ಸ್ತನ ಕ್ಯಾನ್ಸರ್‌- ಮ್ಯಾಮೊಗ್ರಾಮ್‌


Team Udayavani, Jan 29, 2023, 1:03 PM IST

5-breast-cancer

ಭಾರತ ಮತ್ತು ಜಗತ್ತಿನಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ್‌ ಸ್ತನ ಕ್ಯಾನ್ಸರ್‌. ಜಾಗತಿಕವಾಗಿ ವರ್ಷಕ್ಕೆ 22,61,419 ಸ್ತನ ಕ್ಯಾನ್ಸರ್‌ ಪ್ರಕರಣಗಳು ಕಂಡುಬರುತ್ತವಾದರೆ ಭಾರತದಲ್ಲಿ ಇದು 1,78,361ರಷ್ಟಿದೆ.

ಸ್ತನ ಕ್ಯಾನ್ಸರ್‌:

ಅಪಾಯಾಂಶಗಳೇನು?

„ ವಂಶವಾಹಿ ಮತ್ತು ವಂಶಪಾರಂಪರ್ಯ: ಕೆಲವು ವಂಶವಾಹಿ ಬದಲಾವಣೆಗಳು ವಂಶಪಾರಂಪರ್ಯವಾಗಿ ಬಂದಿರುತ್ತವೆ ಅಥವಾ ಹೆತ್ತವರಿಂದ ಮಕ್ಕಳಿಗೆ ಹರಿದು ಬರುತ್ತವೆ.

„ ಸ್ತನ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ ಹೊಂದಿರುವವರಿಗೆ ಈ ಕಾಯಿಲೆ ತಲೆದೋರುವ ಸಾಧ್ಯತೆಗಳು ಅಧಿಕ.

„ ಮಕ್ಕಳಾಗದ ಅಥವಾ 30 ವರ್ಷ ವಯಸ್ಸಿನ ಬಳಿಕ ಮೊದಲ ಮಗುವಿಗೆ ಜನ್ಮ ನೀಡಿರುವ ಮಹಿಳೆಯರಿಗೆ ಸ್ತನದ ಕ್ಯಾನ್ಸರ್‌ ಉಂಟಾಗುವ ಅಪಾಯ ಸ್ವಲ್ಪ ಹೆಚ್ಚು.

„ ಬೊಜ್ಜು ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಸ್ತನದ ಕ್ಯಾನ್ಸರ್‌ ಉಂಟಾಗಲು ಅಪಾಯಾಂಶಗಳು ಎಂದು ಪರಿಗಣಿತವಾಗಿವೆ.

„ ಮದ್ಯಪಾನಕ್ಕೂ ಸ್ತನ ಕ್ಯಾನ್ಸರ್‌ ತಗಲುವ ಅಪಾಯ ಹೆಚ್ಚಳಕ್ಕೂ ಸಂಬಂಧವಿದೆ.

„ ಗರ್ಭಧಾರಣೆ ನಿಯಂತ್ರಣದ ಕೆಲವು ವಿಧಾನಗಳಲ್ಲಿ ಹಾರ್ಮೋನ್‌ ಗಳ ಬಳಕೆಯಾಗುತ್ತಿದ್ದು, ಇದು ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸಬಲ್ಲುದು.

„ ಶಿಶುವಿಗೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಎದೆಹಾಲು ಉಣಿಸುವುದರಿಂದ ಸ್ತನ ಕ್ಯಾನ್ಸರ್‌- ಮ್ಯಾಮೊಗ್ರಾಮ್‌ ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯ ಸಾಕಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಹೇಳಿವೆ.

