ನೊಂದು ಬೆಂದವಳ ಬಾಳಲ್ಲಿ ಬೆಳದಿಂಗಳು ಮೂಡಲಿ…


Team Udayavani, Jan 29, 2023, 6:05 AM IST

ನೊಂದು ಬೆಂದವಳ ಬಾಳಲ್ಲಿ ಬೆಳದಿಂಗಳು ಮೂಡಲಿ…ನೊಂದು ಬೆಂದವಳ ಬಾಳಲ್ಲಿ ಬೆಳದಿಂಗಳು ಮೂಡಲಿ…

ಈಗ ಓದುತ್ತೀರಲ್ಲ; ಅದು ಕಥೆಯಲ್ಲ, ಜೀವನ! ಇಲ್ಲಿ ಕಷ್ಟಗಳದ್ದೇ ಕಾರುಬಾರು. ವೀಣಾ-ನಾರಾಯಣ ನಾಯ್ಕ… ಎಂಬ ದಂಪತಿ, ಈ ಕಥನದ ಮುಖ್ಯ ಪಾತ್ರಗಳು. ವಿಧಿ ಅವರನ್ನು ಬಗೆಬಗೆಯಲ್ಲಿ ಹಿಂಸಿಸಿದೆ. ದಿನಕ್ಕೊಂದು ಕಷ್ಟ ಕೊಟ್ಟಿದೆ. ಕಡೆಗೆ ಯಮರಾಜನನ್ನೂ ಹಿಂದೆ ಬಿಟ್ಟಿದೆ! ವೀಣಾ ಎಂಬ ಹೆಣ್ಣುಮಗಳು ವಿಧಿಯ ಅಟ್ಟಹಾಸಕ್ಕೆ ಕ್ಷಣಕ್ಕೊಮ್ಮೆ ಹೆದರಿ ನಡುಗುತ್ತಲೇ, ನಾನು ಸೋಲಲಾರೆ ಎಂದು ನಿರ್ಧರಿಸಿ, ಅವಡುಗಚ್ಚಿ ನಿಂತು ಬಿಟ್ಟಿದ್ದಾಳೆ. ಆಕೆಯ ನಿಲುವಿನಲ್ಲಿ ಬದುಕು ಕರುಣಿಸೋ ಭಗವಂತಾ ಎಂಬ ಪ್ರಾರ್ಥನೆಯಿದೆ.

