ಕೊರಟಗೆರೆ: ನಾಗರಕಟ್ಟೆಯ 5ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ
Team Udayavani, Jan 30, 2023, 9:27 PM IST
ಕೊರಟಗೆರೆ: ಪಟ್ಟಣದ ಮಧ್ಯ ಭಾಗದಲ್ಲಿರುವ ನಾಗರಕಟ್ಟೆಯ ಐದನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಅದ್ದೂರಿಯಿಂದ ನೂರಾರು ಭಕ್ತಾದಿಗಳು ನೆರವೇರಿಸಿದರು .
ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ ಮಾತನಾಡಿ ಈ ನಾಗರಕಟ್ಟೆಯು ಪುರಾತನ ಕಾಲದಿಂದಲೂ ಇಲ್ಲಿ ಇದೆ. ಬೇಡಿ ಬಂದ ಭಕ್ತರ ಬೇಡಿಕೆಯನ್ನು ಈಡೇರಿಸಿರುವ ಉದಾಹರಣೆಗಳು ಇಲ್ಲಿರುವ ಜನರು ಹೇಳುತ್ತಾರೆ. ಆದರೆ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೆ ಕುಂಠಿತಗೊಂಡಿದ್ದ ನಾಗರಕಟ್ಟೆಯು ಇತ್ತೀಚಿಗೆ ಕೆಲಸದಲ್ಲಿ ಯುವಕರ ಕೆಲಸದಿಂದ ಈ ನಾಗರ ಕಟ್ಟೆಯು ಅಭಿವೃದ್ಧಿ ಹೊಂದಿದ್ದು ಸುಮಾರು ಐದು ವರ್ಷಗಳಿಂದ ಇಲ್ಲಿನ ಕೆಲ ಯುವಕರು ಒಂದು ಸಮಿತಿಯನ್ನು ರಚಿಸಿಕೊಂಡು ನಾಗರಕಟ್ಟೆಯನ್ನು ಅಭಿವೃದ್ಧಿಪಡಿಸಿ ಇಂದು 5ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಅದ್ದೂರಿಯಿಂದ ನಡೆಸಿದ್ದಾರೆ. ಅವರೆಲ್ಲರಿಗೂ ಭಗವಂತ ಒಳ್ಳೆಯದನ್ನು ಉಂಟುಮಾಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಪವನ್ ಕುಮಾರ್ ಮಾತನಾಡಿ ನಾವು ಚಿಕ್ಕಂದಿನಿಂದಲೂ ನೋಡುತ್ತಿದ್ದೆವು. ಈ ನಾಗದೇವತೆಯನ್ನು ನಂಬಿ ಬಂದ ಭಕ್ತರನ್ನು ಎಂದೂ ಕೈ ಬಿಟ್ಟಿಲ್ಲ. ಬೇಡಿ ಬಂದ ಭಕ್ತರ ಬೇಡಿಕೆಗಳನ್ನು ಈಡೇರಿಸಿರುವ ನಾಗದೇವತೆ ಇಲ್ಲಿ ನೆಲೆಸಿದ್ದಾಳೆ ಎಂದು ಭಕ್ತರ ನಂಬಿಕೆ ಹಾಗೆ ನಾವೆಲ್ಲರೂ ಇಲ್ಲಿ ಪ್ರತಿ ವರ್ಷವೂ ನಾಗರ ಪಂಚಮಿಯಲ್ಲಿ ವಿಶೇಷ ಪೂಜೆ ಪುರಸ್ಕಾರಗಳನ್ನು ಹಮ್ಮಿಕೊಳ್ಳುತ್ತವೆ. ನಾಡಿನ ಸಮಸ್ತ ಜನತೆಗೆ ನಾಗದೇವತೆಯು ಆಶೀರ್ವದಿಸಲಿ ಎಂದು ಕೇಳಿಕೊಳ್ಳುತ್ತೇನೆ.
