![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 30, 2023, 1:17 PM IST
ಉಡುಪಿ: ಕಳೆದ 15 ವರ್ಷಗಳಿಂದ ಪ್ರವಾಸ ಪ್ರಿಯರಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳ ಸೌಲಭ್ಯಗಳನ್ನು ಒದಗಿಸುತ್ತಿರುವ ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಜಾಕಾಲೀನ ಪ್ರವಾಸಗಳ ಸಂಯೋಜಕ “ಅಪ್ನಾ ಹಾಲಿಡೇಸ್’ ಜ.30ರಿಂದ 4 ದಿನಗಳ ಕಾಲ ಮಂಗಳೂರು ಮತ್ತು ಉಡುಪಿಯಲ್ಲಿ ಪ್ರವಾಸ ಮೇಳವನ್ನು ಸಂಯೋಜಿಸಿದೆ.
ಜ.30 ಮತ್ತು 31 ರಂದು ಮಂಗಳೂರಿನ ಆರ್ಯ ಸಮಾಜ ರಸ್ತೆಯಲ್ಲಿರುವ “ಕುಡ್ಲ ವಿಲ್ಲಾ’ದಲ್ಲಿ ಹಾಗೂ ಫೆ.1 ಮತ್ತು 2 ರಂದು ಉಡುಪಿಯ ಕೋರ್ಟ್ ಹಿಂಬದಿ ರಸ್ತೆಯಲ್ಲಿರುವ “ಉಡುಪಿ ಇನ್ – ಬಿಬಿ’ ವಠಾರದಲ್ಲಿ ಅಪ್ನಾ ಹಾಲಿಡೇಸ್ ಪ್ರವಾಸ ಮೇಳ ನಡೆಯಲಿದೆ.
ಈ ಪ್ರವಾಸ ಮೇಳದಲ್ಲಿ ಮುಂದಿನ ರಜಾದಿನಗಳಲ್ಲಿ ತೆರಳಲಿರುವ ಸ್ವಿಜರ್‌ಲ್ಯಾಂಡ್ ಸಹಿತ 13 ದೇಶಗಳ ವಿವಿಧ ಯುರೋಪ್ ಪ್ರವಾಸಗಳು (ಮೇ 10, 15, 29, ಜೂನ್ 20, ಜುಲೈ 7, 24 : 8/9/10/13 ದಿನಗಳು), ಸಿಂಗಾಪುರ-ಮಲೇಷ್ಯಾ-ಥೈಲ್ಯಾಂಡ್ (ಎಪ್ರಿಲ್ 11, ಮೇ 16, ಆಗಸ್ಟ್ 8 : 7/11 ದಿನಗಳು), ದುಬಾೖ ಡಿಲೈಟ್ (ಫೆಬ್ರವರಿ 11, ಮಾರ್ಚ್ 17 : 5 ದಿನಗಳು), ವಿಯೆಟ್ನಾಂ-ಕಂಬೋಡಿಯಾ (ಮಾರ್ಚ್ 12, ಮೇ 15 : 9 ದಿನಗಳು), ಬೆಸ್ಟ್ ಆಫ್ ಪಿಲಿಫೈನ್ಸ್ (ಎಪ್ರಿಲ್ 17 : 8 ದಿನಗಳು) ಮುಂತಾದ ವಿದೇಶ ತಂಡಪ್ರವಾಸಗಳನ್ನು ಕಾದಿರಿಸುವ ಪ್ರತಿಯೊಬ್ಬ ಪ್ರವಾಸಿಗರಿಗೆ ವಿಶೇಷ ಕೊಡುಗೆ/ಡಿಸ್ಕೌಂಟ್ ನೀಡಲಾಗುವುದು.
ಅಲ್ಲದೇ ಪ್ರವಾಸ ಮೇಳಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸ ಪ್ರಿಯರಿಗೆ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಇದರೊಂದಿಗೆ ಕಾಶಿ ಯಾತ್ರೆ, ಕಾಶ್ಮೀರ, ಗುಜರಾತ್ ಪ್ರವಾಸ, ದಕ್ಷಿಣ ಭಾರತ ಯಾತ್ರೆ, ರಾಜಸ್ಥಾನ್ ಪ್ರವಾಸ, ಚಾರ್‌ಧಾಮ್ ಪ್ರವಾಸ ಮುಂತಾದ ದೇಶೀಯ ಪ್ರವಾಸಗಳಿಗೂ ಈ ಕೊಡುಗೆ ಲಭ್ಯವಿದೆ. ಅಲ್ಲದೇ ದೇಶ, ವಿದೇಶದಾದ್ಯಂತ ಸುಮಾರು 350ಕ್ಕೂ ಅಧಿಕ ಪ್ರೇಕ್ಷಣೀಯ ಪ್ರವಾಸ ಪ್ಯಾಕೇಜ್‌ಗಳನ್ನು ಕೂಡಾ ಪ್ರವಾಸ
ಪ್ರಿಯರ ಅನುಕೂಲಕ್ಕೆ ತಕ್ಕಂತೆ ರೂಪಿಸಿ ಸಂಯೋಜಿಸಲಾಗುವುದು.
ಪ್ರವಾಸ ಪ್ರಿಯರು ಈ ಪ್ರವಾಸ ಮೇಳದಲ್ಲಿ ಭಾಗವಹಿಸಿ, ಲಭ್ಯವಿರುವ ಪ್ರವಾಸ ಪ್ಯಾಕೇಜ್‌ಗಳ ವಿಶೇಷ ಡಿಸ್ಕೌಂಟ್‌ಗಳು, ರಿಯಾಯತಿ ಮತ್ತು ಪೂರ್ವ ನಿರ್ಧರಿತ ಸೌಲಭ್ಯಗಳ ಸದುಪಯೋಗ ಪಡೆಯಬಹುದು ಎಂದು ಅಪ್ನಾ ಹಾಲಿಡೇಸ್‌ನ ಮುಖ್ಯ ಕಾರ್ಯನಿರ್ವಹಣಾಕಾರಿ ಮಂಜುಳಾ ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.