ಉಡುಪಿ: ಅದ್ದೂರಿಯಾಗಿ ನಡೆದ ಪುನೀತ್ ಪರ್ವ
Team Udayavani, Jan 30, 2023, 12:32 AM IST
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ವಿಧಾನಸಭೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ನೇತೃತ್ವದಲ್ಲಿ ಮಿಷನ್ ಕಾಂಪೌಂಡ್‌ನ ಕ್ರಿಶ್ಚಿಯನ್ ಪ.ಪೂ. ಕಾಲೇಜು ಮೈದಾನದ ಇಂದಿರಾಗಾಂಧಿ ವೇದಿಕೆ ಯಲ್ಲಿ ರವಿವಾರ ಕರ್ನಾಟಕ ರತ್ನ ಡಾ| ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ “ಪುನೀತ್ ಪರ್ವ-2023′ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಡಾ| ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮತ್ತು ದೀಪ ಬೆಳಗಿಸುವ ಮೂಲಕ ವಿಶೇಷವಾಗಿ ಉದ್ಘಾಟಿಸಲಾಯಿತು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಡಾ| ರಾಜ್‌ಕುಮಾರ್ ಕುಟುಂಬವು ಚಲನಚಿತ್ರ ಹಾಗೂ ಸಾಮಾಜಿಕ ಚಟುವಟಿಕೆ ನಡೆಸುವ ಮೂಲಕ ಸಮಾಜದೊಂದಿಗೆ ಬೆರೆತಿದೆ. ಡಾ| ಪುನೀತ್ ರಾಜ್‌ಕುಮಾರ್ ಅವರು ತಮ್ಮ ಕಾರ್ಯದ ಮೂಲಕ ಜನ ಮಾನಸದಲ್ಲಿ ಸದಾ ಉಳಿದುಕೊಂಡಿರುತ್ತಾರೆ ಎಂದರು.
ಕೃಷಮೂರ್ತಿ ಆಚಾರ್ಯ ಅವರು ಉಡುಪಿ ಪರ್ಯಾಯೋತ್ಸವ ಸಂದ ರ್ಭ ದಲ್ಲಿ ಹಲವು ರೀತಿಯ ಕಾರ್ಯ ಕ್ರಮಗಳನ್ನು ಆಯೋಜಿಸುವ ಜತೆ ಜತೆಗೆ ಅವರ ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯ. ಅಶಕ್ತರಿಗೆ ಹಲವು ಸೌಲಭ್ಯಗಳನ್ನು ಒದ ಗಿಸು ವುದು ಮತ್ತು ಶಾಲೆ, ಅಂಗನವಾಡಿ ಗಳಿಗೆ ಅಗತ್ಯ ಪರಿಕರ ಪೂರೈಸುವ ಮೂಲಕ ಸಾಮಾಜಿಕ ಬದ್ಧತೆ ಮೆರೆಯುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಕೃಷ್ಣಮೂರ್ತಿ ಆಚಾರ್ಯ ಅವರು ಸ್ವಾಗತಿಸಿ, ಪುನೀತ್ ರಾಜ್‌ಕುಮಾರ್ ಅವರ ಸಾಮಾಜಿಕ ಕಾರ್ಯ ಮತ್ತು ಸಮಾಜದ ಬಗ್ಗೆ ಅವರಲ್ಲಿದ್ದ ಕಳಕಳಿಯನ್ನು ಸ್ಮರಿಸಿದರು.
ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಪಕ್ಷದ ಪ್ರಮುಖ ರಾದ ಎಂ.ಎ.ಗಫೂರ್, ಪ್ರಖ್ಯಾತ್ ಶೆಟ್ಟಿ, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಭುಜಂಗ ಶೆಟ್ಟಿ, ದಿವಾಕರ್ ಕುಂದರ್, ರಮೇಶ್ ಕಾಂಚನ್, ಡಾ| ಸುನೀತಾ ಶೆಟ್ಟಿ, ದಿನಕರ ಹೇರೂರು, ವಿಜಯ ಪೂಜಾರಿ ಬೈಲೂರು, ಹಬೀಬ್ ಅಲಿ, ಮಹಾಬಲ ಕುಂದರ್, ಗೀತಾ ವಾಗ್ಲೆ, ಮಮತಾ ಶೆಟ್ಟಿ, ಸೌರಬ್ ಬಲ್ಲಾಳ್, ಯುವರಾಜ್, ರವಿರಾಜ್, ಗುರುಪ್ರಸಾದ್ ಶೆಟ್ಟಿ, ಜಯಕುಮಾರ್ ಮಲ್ಪೆ, ಗಾಯತ್ರಿ, ರೋಶನ್ ಶೆಟ್ಟಿ, ಗೋಪಿ ನಾಯಕ್, ಶ್ಯಾಮಲಾ ಸುಧಾಕರ್, ಶಬರೀಶ್, ಸುಕೇಶ್ ಕುಂದರ್ ಪರ್ಕಳ, ಸುರೇಶ್ ಶೆಟ್ಟಿ, ರಾಜೇಶ್ ಮೆಂಡನ್, ಸಂಧ್ಯಾ ತಿಲಕರಾಜ್, ಕಿಶೋರ್ ಮೊದಲಾದವರು ಉಪ ಸ್ಥಿತರಿದ್ದರು.
ಕೊಡುಗೆ ಹಸ್ತಾಂತರ
ಪುನೀತ್ ಪರ್ವ ಕಾರ್ಯಕ್ರಮದಲ್ಲಿ ನೂರು ಶಾಲೆ ಮತ್ತು ನೂರು ಅಂಗನವಾಡಿಗೆ ಅಗತ್ಯವಿರುವ ಕುರ್ಚಿ, ಕ್ರೀಡಾ ಪರಿಕರಗಳನ್ನು ಹಾಗೂ 3,500 ಆಟೋ ಚಾಲಕರಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.