***
ವೀಣಾ ಹೇಳುತ್ತಾರೆ: ಶಿರಸಿ- ಸಿದ್ದಾಪುರ ಸೀ ಮೆಯ ಒಂದು ಹಳ್ಳಿ ನಮ್ಮೂರು. ದುರಾ ದೃಷ್ಟವೆಂಬುದು ಬಾಲ್ಯದಲ್ಲೇ ನನಗೆ ಜತೆಯಾಯಿತು. ಹೆರಿಗೆಯ ಸಮಯದಲ್ಲಿ ಏನೋ ಸಮಸ್ಯೆಯಾಗಿ ಅಮ್ಮ ತೀರಿಕೊಂಡರಂತೆ. ಹಾಗಾಗಿ ನಾನು ಹುಟ್ಟುತ್ತಲೇ ತಬ್ಬಲಿ ಆಗಿಬಿಟ್ಟೆ. ಅಪ್ಪ ಇನ್ನೊಂದು ಮದುವೆಯಾಗಿ, ಕೆಲವು ವರ್ಷಗಳ ಅನಂತರ ತೀರಿಕೊಂಡರಂತೆ. ಅಮ್ಮನ ತಂದೆ- ತಾಯಿ(ಅಂದರೆ ನಮ್ಮ ಅಜ್ಜ-ಅಜ್ಜಿ) ತಮ್ಮ ಊರಾದ ಇಟಗಿಯಲ್ಲಿ ನನ್ನನ್ನು ಉಳಿಸಿ ಕೊಂಡರು. ಶಾಲೆಗೂ ಸೇರಿಸಿದರು. ಅಲ್ಲಿದ್ದುಕೊಂಡೇ ಬಂಧುಗಳು ಮತ್ತು ಇತರ ಮಕ್ಕಳ ಜತೆಯಲ್ಲಿ ಬೆಳೆದೆ. ಏಳನೇ ತರಗತಿ ಮುಗಿಯುತ್ತಿದ್ದಂತೆಯೇ, “ಇವಳು ಓದಿದ್ದು ಸಾಕು. ಮನೆಯಲ್ಲಿ ಇಟ್ಟುಕೊಂಡರೆ ಸಾಕುವುದು ಕಷ್ಟವಾಗುತ್ತದೆ. ಇವಳನ್ನು ಶ್ರೀಮಂತರ ಮನೆಯಲ್ಲಿ ಕೆಲಸಕ್ಕೆ ಸೇರಿಸೋಣ, ಅವಳ ಬದುಕಿಗೆ ಸಹಾಯ ವಾಗುತ್ತದೆ’ ಎಂದು ಮಾತಾಡಿಕೊಂಡ ಬಂಧುಗಳು, ಬೆಂಗಳೂರಿನಲ್ಲಿದ್ದ ಡಾಕ್ಟರ್‌ ಒಬ್ಬರ ಮನೆಗೆ ಕಳಿಸಿಯೇ ಬಿಟ್ಟರು. ಅಲ್ಲಿ, ಮಕ್ಕಳನ್ನು ನೋಡಿಕೊಳ್ಳುವ ಕೆಲಸ ನನ್ನದಾಗಿತ್ತು.ಈ ಮಧ್ಯೆ ನನಗೆ ಓದಿ ನಲ್ಲಿ ಆಸಕ್ತಿ ಇದೆ ಅನ್ನುವು ದನ್ನು ಆ ವೈದ್ಯ ದಂಪತಿ ಗಮನಿಸಿದರು. ಮುತುವರ್ಜಿ ವಹಿಸಿ ಶಾಲೆಗೆ ಸೇರಿಸಿದರು. ಮುಂದೆ ಕಾಲೇಜಿಗೂ ಸೇರಿಸುವ ಭರವಸೆ ನೀಡಿದ್ದರು.

ವಿಧಿಯ ಅಟ್ಟಹಾಸ ಶುರುವಾಗಿದ್ದು ಇಲ್ಲಿಂದಲೇ. ಎಸೆಸೆಲ್ಸಿ ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ, ಅಜ್ಜಿಗೆ ಅನಾರೋಗ್ಯವೆಂದೂ, ತತ್‌ಕ್ಷಣವೇ ಊರಿಗೆ ಬರಬೇ ಕೆಂದೂ ಸುದ್ದಿ ಬಂತು. ಗಡಬಡಿಸಿ ಊರಿಗೆ ಹೋದರೆ, ನಡುಗುತ್ತ ಕುಳಿತಿದ್ದ ಅಜ್ಜಿ ಹೇಳಿದರು: “ನಾಳೆ ಏನಾಗುತ್ತೋ ಗೊತ್ತಿಲ್ಲ ಕಣವ್ವ. ನಾನು ಬದುಕಿ ರುವಾಗಲೇ ನಿನಗೆ ಮದುವೆ ಮಾಡಿ, ಜವಾಬ್ದಾರಿ ಕಳೆದುಕೊಳ್ಳಬೇಕು…’ ಅನಂತರದಲ್ಲಿ ಎಲ್ಲವೂ ತರಾ ತುರಿಯಲ್ಲಿ ನಡೆದು ಹೋಯಿತು. 17ವರ್ಷಕ್ಕೇ ನನ್ನ ಮದುವೆಯಾಗಿ ಹೋಯಿತು. ಇದಾಗಿ ಕೆಲವೇ ತಿಂಗಳುಗಳಲ್ಲಿ ಅಜ್ಜ-ಅಜ್ಜಿ ಇಬ್ಬರೂ ತೀರಿಕೊಂಡರು.

