ಹುಣಸೂರು: ದೊಡ್ಡಹೆಜ್ಜೂರಲ್ಲಿ ಆಂಜನೇಯಸ್ವಾಮಿ ಪುನರ್ ಪ್ರತಿಷ್ಟಾಪನೆ
ಧಾರ್ಮಿಕ ಕಾರ್ಯದಲ್ಲಿ ಐದು ಸಾವಿರ ಮಂದಿ ಭಾಗಿ
Team Udayavani, Jan 28, 2023, 9:00 AM IST
ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರಿನ ಶ್ರೀಆಂಜನೇಯಸ್ವಾಮಿ ದೇವಾಲಯದ ಪ್ರಾಣಪುನರ್ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ಪ್ರಾರಂಭೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಸುಮಾರು 700 ವರ್ಷಗಳ ಇತಿಹಾಸವಿರುವ ದೊಡ್ಡಹೆಜ್ಜೂರಿನ ಶ್ರೀ ಆಂಜನೇಯಸ್ವಾಮಿಯ ಪುರಾತನ ದೇವಾಲಯವನ್ನು ಸುಮಾರು ಒಂದು ಕೋಟಿಗೂ ಹೆಚ್ಚು ವೆಚ್ಚದಡಿ ನಿರ್ಮಿಸಿರುವ ದೇವಸ್ಥಾನದ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಶುಕ್ರವಾರ ಮುಂಜಾನೆಯಿಂದಲೇ ಆದಿಚುಂಚನಗಿರಿ ಶಾಖಾಮಠದ ಸೋಮನಾಥ ಸ್ವಾಮಿಜಿ ಹಾಗೂ ಗಾವಡಗೆರೆಯ ನಟರಾಜ ಸ್ವಾಮಿಜಿಗಳ ಸಾನಿಧ್ಯದಲ್ಲಿ ದೇವಾಲಯದ ಆವರಣದಲ್ಲಿನ ನವಗ್ರಹ, ಅರಳಿಕಟ್ಟೆ, ಗರುಡಗಂಭ ಹಾಗೂ ದೇವಾಲಯದ ಗೋಪುರ ಉದ್ಘಾಟನೆ ನಡೆಯಿತು. ಶಾಸಕ ಜಿ.ಟಿ. ದೇವೇಗೌಡರು ಮಂಜಾನೆಯೇ ಭೇಟಿಯಾಗಿ ದೇವರ ದರ್ಶನ ಪಡೆದರು.
ನಂತರ ದೇವಾಲಯದ ಜಾತ್ರಾ ಮಾಳದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಸುತ್ತಮುತ್ತಲ 16 ಹಳ್ಳಿಗರು ಸೇರಿ ಐತಿಹ್ಯವುಳ್ಳ ಈ ದೇವಾಲಯವನ್ನು ಸುಂದರವಾಗಿ ನಿರ್ಮಿಸಿಕೊಂಡಿದ್ದು, ಅರಣ್ಯದಂಚಿನಲ್ಲಿರುವ ಈ ದೇವಾಲಯಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂದವಿದ್ದು, ನಮ್ಮೆಲ್ಲಾ ಶುಭಕಾರ್ಯಗಳು ಇಲ್ಲಿಂದಲೇ ಆರಂಭಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಆದಿಚುಂಚನಗಿರಿ ಮೈಸೂರು ಶಾಖಮಠದ ಶ್ರೀ ಸೋಮನಾಥ ಸ್ವಾಮಿಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮಿಜಿ ಆರ್ಶೀವಚನ ನೀಡಿದರು.
ದೇವಾಲಯ ಸಮಿತಿ ಅಧ್ಯಕ್ಷ ಶೇಖರೇ ಗೌಡ, ಗ್ರಾ.ಪಂ.ಅಧ್ಯಕ್ಷ ಸುಭಾಷ್, ಗ್ರಾ.ಪಂ. ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಮುಖಂಡ ರವಿ ಮಾತನಾಡಿದರು.
ಸಮಿತಿ ಪದಾಧಿಕಾರಿಗಳಾದ ರಾಮಚಂದ್ರ, ನಟರಾಜ್, ನಾಗೇಶ್, ರಾಮಕೃಷ್ಣೇ ಗೌಡ, ಮಹದೇವಣ್ಣ, ಮಾದೇಗೌಡ, ದೊಡ್ಡಹೆಜ್ಜೂರು ಸೊಸೈಟಿ ಅಧ್ಯಕ್ಷ ಚಂದ್ರಶೇಖರ್, ಹನಗೋಡು ಸೊಸೈಟಿ ಅಧ್ಯಕ್ಷ ಹನುಮ, ಯ.ರಾಮೇಗೌಡ, ಯ.ನಂಜಯ್ಯ, ಉದ್ಯಮಿ ಅನಿಲ್, ಬನ್ನಿಕುಪ್ಪೆ ಕೂಸಪ್ಪ ಸೇರಿದಂತೆ ಅನೇಕರಿದ್ದರು. ಐದು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿದ್ದರು.
ಶಾಸಕ ಮಂಜುನಾಥ್ ಸಂಜೆ ಭೇಟಿ: ಶುಕ್ರವಾರ ಸಂಜೆ ದೊಡ್ಡಹೆಜ್ಜೂರು ಆಂಜನೇಯ ಸ್ವಾಮಿ ದೇವಾಲಯಕ್ಕೆ ಆಗಮಿಸಿದ ಶಾಸಕ ಎಚ್.ಪಿ. ಮಂಜುನಾಥರನ್ನು ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಅದ್ದೂರಿಯಿಂದ ಬರಮಾಡಿಕೊಂಡರು.
ಶಾಸಕರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿದರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಆಂಜನೇಯನ ಭಕ್ತನಾಗಿದ್ದು, ಈ ಸುಂದರ ದೇವಾಲಯ ತಾಲೂಕಿನ ಕೀರ್ತಿ, ವೈಭವವನ್ನು ಹೆಚ್ಚಿಸಿದೆ. ನಮ್ಮ ಕುಟುಂಬ ಸಹ ದೇವಾಲಯ ನಿರ್ಮಾಣಕ್ಕೆ ನೆರವು ನೀಡಿದೆ ಎಂದ ಅವರು, ಈ ದೇವಸ್ಥಾನ ಪುನರ್ ನಿರ್ಮಾಣಕ್ಕೆ ನೆರವಾದ ಎಲ್ಲ ದಾನಿಗಳನ್ನು ಅಭಿನಂದಿಸಿದರು.
ಈ ವೇಳೆ ಮುಖಂಡರಾದ ಕಸ್ತೂರಿ ಗೌಡ, ಗಣೇಶ್, ಶಿವಕುಮಾರ್, ರಾಜುಶಿವರಾಜೇ ಗೌಡ, ಬಸವಣ್ಣ, ಸಾವರ್, ಮಂಜು, ವಿಜಯ್, ಹರೀಶ್, ಗೌರಮ್ಮ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.