲ್ ಹೋರಾಟದಲ್ಲಿ ಎದುರಿಸಲಿದೆ. ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವು ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಹೋರಾಟವು ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ನಾಲ್ಕು ತಂಡಗಳಲ್ಲಿ ಮೂರು ಬಾರಿಯ ಚಾಂಪಿಯನ್ ಮತ್ತು ಮೂರನೇ ರ್ಯಾಂಕಿನ ನೆದರ್ಲೆಂಡ್ಸ್ ತಂಡವು ಸುಲಭವಾಗಿ ಗೆದ್ದು ಸೆಮಿಫೈನಲ್ ಹಂತಕ್ಕೆ ತಲುಪಿದ ಸಾಧನೆ ಮಾಡಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದು ದಕ್ಷಿಣ ಕೊರಿಯವನ್ನು 5-1 ಗೋಲುಗಳಿಂದ ಸೋಲಿಸಿತ್ತು. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಆದರೆ 2010ರ ಬಳಿಕ ಇದೇ ಮೊದಲ ಬಾರಿ ಅಂತಿಮ ನಾಲ್ಕರ ಸುತ್ತಿಗೆ ಏರಿರುವ ಜರ್ಮನಿ ಕ್ರಾಸ್ ಓವರ್ ಪಂದ್ಯದಲ್ಲಿ ಆಡಿ ಮುನ್ನಡೆದಿತ್ತು. ಉಳಿದ ಮೂರು ತಂಡಗಳು ಕ್ವಾರ್ಟರ್ಫೈನಲಿಗೆ ನೇರ ಪ್ರವೇಶ ಪಡೆದಿದ್ದವು.
ಭಾರತಕ್ಕೆ ಭಾರೀ ಜಯ
ಯುದ್ಧ ಮುಗಿದ ಮೇಲೆ ಕೋಟೆ ಬಾಗಿಲು ಹಾಕಿದ ಸ್ಥಿತಿ ಭಾರತದ್ದಾಗಿದೆ. ಮಹತ್ವದ ಕ್ರಾಸ್ ಓವರ್ ಪಂದ್ಯದಲ್ಲಿ ಕೈಚೆಲ್ಲಿದ್ದ ಭಾರತ, ಗುರುವಾರ 9ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ 8-0ಯಿಂದ ಗೆಲುವು ಸಾಧಿಸಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.