ಪಕ್ಷ  ಸಂಘಟನೆಗೆ ಒತ್ತು ನೀಡಿ: ಧ್ರುವ


Team Udayavani, Jan 31, 2023, 10:39 AM IST

ಪಕ್ಷ  ಸಂಘಟನೆಗೆ ಒತ್ತು ನೀಡಿ: ಧ್ರುವ

ಮೈಸೂರು: ವಿಧಾನಸಭೆ ಚುನಾವಣೆಗೆ 90 ದಿನಗಳಷ್ಟೇ ಬಾಕಿಯಿದ್ದು, ಪಕ್ಷದಲ್ಲಿ ವಿವಿಧಹುದ್ದೆಗಳನ್ನು ಪಡೆದವರು ಪಕ್ಷ ಸಂಘಟನೆಗೆಮುಂದಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಸಲಹೆ ನೀಡಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಸೇವಾದಳ ಸಮಿತಿ ಜಿಲ್ಲಾಧ್ಯಕ್ಷ, ಹುಣಸೂರು ಕ್ಷೇತ್ರದ 3 ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷರ ಪದಗ್ರಹಣ ಮತ್ತು ಪಕ್ಷಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸದರು, ಶಾಸಕರು ಗುದ್ದಲಿ ಪೂಜೆ, ವಿವಾಹ, ಸಾವುಗಳಿಗೆ ಹೋಗಬೇಕಾಗುತ್ತದೆ. ಕೆಲಸದಒತ್ತಡವೂ ಇರುತ್ತದೆ. ಎಷ್ಟೇ ಒತ್ತಡವಿದ್ದರೂ ಆಡಳಿತ ಮತ್ತು ಪಕ್ಷ ಸಂಘಟನೆಯನ್ನು ತಕ್ಕಡಿಯಂತೆ ಸಮನಾಗಿ ತೂಗಬೇಕು ಎಂದು ಹೇಳಿದರು.

1923ರಲ್ಲಿ ಡಾ.ಹರ್ಡೀಕರ್‌ ಸೇವಾದಳ ಆರಂಭಿಸಿದರು. ಸ್ವಾತಂತ್ರ್ಯ ಹೋರಾಟ, ಪ್ಲೇಗ್‌,ಕಾಲಾರ ಬಂದಾಗ ಸೇವಾದಳ ಸದಸ್ಯರು ಮುಂದೆ ನಿಂತು ಕೆಲಸ ಮಾಡಿದರು. ಇವತ್ತು ಅಖಿಲ ಭಾರತ ಮಟ್ಟದಿಂದಲೂ ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿಲ್ಲ. ವಿದ್ಯಾರ್ಥಿ ಸಂಘಟನೆ, ಮಹಿಳಾ ಕಾಂಗ್ರೆಸ್‌ಗೆ ನೀಡುತ್ತಿರುವ ಆದ್ಯತೆ ಸಿಗುತ್ತಿಲ್ಲ ಎಂದು ತಿಳಿಸಿದರು.