ತಪಾಸಣೆಗಾಗಿ ಮ್ಯಾಮೊಗ್ರಾಮ್‌

ಸ್ತನದಲ್ಲಿ ಯಾವುದೇ ಲಕ್ಷಣಗಳು ಅಥವಾ ಸಮಸ್ಯೆಗಳನ್ನು ಹೊಂದಿಲ್ಲದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಚಿಹ್ನೆಗಳನ್ನು ತಪಾಸಿಸುವುದಕ್ಕಾಗಿ ಸ್ಕ್ರೀನಿಂಗ್‌ ಮ್ಯಾಮೊಗ್ರಾಮ್‌ ಉಪಯೋಗಿಸಲಾಗುತ್ತದೆ. ರೂಢಿಗತ ಮ್ಯಾಮೊಗ್ರಾಮ್‌ಗಳಿಂದ ಸ್ತನ ಕ್ಯಾನ್ಸರ್‌ನ್ನು ಅದರ ಆರಂಭಿಕ ಹಂತಗಳಲ್ಲಿಯೇ ಪತ್ತೆ ಹಚ್ಚಬಹುದಾಗಿದ್ದು, ಈ ಹಂತಗಳಲ್ಲಿ ಚಿಕಿತ್ಸೆ ಒದಗಿಸಿದರೆ ಹೆಚ್ಚು ಯಶಸ್ವಿಯಾಗುತ್ತದೆ. ಮ್ಯಾಮೊಗ್ರಫಿ ಬಳಕೆಗೆ ಪ್ರಧಾನ ಕಾರಣ ಸ್ತನ ಕ್ಯಾನ್ಸರನ್ನು ಎಷ್ಟು ಸಾಧ್ಯವೋ ಅಷ್ಟು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವುದು. ಪ್ರತೀ ಸ್ತನದ ಅಂಗಾಂಶಗಳ ಎಕ್ಸ್‌-ರೇಗಳನ್ನು ಸಾಮಾನ್ಯವಾಗಿ 2 ವಿಭಿನ್ನ ಕೋನಗಳಿಂದ ತೆಗೆಯಲಾಗುತ್ತದೆ.

ತಪಾಸಣೆಗಾಗಿ ಮ್ಯಾಮೊಗ್ರಾಮ್‌: ಯಾವಾಗ ಮಾಡಿಸಿಕೊಳ್ಳಬೇಕು?

ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಮತ್ತು ಆದಷ್ಟು ಬೇಗನೆ ಸಮಗ್ರ ಕ್ಯಾನ್ಸರ್‌ ಚಿಕಿತ್ಸೆಯನ್ನು ಪಡೆಯುವುದು ಸ್ತನ ಕ್ಯಾನ್ಸರ್‌ನಿಂದಾಗಿ ಉಂಟಾಗುವ ಸಾವುಗಳನ್ನು ತಡೆಯುವಲ್ಲಿ ನಿರ್ಣಾಯಕವಾಗಿರುವ ಎರಡು ಮಾರ್ಗಗಳು. ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿ, ಅದು ಸಣ್ಣ ಪ್ರಮಾಣದಲ್ಲಿದ್ದು, ದೇಹದ ಇತರ ಭಾಗಗಳಿಗೆ ಹರಡಿಕೊಂಡಿರದಂತಹ ಸ್ಥಿತಿಯಲ್ಲಿಯೇ ಪತ್ತೆಹಚ್ಚಿದಾಗ ಗುಣಪಡಿಸಲು ಸುಲಭವಾಗುತ್ತದೆ. ನಿಯಮಿತವಾಗಿ ತಪಾಸಣೆಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದಕ್ಕೆ ಇರುವ ಗಮನಾರ್ಹ ಕಾರ್ಯತಂತ್ರವಾಗಿದೆ.