ನಾನಾಗ ಅಕ್ಷರಶಃ ಅನಾಥೆಯಾದೆ. ಮುಂದೆ ಓದಬೇಕು ಎಂಬ ಆಸೆಯಿತ್ತು. ಆದರೆಅದಕ್ಕೆ ಅತ್ತೆ ಮನೆಯಲ್ಲಿ ಬೆಂಬಲವಿರಲಿಲ್ಲ. ನನ್ನ ಗಂಡನಿಗೆ  ಕೆಲಸ ಗೊತ್ತಿತ್ತು. ಮೂವರು ಗಂಡುಮಕ್ಕಳು ಮತ್ತು ಅಪ್ಪ-ಅಮ್ಮ ಇದ್ದ ತುಂಬು ಕುಟುಂಬ ಅವರದು. ನನ್ನ ಗಂಡನೇ ಕೊನೆಯ ಮಗ. ನಯಾಪೈಸೆ ವರದಕ್ಷಿಣೆ ತಾರದ, ಬಡವರ ಮನೆಯ ಹುಡುಗಿ ಎಂಬ ಕಾರಣಕ್ಕೆ ಗಂಡನ ಮನೆಯಲ್ಲಿ ಹಂಗಿಸಿದರು. ಹೀಯಾಳಿಸಿ ಮಾತಾಡಿದರು. ಸಮಾ ಧಾನದ ಸಂಗತಿ ಎಂದರೆ-ಗಂಡ ನನ್ನ ಬೆಂಬಲಕ್ಕಿದ್ದರು. ಹೀಗಿರುವಾಗಲೇ ನಮಗೊಂದು ಹೆಣ್ಣು ಮಗು ವಾಯಿತು. ಗಂಡು ಸಂತಾನ ಬೇಕು ಎಂಬ ವರಾತ ಕುಟುಂಬದವರಿಂದ ಬಂತು. ಎರಡನೆಯದೂ ಹೆಣ್ಣು ಮಗುವಾಯಿತು. ಆ ಸಂದರ್ಭದಲ್ಲಿ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ಈ ಮಧ್ಯೆ ಅನಾರೋಗ್ಯದ ಕಾರಣದಿಂದ ಮಾವ ತೀರಿಕೊಂಡರು. ಕಿರಿಕಿರಿಯ ಜತೆಗೆ ಬದುಕುವ ಬದಲು, ಪ್ರತ್ಯೇಕವಾಗಿ ವಾಸಿಸೋಣ ಎಂದು ನಿರ್ಧರಿಸಿದ ನನ್ನ ಗಂಡ, ತನ್ನ ಪಾಲಿನ ಜಮೀನು ಕೇಳಿದಾಗ, ಅಣ್ಣಂದಿರು ಅದಕ್ಕೆ ಒಪ್ಪಲಿಲ್ಲ. ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಳ್ಳುವಷ್ಟು ಹಣ ವಿಲ್ಲದ್ದರಿಂದ, ನಾವು ಕುಮಟಾಕ್ಕೆ ಬಂದೆವು.

ಇಷ್ಟು ದಿನಗಳನ್ನು ಕಷ್ಟದಲ್ಲೇ ಕಳೆದಿದ್ದೇವೆ. ಇನ್ಮುಂದೆ ನಮ್ಮ ಪಾಲಿಗೆ ಖುಷಿಯ ಕ್ಷಣಗಳು ಬರುತ್ತವೆ ಅಂದುಕೊಂಡೆವು. ಉಹೂಂ, ಹಾಗಾಗಲಿಲ್ಲ. ಕಷ್ಟಗಳು ಮತ್ತಷ್ಟು ಹೆಚ್ಚಿದವು. ಎರಡು ವರ್ಷದ ಚಿಕ್ಕಮಗಳು ಅದೊಮ್ಮೆ ಫಿಟ್ಸ್‌ ಬಂದು ಬಿದ್ದು ಎಚ್ಚರ ತಪ್ಪಿದಳು. ಅನಂತರದಲ್ಲಿ ಮಾತಾಡುವುದನ್ನೂ ನಿಲ್ಲಿಸಿ ಬಿಟ್ಟಳು. ಅನಂತರದಲ್ಲಿ ನಾವು ಕೈಮುಗಿಯದ ದೇವರಿಲ್ಲ. ಸುತ್ತದ ಆಸ್ಪತ್ರೆಯಿಲ್ಲ. ಹೀಗಿರುವಾಗಲೇ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಅಲ್ಲಿ ಹೈ ಡೋಸ್‌ ಆಗಿ ಆಕೆ ಬುದ್ಧಿಮಾಂದ್ಯೆ ಆಗಿಬಿಟ್ಟಳು.