ಬಿಜೆಪಿ, ಆರ್‌ಎಸ್‌ಎಸ್‌ಗಿಂತಲು ಹೆಚ್ಚು ಕೆಲಸ ಮಾಡಿ: ಆರೆಸ್ಸೆಸ್‌ ಸಂಚಾಲಕರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚು ಕೆಲಸವನ್ನು ನಾವು ಮಾಡಬೇಕು. ಬಿಜೆಪಿಯವಿದ್ಯಾರ್ಥಿ ಸಂಘಟನೆ ಕಾರ್ಯಕ್ರಮಕ್ಕೆ ಅಮಿತ್‌ ಶಾ ಬಂದು ಹೋಗಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ ಸಂಘಟನೆಗಳಿಗಿಂತಲೂ ಹೆಚ್ಚು ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂಕಡೆಗಣಿಸಬಾರದು. 2014ರ ಸಂಸತ್‌ ಚುನಾವಣೆಯಲ್ಲಿ 1.40 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದೇವೆ. ಅತಿಯಾದ ಆತ್ಮವಿಶ್ವಾಸದಿಂದ 2019ರ ಚುನಾವಣೆಯಲ್ಲಿ 1700 ಮತಗಳಿಂದ ಸೋಲಬೇಕಾಯಿತು. ಹಾಗಾಗಿ ಮುಂಬರುವ ಚುನಾವಣೆ ಗಂಭೀರವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಬೂತ್‌ ಸಮಿತಿ ರಚಿಸಬೇಕು: ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ನೂರು ಜನರಿಗೆ ಆದೇಶ ಕೊಡಬಹುದು.ಬೂತ್‌ ಸಮಿತಿಗಳನ್ನು ರಚಿಸಬೇಕು. ಬಿಎಲ್‌ಎ2 ನೇಮಕ ಮಾಡಿ ಕೆಪಿಸಿಸಿ ವೆಬ್‌ಸೈಟ್‌ಗೆ ದಾಖಲಿಸಬೇಕು. ಪ್ರತಿ ಮನೆ ಮನೆಗೆ ಭೇಟಿ ನೀಡಿಪರಿಷ್ಕರಣೆ ಮಾಡಬೇಕು. ವ್ಯಾಟ್ಸಾಪ್‌ ಗ್ರೂಪ್‌ರಚಿಸಿ, ಗುರುತಿನ ಚೀತಿಯನ್ನು ನೀಡಬೇಕು ಎಂದು ಮುಖಂಡರಿಗೆ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷವನ್ನು ಶಿಸ್ತಿನಿಂದ ಮುನ್ನಡೆಸಲು ಸೇವಾದಳ ಅವಶ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸೇವಾದಳಕ್ಕೆ ಕೊಡುವ ಪ್ರಾಮುಖ್ಯತೆ ಕಡಿಮೆಯಾಗಿದೆ ಎಂದರು.

ಅಧಿಕಾರ ಸ್ವೀಕಾರ: ಜಿಲ್ಲಾ ಕಾಂಗ್ರೆಸ್‌ ಸೇವಾದಳದ ನೂತನ ಅಧ್ಯಕ್ಷರಾಗಿ ಸಾ.ಮ.ಯೋಗೇಶ್‌,ಹುಣಸೂರು ಕ್ಷೇತ್ರದ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷರಾಗಿ ವಕೀಲ ಪುಟ್ಟರಾಜು,ನಾರಾಯಣ, ಹುಣಸೂರು ಗ್ರಾಮಾಂತರಕಾರ್ಯಾಧ್ಯಕ್ಷರಾಗಿ ಕೆ.ಎಸ್‌.ಬಸವರಾಜು ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಕಾಂಗ್ರೆಸ್‌ ಹಿರಿಯ ಕಾರ್ಯದರ್ಶಿಯಾಗಿ ಎಸ್‌.ಎಸ್‌.ಸಂದೇಶ್‌, ಪಿರಿಯಾಪಟ್ಟಣ ಬ್ಲಾಕ್‌ಕಾಂಗ್ರೆಸ್‌ ಉಪಾಧ್ಯಕ್ಷರಾಗಿ ತಮ್ಮಯ್ಯಣ್ಣ, ಜಿಲ್ಲಾಮಾಧ್ಯಮ ವಿಭಾಗದ ಕಾರ್ಯದರ್ಶಿಗಳಾಗಿರವಿಪ್ರಸಾದ್‌, ಮನೋಜ್‌, ಶಶಿಕುಮಾರ್‌, ಎಚ್‌. ಆರ್‌.ಸೋಮಶೇಖರ್‌ ಅಧಿಕಾರ ಸ್ವೀಕರಿಸಿದರು.