ತಪಾಸಣೆಯ ಉದ್ದೇಶಗಳಿಗಾಗಿ, ಸ್ತನ ಕ್ಯಾನ್ಸರ್‌ನ ವೈಯಕ್ತಿಕ ಇತಿಹಾಸ ಹೊಂದಿಲ್ಲದ, ಸ್ತನ ಕ್ಯಾನ್ಸರ್‌ನ ಬಲವಾದ ಕೌಟುಂಬಿಕ ಇತಿಹಾಸ ಹೊಂದಿಲ್ಲದ ಅಥವಾ ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸಬಲ್ಲುದು ಎಂಬುದು ಖಚಿತವಾಗಿರುವ ವಂಶವಾಹಿ ರೂಪಾಂತರಗಳನ್ನು (ಬಿಆರ್‌ ಸಿಎ ವಂಶವಾಹಿಯಂಥವು) ಹೊಂದಿಲ್ಲದ ಮತ್ತು 30 ವರ್ಷ ವಯಸ್ಸಿಗೆ ಮುನ್ನ ಎದೆಯ ರೇಡಿಯೇಶನ್‌ ಚಿಕಿತ್ಸೆಗೆ ಒಳಗಾಗಿಲ್ಲದ ಮಹಿಳೆಯನ್ನು ಸ್ತನ ಕ್ಯಾನ್ಸರ್‌ನ ಸರಾಸರಿ ಅಪಾಯ ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ. ಈ ಸರಾಸರಿ ಅಪಾಯದಲ್ಲಿ:

40 ಮತ್ತು 44 ವರ್ಷ ವಯಸ್ಸಿನೊಳಗಿನ ಮಹಿಳೆ ಪ್ರತೀ ವರ್ಷ ಮ್ಯಾಮೊಗ್ರಾಮ್‌ ಸಹಿತ ತಪಾಸಣೆ ಮಾಡಿಸಿಕೊಳ್ಳುವ ಆಯ್ಕೆ ಹೊಂದಿರಬೇಕು.

„ 45ರಿಂದ 54 ವರ್ಷ ವಯಸ್ಸಿನೊಳಗಿನ ಮಹಿಳೆಯರು ಪ್ರತೀ ವರ್ಷ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬೇಕು.

„ 55 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ವರ್ಷ ಬಿಟ್ಟು ವರ್ಷ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬಹುದು ಅಥವಾ ಅವರು ಪ್ರತೀ ವರ್ಷವೂ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳುವುದನ್ನು ಮುಂದುವರಿಸಬಹುದು. ಮಹಿಳೆ ಆರೋಗ್ಯವಾಗಿ ಮತ್ತು ಕನಿಷ್ಠ 10 ವರ್ಷ ನಿರೀಕ್ಷಿತ ಜೀವನ ಹೊಂದಿರುವವರೆಗೆ ತಪಾಸಣೆಯನ್ನು ಮುಂದುವರಿಸಬೇಕು.

ಕೆಲವು ನಿರ್ದಿಷ್ಟ ಅಂಶಗಳ ಆಧಾರದಲ್ಲಿ ಸ್ತನದ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚು ಹೊಂದಿರುವವ ಮಹಿಳೆಯರು ಪ್ರತೀ ವರ್ಷ ಸ್ತನದ ಎಂಆರ್‌ಐ ಸ್ಕ್ಯಾನ್‌ ಮತ್ತು ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬೇಕು. ಇದು ಸಾಮಾನ್ಯವಾಗಿ 30 ವರ್ಷ ವಯಸ್ಸಿನಿಂದ ಆರಂಭವಾಗಬೇಕು. ಇಂತಹ ಮಹಿಳೆಯರೆಂದರೆ:

„ ಅಪಾಯ ವಿಶ್ಲೇಷಣೆಯ ಆಧಾರದಲ್ಲಿ ಸ್ತನ ಕ್ಯಾನ್ಸರ್‌ನ ಜೀವಮಾನ ಅಪಾಯ ಶೇ. 20ರಿಂದ 25 ಅಥವಾ ಅದಕ್ಕಿಂತ ಹೆಚ್ಚು ಹೊಂದಿರುವವರು.

„ ಬಿಆರ್‌ಸಿಎ ವಂಶವಾಹಿ ಅಸಹಜತೆ ಹೊಂದಿರುವ ಮಹಿಳೆಯರು.

„ ಬಿಆರ್‌ಸಿಎ ವಂಶವಾಹಿ ಅಸಹಜತೆ ಹೊಂದಿರುವ ವ್ಯಕ್ತಿಗಳ ಮೊದಲ ದರ್ಜೆಯ ಸಂಬಂಧಿ ಮಹಿಳೆಯರು.

