ಕಿರಿಕ್ ಪಾರ್ಟಿ-2 ಯಾವಾಗ?: ಅಭಿಮಾನಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ರಕ್ಷಿತ್
Team Udayavani, Jan 31, 2023, 11:21 AM IST
“ಕಿರಿಕ್ ಪಾರ್ಟಿ-2′ ಯಾವಾಗ? – ಹೀಗೊಂದು ಪ್ರಶ್ನೆ ರಕ್ಷಿತ್ ಶೆಟ್ಟಿ ಅವರಿಗೆ ಎಲ್ಲಿ ಹೋದರೂ ಎದುರಾಗುತ್ತಿತ್ತು. ಅದರಲ್ಲೂ ಇತ್ತೀಚೆಗಂತೂ ಈ ಪ್ರಶ್ನೆಯನ್ನು ಕೇಳುವವರ ಸಂಖ್ಯೆ ಕೂಡಾ ಹೆಚ್ಚಾಗಿತ್ತು. ಅದೇ ಕಾರಣದಿಂದ ರಕ್ಷಿತ್ ಶೆಟ್ಟಿ ಟ್ವೀಟ್ ಮೂಲಕ, “ಕಿರಿಕ್’ ಪ್ರಶ್ನೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕೆ “ಕಿರಿಕ್ ಪಾರ್ಟಿ-2′ ಮಾಡುವ ಯಾವ ಯೋಚನೆಯೂ ಇಲ್ಲ ಎನ್ನುವ ಜೊತೆಗೆ ತಮ್ಮ ಮುಂದಿನ ಚಿತ್ರಗಳ ಕುರಿತು ಒಂದಷ್ಟು ಅಪ್‌ಡೇಟ್ಸ್ ನೀಡಿದ್ದಾರೆ ರಕ್ಷಿತ್ ಶೆಟ್ಟಿ.
ಸದ್ಯ ರಕ್ಷಿತ್ ಶೆಟ್ಟಿ ನಟನೆಯ “ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಆ ಚಿತ್ರದ ನಂತರ ರಕ್ಷಿತ್ “ರಿಚರ್ಡ್ ಆ್ಯಂಟನಿ’ ಕೈಗೆತ್ತಿಕೊಳ್ಳಲಿದ್ದಾರೆ. ಇದು ಇವರ ಡ್ರೀಮ್ ಪ್ರಾಜೆಕ್ಟ್. ಈ ಚಿತ್ರದ ನಟನೆ, ನಿರ್ದೇಶನ ಎರಡೂ ಜವಾಬ್ದಾರಿ ರಕ್ಷಿತ್ ಅವರದ್ದೇ. ಈಗಾಗಲೇ ಫಸ್ಟ್‌ಲುಕ್ ಟೀಸರ್ ಹಿಟ್‌ಲಿಸ್ಟ್ ಸೇರಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ.
ಇದನ್ನೂ ಓದಿ:ಅಂಡರ್ 19: ಅರ್ಚನಾ ಕುಟುಂಬ ಫೈನಲ್ ನೋಡಲು ನೆರವು ನೀಡಿದ ಪೊಲೀಸ್ ಅಧಿಕಾರಿ
ಈ ಚಿತ್ರದ ಬಳಿಕ ರಕ್ಷಿತ್ “ಪುಣ್ಯಕೋಟಿ’ ಚಿತ್ರದ ಕಡೆಗೆ ಗಮನಹರಿಸಲಿದ್ದಾರೆ. ಇದು ರಕ್ಷಿತ್ ಮಹತ್ವಕಾಂಕ್ಷೆಯ ಸಿನಿಮಾ. ಈ ಚಿತ್ರ ಎರಡು ಭಾಗಗಳಲ್ಲಿ ಬರಲಿದೆ. ಇದನ್ನು ಮುಗಿಸಿಕೊಂಡು ರಕ್ಷಿತ್ ಶೆಟ್ಟಿ “ಎಂ2ಎಂ’ (ಮಾರ್ನಿಂಗ್ ಟು ಮೋಕ್ಷ’) ಚಿತ್ರ ಮಾಡಲಿದ್ದಾರೆ. ಈ ಎಲ್ಲಾ ಕಮಿಟ್ ಮೆಂಟ್‌ಗಳು ಮುಗಿದ ನಂತರ “ಕಿರಿಕ್ ಪಾರ್ಟಿ-2′ ಮಾಡಲಿದ್ದಾರೆ. ಈ ಚಿತ್ರ ಮಾಡುವ ಕುರಿತು ರಕ್ಷಿತ್ ಅವರ ಹೊಸ ಪ್ಲ್ರಾನ್ ಕೂಡಾ ಹೊಂದಿದ್ದಾರಂತೆ. ಅದೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಸದ್ಯ ಬಿಡುಗಡೆಗೆ ಸಿದ್ಧವಾಗಿರುವ “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಔಟ್ ಅಂಡ್ ಔಟ್ ಲವ್‌ಸ್ಟೋರಿಯಾಗಿದ್ದು, ಈ ಚಿತ್ರದಲ್ಲಿ ರಕ್ಷಿತ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಕ್ಷಿತ್ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದು, ಹೇಮಂತ್ ಕುಮಾರ್ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.