ದಿನಗಳು ಕಳೆದಂತೆಲ್ಲ- ಕಷ್ಟ, ಕಣ್ಣೀರು ಮತ್ತು ಖರ್ಚು ಹೆಚ್ಚ ತೊಡಗಿತು. ಒಬ್ಬರ ಸಂಪಾದನೆಯಲ್ಲಿ ಸಂಸಾರ ನಿರ್ವಹಣೆ ಕಷ್ಟ ಅನ್ನಿಸಿದಾಗ ನಾನು ಫ್ಯಾನ್ಸಿ ಸ್ಟೋರ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮಗಳಿಗೆ ಆಗಿಂದಾಗ್ಗೆ ಅಗತ್ಯವಿರುವ ಚಿಕಿತ್ಸೆ ಕೊಡಿಸುತ್ತಿದ್ದೆ. ತಂಗಿಯನ್ನು ಸಂಭಾ ಳಿಸುವುದು ಹೇಗೆ ಎಂದು ದೊಡ್ಡ ಮಗಳಿಗೆ ಹೇಳಿಕೊಟ್ಟೆ. ಪಾಪ, ತಿಂದುಂಡು ನಲಿಯಬೇಕಿದ್ದ ವಯಸ್ಸಿನಲ್ಲಿ ನನ್ನ ಮಗಳು ಹೊಸ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದಳು.

ಇದೆಲ್ಲ ಎಷ್ಟು ದಿನ? ನಮ್ಮ ಛಲಕ್ಕೆ ಹೆದರಿ ಕಷ್ಟಗಳು ಓಡಿಹೋಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾಗಲೇ ಲಾಕ್‌ಡೌನ್‌ ಬಂತು. ಎಲ್ಲ ಕೆಲಸಗಳೂ ಬಂದ್‌ ಆಗಿ ಮನೆ ಯಲ್ಲೇ ಕೂರುವಂತಾಯಿತು. ಆಗಲೇ ನನ್ನ ಗಂಡನಿಗೆ ಹಾರ್ಟ್‌ ಅಟ್ಯಾಕ್‌ ಆಗಿ ಆಪರೇಶನ್‌ ಮಾಡಿಸಬೇ ಕಾಯ್ತು. ಕಂಡಕಂಡವರಿಗೆ ಕೈ ಮುಗಿದು ಹಣ ಹೊಂದಿಸಿ ಚಿಕಿತ್ಸೆ ಕೊಡಿಸಿದೆ.

ಸ್ವಲ್ಪ ದಿನ ಕಳೆಯುತ್ತಿದ್ದಂತೆ ಅವರ ಮುಖಪೂರ್ತಿ ಊದಿಕೊಂಡಿತು. ಪರಿಚಿತರೊಬ್ಬರ ಸಲಹೆಯಂತೆ ಹುಬ್ಬಳ್ಳಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಹೋದೆವು. ಟೆಸ್ಟ್ ಮಾಡಿದ ವೈದ್ಯರು ಕ್ಯಾನ್ಸರ್‌ ಆಗಿಬಿಟ್ಟಿದೆ ಕಣಮ್ಮ. ತತ್‌ಕ್ಷಣ ಆಪರೇಶನ್‌ ಮಾಡಬೇಕು ಎಂದರು!