„ 10ರಿಂದ 30 ವರ್ಷ ವಯೋಮಾನದಲ್ಲಿ ಎದೆಯ ರೇಡಿಯೇಶನ್‌ ಚಿಕಿತ್ಸೆಗೆ ಒಳಗಾದವರು.

„ ವಂಶವಾಹಿ ಅಸಹಜತೆಗೆ ಸಂಬಂಧಿಸಿದ ನಿರ್ದಿಷ್ಟ ಸಿಂಡ್ರೋಮ್‌ಗಳನ್ನು ಹೊಂದಿರುವವರು.

ಮ್ಯಾಮೊಗ್ರಾಮ್‌ ಮಾಡಿಸಿಕೊಂಡ ಬಳಿಕ ಮುಂದೇನು?

ನಿಮ್ಮ ವೈದ್ಯರು ನಿಮ್ಮ ಮ್ಯಾಮೊಗ್ರಫಿಯಲ್ಲಿ ಏನಾದರೂ ಅಸಹಜತೆಗಳು ಇವೆಯೇ ಎಂದು ಪರಿಶೀಲಿಸುತ್ತಾರೆ. ಯಾವುದೇ ಅಸಹಜತೆಯ ಸಂದೇಹ ಕಂಡುಬಂದರೆ ಇನ್ನಷ್ಟು ಪರೀಕ್ಷೆಗಳಿಗೆ ಅವರು ಶಿಫಾರಸು ಮಾಡಬಹುದು. ಫ‌ಲಿತಾಂಶಗಳು ಸಹಜವಾಗಿದ್ದರೆ ಸೂಚಿತ ಕಾಲಮಾನಕ್ಕೆ ಸರಿಯಾಗಿ ಮುಂದಿನ ತಪಾಸಣೆಗಳಿಗೆ ಒಳಗಾಗುವಂತೆ ಸಲಹೆ ನೀಡಬಹುದು.

ಕಾಲಕ್ರಮದಲ್ಲಿ ಸ್ತನ ಕ್ಯಾನ್ಸರ್‌ ಗೆ ಚಿಕಿತ್ಸೆಯು ಸಾಕಷ್ಟು ಸುಧಾರಣೆ ಕಂಡಿದ್ದು, ಬದುಕುಳಿಯುವ ಪ್ರಮಾಣ ಮತ್ತು ಅನಂತರದ ಬದುಕನ್ನು ಸಹಜತೆಗೆ ಹೆಚ್ಚು ನಿಕಟವಾಗಿ ಸಾಗಿಸಬಹುದಾದಷ್ಟು ಪ್ರಗತಿ ಹೊಂದಿದೆ. ಹಿಂದೆ ಗುಣ ಹೊಂದುವ ಪ್ರಮಾಣ ಸಾಕಷ್ಟು ಕಡಿಮೆ ಮತ್ತು ಚಿಕಿತ್ಸೆಯ ಕೆಲವೇ ಆಯ್ಕೆಗಳಿದ್ದರೆ ಈಗ ನಿಖರವಾದ ಅತ್ಯಾಧುನಿಕ ಚಿಕಿತ್ಸೆಯ ಸೌಲಭ್ಯಗಳು ಆವಿಷ್ಕಾರಗೊಂಡಿವೆ. ಸ್ತನ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿದರೆ ಅದನ್ನು ಗುಣಪಡಿಸಬಹುದಾದ ಸಾಧ್ಯತೆಗಳು ಅತ್ಯಂತ ಹೆಚ್ಚು. ಹೀಗಾಗಿ ಲಭ್ಯ ತಪಾಸಣೆಯ ವಿಧಾನ ಮತ್ತು ಸೌಲಭ್ಯಗಳ ಬಗ್ಗೆ ನಾವು ಅರಿವನ್ನು ಹೊಂದುವುದರಿಂದ ಅವುಗಳ ಗರಿಷ್ಠ ಪ್ರಯೋಜನವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಡಾ| ಎಂ.ಎಸ್‌. ಅತಿಯಮಾನ್‌, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ರೇಡಿಯೋಥೆರಪಿ ಮತ್ತು ಓಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕ್ಯಾನ್ಸರ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.