ಪಕ್ಷ ಸೇರ್ಪಡೆ: ಹುಣಸೂರು ನಗರಸಭಾ ಮಾಜಿ ಸದಸ್ಯ ಶಫಿ ಅಹಮದ್‌, ಹುಣಸೂರಿನ ಸ್ಟೂಡೆಂಟ್‌

ಫೆಡರೇಷನ್‌ ವಿದ್ಯಾರ್ಥಿಯ ಸಂಘಟನೆಯ ರಫೀಕ್‌ ಅಲಿ, ಕಿರಣ್‌, ದುರ್ಗೇಶ್, ಹರೀಶ್‌, ರವಿ,ಸತೀಶ್‌ ಮುಂತಾದವರನ್ನು ಆರ್‌.ಧ್ರುವನಾರಾಯಣ ಅವರು ಪಕ್ಷದ ಧ್ವಜ ನೀಡಿಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.ಶಾಸಕ ಎಚ್‌.ಪಿ.ಮಂಜುನಾಥ್‌, ಕೆಪಿಸಿಸಿ ಸದಸ್ಯದೊಡ್ಡಸ್ವಾಮಿಗೌಡ, ಸಂಯೋಜಕ ಭಾಸ್ಕರ್‌, ಮುಖಂಡರಾದ ಶಿವಕುಮಾರ್‌, ಎಡತಲೆ ಮಂಜುನಾಥ್‌ ಸೇರಿದಂತೆ ಅನೇಕರು ಇದ್ದರು.

ಜೆಡಿಎಸ್‌ ಕುಟುಂಬಕ್ಕೆ ಸೀಮಿತವಾದ ಪಕ್ಷ :

ಮೈಸೂರು: ಜೆಡಿಎಸ್‌ ಅಂದ್ರೆ ಅದೊಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಅಪ್ಪ,ಮಕ್ಕಳು, ಮೊಮ್ಮಕ್ಕಳು ಈಗ ಜೊತೆಗೆಸೊಸೆಯಂದಿರು ಕೂಡ ರಾಜಕೀಯಕ್ಕೆ ಬಂದಿದ್ದಾರೆ. ಈಗ ಅವರ ಕುಟುಂಬದಲ್ಲೇ ಟಿಕೆಟ್‌ಗಾಗಿ ಕಿತ್ತಾಟ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌ ಧ್ರುವನಾರಾಯಣ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರುಶಾಸಕರು, ಮಕ್ಕಳಿಬ್ಬರಲ್ಲಿ ಒಬ್ಬ ಸಂಸದ, ಮತ್ತೂಬ್ಬ ಪರಿಷತ್‌ ಸದಸ್ಯ, ಈಗ ಭವಾನಿ ರೇವಣ್ಣ ಅವರು ಎಂಎಲ್‌ಎ ಆಗಲು ಟಿಕೆಟ್‌ ಬಯಸಿದ್ದಾರೆ. ಇದರಿಂದ ಆ ಭಾಗದಜೆಡಿಎಸ್‌ ಮುಖಂಡರು ಬೇಸರಗೊಂಡು ನಮ್ಮ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಆಭಾಗದ ಹಾಲಿ ಶಾಸಕರಾದ ಶಿವಲಿಂಗೇಗೌಡ,ಗುಬ್ಬಿ ಶ್ರೀನಿವಾಸ್‌ ಮತ್ತು ದೇವೇಗೌಡಅತ್ಯಾಪ್ತರಾದ ವೈ.ಎಸ್‌.ವಿ ದತ್ತ ಅವರು ಈ ಬೆಳವಣಿಗೆಗಳನ್ನು ನೋಡಿ ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ ಎಂದರು.

ಮಾಜಿ ಶಾಸಕ ವಾಸು ಅವರ ಮಕ್ಕಳು ಬಿಜೆಪಿಗೆ ಹೋಗಿದ್ದು ನನಗೆ ವೈಯಕ್ತಿಕವಾಗಿಬೇಸರ ತಂದಿದೆ. ಅವರ ತಂದೆ ಸುಮಾರು40 ವರ್ಷಗಳಿಂದ ಕಾಂಗ್ರೆಸ್‌ ಕಟ್ಟಾಳಾಗಿದ್ದವರು. ಅವರನ್ನ ಲೆಕ್ಕಿಸದೆ ಇಂದು ಅವರಮಕ್ಕಳು ಬಿಜೆಪಿಗೆ ಸೇರಿರುವುದು ಸರಿಯಲ್ಲ.ಪಕ್ಷದ ಒಂದು ತತ್ವ ಸಿದ್ಧಾಂತ ಇಟ್ಟುಕೊಂಡುಬಂದ ವಾಸು ಪುತ್ರರು ಏಕಾಏಕಿ ಪಕ್ಷತೊರೆಯುವ ಕೆಲಸ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.