ಅವರ ಮಾತು ಕೇಳುತ್ತಿದ್ದಂತೆಯೇ ಕಾಲ ಕೆಳಗಿನ ಭೂಮಿ ಕುಸಿದಂಥ ಅನುಭವ. ಆಸ್ಪತ್ರೆಯ ವೈದ್ಯರ ಬಳಿಗೆ ಹೋಗಿ ನನ್ನ ಗಂಡನನ್ನು ಉಳಿಸಿಕೊಡಿ ಎಂದು ಬೇಡಿಕೊಂಡೆ. ನೋಡ ನೋಡುತ್ತಲೇ ಆಪರೇಶನ್‌ ಆಗಿಹೋಯಿತು. ನನ್ನ ಬಳಿ ಆಯುಷ್ಮಾನ್‌ ಕಾರ್ಡ್‌ ಇತ್ತು. ಆ ಯೋಜನೆಯಲ್ಲಿ ಆಪರೇಶನ್‌ ಆಗಿದೆ. ಆದರೆ ಕಿಮೋಥೆರಪಿ ಸೇರಿದಂತೆ ಇನ್ನೂ ಹಲವು ಚಿಕಿತ್ಸೆಗಳ ಅಗತ್ಯವಿದೆ. ಚಿಕಿತ್ಸೆಗೆ ಹಣ ಹೊಂದಿಸುವುದು ಹೇಗೆ? ಎಂಬ ಚಿಂತೆಯಲ್ಲಿ ಇರುವಾಗಲೇ ನಮ್ಮ ಕಷ್ಟದ ಕಥೆ ಕೇಳಿದ ಗುರುತು ಪರಿಚಯ ಇಲ್ಲದ ಜನ ಕೈಲಾದಷ್ಟು ಹಣ ಕೊಟ್ಟರು. ಈ ಮಧ್ಯೆ, ತಮ್ಮನನ್ನು ನೋಡಲು ಬಂದ ಭಾವ, ನನ್ನ ಕೋರಿಕೆಯ ಮೇರೆಗೆ, ಸ್ವಲ್ಪ ದಿನಗಳ ಮಟ್ಟಿಗೆ ಮಕ್ಕಳನ್ನು ಊರಲ್ಲಿ ಇರಿಸಿಕೊಳ್ಳಲು ಒಪ್ಪಿದರು.

ಗಂಡನಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ. ಎಷ್ಟು ಕಷ್ಟವಾದರೂ ಸರಿ, ಅವನನ್ನು ಉಳಿಸಿಕೊಳ್ಳಬೇಕು ಅನ್ನುವುದಷ್ಟೇ ನನ್ನ ಆಸೆ ಮತ್ತು ಗುರಿಯಾಗಿದೆ. ಸಹಾ ಯಕ್ಕಾಗಿ ಕೈಮುಗಿದು ಬೇಡುತ್ತಿದ್ದೇನೆ. ಈವರೆಗೂ ಸಹಾಯ ಮಾಡಿರು ವವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಈ ಸಂದರ್ಭದ ನನ್ನ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲೂ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಅಂಥವರ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚಾಗಿ- ಕಾಯುವ, ಕಂಬನಿ ಒರೆಸುವ ಜನರಿದ್ದಾರೆ ಎಂಬ ನಂಬಿಕೆ ನನ್ನದು. ಎಲ್ಲರ ಹಾರೈಕೆ ನನಗಿರಲಿ ಎಂಬುದು ವೀಣಾ ಅವರ ಪ್ರಾರ್ಥನೆ.
***
ಕ್ಯಾನ್ಸರ್‌ನ ಹೆಸರು ಕೇಳಿದರೇ ಗಾಬರಿಯಾಗಿ ಕುಸಿದು ಬೀಳುವ ಜನರಿದ್ದಾರೆ. ಚಿಕಿತ್ಸೆಗೆ ಹಣ ಹೊಂದಿಸುವ ದಾರಿ ತಿಳಿಯದೆ ಕಂಗಾಲಾದವರೂ ಇದ್ದಾರೆ. ಅಂಥವರ ಮಧ್ಯೆ, ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಛಲದ ವೀಣಾ, ಈ ಕಾಲದ ಸತಿ ಸಾವಿತ್ರಿಯಂತೆ ಕಾಣುತ್ತಾಳೆ. ನಮ್ಮ ಪ್ರಾರ್ಥನೆ, ಹಾರೈಕೆ ಮತ್ತು ಕಿಂಚತ್‌ ಸಹಾಯ ಆಕೆಗೆ ಆನೆಬಲ ಕೊಡಬಲ್ಲವು. ಬದುಕಿಡೀ ಕಷ್ಟಗಳ ಕುಲು ಮೆಯಲ್ಲೇ ಬೆಂದಿರುವ ಈ ಹೆಣ್ಣು ಮಗಳ ಬದುಕಲ್ಲಿ ಮುಂದೆ ಬೆಳದಿಂಗಳು ಹರಡಿಕೊಳ್ಳಲಿ ಎಂದು ಹಾರೈಸೋಣ.

ಚಿಕಿತ್ಸೆಗೆ ನೆರವಾಗಲು ಇಚ್ಛಿಸುವವರು ಸಂಪರ್ಕಿಸಿ:
Narayan Rama Naik
Ac number 110099656680
Canara bank, A V. Baliga college, kumata
IFSC code: CNRB 0010354

– ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.