ಭಕ್ತಾದಿ ಮೆಡಿಕಲ್ ನಂಜುಂಡ ಶೆಟ್ಟಿ ಮಾತನಾಡಿ ಐದು ವರ್ಷಗಳ ಹಿಂದೆ ನಾಗರಕಟ್ಟೆಯನ್ನು ಪ್ರತಿಷ್ಠಾಪನೆ ಮಾಡಲಾಯಿತು.ಎರಡೂ ವರ್ಷಗಳಿಂದ ಕೊರೋನ ಇದ್ದ ಕಾರಣ ಸಾಂಕೇತಿಕವಾಗಿ ಪೂಜೆ ನೆರವೇರಿಸಿದೇವು. ಇದೀಗ ಅಂತಹ ಮಹಾಮಾರಿಯಿಂದ ದೂರವಾಗಿ ಜನರು ಸಂತೋಷದಿಂದ ಇದ್ದಾರೆ ಅದಕ್ಕಾಗಿ ನಾಡಿನ ಸಮಸ್ತ ಜನರ ಆರೋಗ್ಯವನ್ನು ಕಾಪಾಡುವಂತೆ ನಾಗದೇವತೆಯ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಅದ್ದೂರಿನಿಂದ ನೆರವೇರಿಸುತ್ತೇವೆ .ನಾಡಿನ ಸಮಸ್ತ ಜನತೆಯ ಆರೋಗ್ಯವನ್ನು ದೇವರು ಕಾಪಾಡಲಿ ಎಂದರು.
ಹನುಮಂತನಾಥ ಸ್ವಾಮೀಜಿ ಮಾತನಾಡಿ, ಲೋಕ ಕಲ್ಯಾಣ ಭಕ್ತರಿಂದ ನಾಗದೇವತೆಗಳ ಪ್ರತಿಮೆಗೆ ಕ್ಷೀರಾಭಿಷೇಕ ಪುಷ್ಪಾರ್ಚನೆ ವಿಶೇಷ ಅಲಂಕಾರದೊಂದಿಗೆ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಈ ನಾಗದೇವತೆಯು ಬೇಡಿ ಬಂದ ಭಕ್ತರ ಎಲ್ಲ ಈಡೇರಿಕೆಗಳನ್ನು ಈಡೇರಿಸಲಿ. ಹಾಗೂ ನಾನು ಸಮಸ್ತ ಜನತೆಯ ಆರೋಗ್ಯವನ್ನು ಕಾಪಾಡಲಿ. ಇಂತಹ ಧಾರ್ಮಿಕ ಕಾರ್ಯಗಳನ್ನು ಅತಿ ಹೆಚ್ಚು ಹೆಚ್ಚು ಜನರು ಮಾಡುವಂತಾಗಲಿ. ದೆವರನ್ನು ನಂಬಿ ಕೆಲಸ ಕಾರ್ಯಗಳನ್ನು ಮಾಡಿದರೆ ಆ ಕೆಲಸಗಳು ಅಭಿವೃದ್ಧಿ ಹೊಂದುತ್ತವೆ. ನಾವು ಮಾಡುವ ಕೆಲಸ ಕಾರ್ಯಗಳನ್ನು ದೇವರಂತೆ ನಂಬಿ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕು. ಆಗ ನಮ್ಮ ಕೆಲಸಗಳು ಯಶಸ್ಸನ್ನು ಕಾಣುತ್ತದೆ ಎಂದರು.
ಈ ಸಂದರ್ಭದಲ್ಲಿ ಎಂ ಜಿ ಜ್ಯೂ ವೆಲ್ಸ್ ಮಾಲಕ ಬದ್ರಿನಾಥ್, ನಂಜುಂಡಿ ಮೆಡಿಕಲ್ ಮಾಲಿಕ ಶಾಲಿನಿ ನಂಜುಂಡಿ, ಮಯೂರ ಮಂಜುಳಾ ಗೋವಿಂದರಾಜು, ಮುಖಂಡ ರಮೇಶ್, ಪಟ್ಟಣ ಪಂಚಾಯತಿ ಸದಸ್ಯ ಲಕ್ಷ್ಮಿನಾರಾಯಣ್, ನಾಗರಕಟ್ಟೆ ಸಮಿತಿಯ ಜೈರಾಮ್, ಎಸ್ ಆರ್ ಕೆ ರಾಮಣ್ಣ, ಮಂಜುನಾಥ್, ನಾರಾಯಣಪ್ಪ,ರಂಗರಾಜು,ಬೇಕರಿ ಮೋಹನ್ ಸೇರಿದಂತೆ ಅಪಾರ ಭಕ್ತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.